Home » ಲೈವ್ ನ್ಯೂಸ್ » ಮತದಾರರ ಕರಡು ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಸಲು ಅವಕಾಶ

ಮತದಾರರ ಕರಡು ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಸಲು ಅವಕಾಶ

ಬೀದರ,26.ಆಗಸ್ಟ್26 : ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ  Special Intensive Revision (S.I.R) ಅರ್ಹತಾ 2026ರ ಅಕ್ಟೋಬರ್ 1 ಕ್ಕೆ ಸಂಬoಧಿಸಿದoತೆ ಮಾನ್ಯ ಭಾರತ ಚುನಾವಣಾ ಆಯೋಗದಿಂದ ಹೊರಡಿಸಲಾಗುವ ವೇಳಾಪಟ್ಟಿಯಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 2026ರ ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ ಎಂದು ಬೀದರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.

ಈ ಕರಡು ಮತದಾರರ ಪಟ್ಟಿಯಲ್ಲಿ ಅನಮೋಲಿ ಎಂದು ಗುರುತಿಸಲಾದ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಲಭ್ಯ ಇರುವ ಹೆಸರು ಮತ್ತು ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ಹೆಸರುಗಳಲ್ಲಿ ವ್ಯತ್ಯಾಸಗಳು ಇರುವಂತಹ ಮತ್ತು 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ  (No Mapping) ಮತದಾರರಿಗೆ 2026ರ ಆಗಸ್ಟ್ 24 ರಿಂದ ನೋಟಿಸುಗಳನ್ನು ಸರಬರಾಜು ಮಾಡಿ ಮತದಾರರ ನೋಂದಣಾಧಿಕಾರಿಗಳ ಹಂತದಲ್ಲಿಯೇ ವಿಚಾರಣೆಗೆ ಕರೆದು ಸದರಿ ಅನಮೋಲಿ ಮತದಾರರೆಂದು ಗುರುತಿಸಿರುವುದನ್ನು ವಿಲೆಗೊಳಿಸಲಾಗುವುದು.

     ಕಳೆದ  SIR- 2002ರ ಮತದಾರರ ಪಟ್ಟಿಯಲ್ಲಿನ ವಿವರಗಳು ಲಭ್ಯವಿಲ್ಲದಿದ್ದರೆ ಅಥವಾ ಡೇಟಾಬೇಸ್‌ಗೆ ಹೊಂದಿಕೆಯಾಗದೇ ಇರುವ ಮತದಾರರಿಗೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸಂಬoಧಪಟ್ಟ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯವರು ನೋಟಿಸ್ ನೀಡುತ್ತಾರೆ.

ಸಂಬAಧಪಟ್ಟ ಮತದಾರರು ನೋಟಿಸ್ ಸ್ವೀಕರಿಸಿದ ಬಳಿಕ, ನೋಟಿಸಿನಲ್ಲಿ ನೀಡಿರುವ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಗಳಲ್ಲಿ ಹಾಜರಾಗಿದ್ದು ಕೆಳಗಿನ ವರ್ಗಗಳಿಗೆ ಅನುಗುಣವಾಗಿ ದಾಖಲೆಗಳನ್ನು ತೆಗೆದುಕೊಂಡು ಸಲ್ಲಿಸಬೇಕು.

ಭಾರತದಲ್ಲಿ 01.07.1987 ಕ್ಕಿಂತ ಮೊದಲು ಜನಿಸಿದ್ದರೆ, ಸ್ವಂತ  (Self)  ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ಕೆಳಗಿನ ಪಟ್ಟಿಯಲ್ಲಿನ ಯಾವುದೇ ಒಂದು ದಾಖಲೆ ಸಲ್ಲಿಸಬೇಕು. ಭಾರತದಲ್ಲಿ 01.07.1987 ರಿಂದ 02.12.2004 ರ ನಡುವೆ ಜನಿಸಿದ್ದರೆ, ಸ್ವಂತ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುವಡಿಸುವ ಯಾವುದೇ ದಾಖಲೆ ಸಲ್ಲಿಸಬೇಕು. ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಸಲ್ಲಿಸಬೇಕು. ಭಾರತದಲ್ಲಿ 02.12.2004 ನಂತರ ಜನಿಸಿದ್ದರೆ ಸ್ವಂತ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಸಲ್ಲಿಸಬೇಕು.

ತಂದೆಯ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ದಾಖಲೆ ಸಲ್ಲಿಸಬೇಕು. ತಾಯಿಯ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸುವ ದಾಖಲೆ ಸಲ್ಲಿಸಬೇಕು. ಪೋಷಕರಲ್ಲಿ ಯಾರಾದರೂ ಭಾರತೀಯರಲ್ಲದಿದ್ದರೆ, ನಿಮ್ಮ ಜನನ ಸಮಯದಲ್ಲಿ ಅವರ ಮಾನ್ಯ ಪಾಸ್ ಪೋರ್ಟ್ ಮತ್ತು ವೀಸಾ ಪ್ರತಿಯನ್ನು ಸಲ್ಲಿಸಬೇಕು. ಭಾರತ ಹೊರಗೆ ಜನಿಸಿದ್ದರೆ, ಭಾರತೀಯ ಮಿಷನ್  (Indian Mission Abroad)     ನೀಡಿದ ಜನನ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸುವುದು.

ದಾಖಲೆಗಳ ಪಟ್ಟಿ ಕೇಂದ್ರ/ರಾಜ್ಯ ಸರ್ಕಾರ/PSU ಉದ್ಯೋಗಿ ಅಥವಾ ನಿವೃತ್ತ ಉದ್ಯೋಗಿಗೆ ನೀಡಿದ ಗುರುತಿನ ಚೀಟಿ ಅಥವಾ ಪಿಂಚಣಿ ಆದೇಶ. 01.07.1987 ಕ್ಕಿಂತ ಮೊದಲು ಸರ್ಕಾರ/ಸ್ಥಳೀಯ ಸಂಸ್ಥೆಗಳು/ಬ್ಯಾAಕ್/ಅAಚೆ ಕಚೇರಿ/ LIC/PSU  ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರ. ಅಧಿಕಾರಿಯಿಂದ ನೀಡಲಾದ ಜನನ ಪ್ರಮಾಣಪತ್ರ. ಪಾಸ್‌ಪೋರ್ಟ್.ಮಾನ್ಯ ಶಿಕ್ಷಣ ಮಂಡಳಿ/ವಿಶ್ವವಿದ್ಯಾಲಯ ನೀಡಿದ  SSLC  /ಶೈಕ್ಷಣಿಕ ಪ್ರಮಾಣಪತ್ರ. ಶಾಶ್ವತ ನಿವಾಸ ಪ್ರಮಾಣಪತ್ರ.

ಅರಣ್ಯ ಹಕ್ಕು ಪ್ರಮಾಣಪತ್ರ.  OBC/SC/STಅಥವಾ ಜಾತಿ ಪ್ರಮಾಣಪತ್ರ. ರಾಷ್ಟಿçÃಯ ನಾಗರಿಕರ ನೋಂದಣಿ  (NRC)ದಾಖಲೆ (ಇದ್ದರೆ). ಸರ್ಕಾರಿ ಅಧಿಕಾರಿಗಳು ನಿರ್ವಹಿಸುವ ಕುಟುಂಬ ನೋಂದಣಿ ದಾಖಲೆ. ಸರ್ಕಾರದಿಂದ ನೀಡಿದ ಜಮೀನು/ಮನೆ ಹಂಚಿಕೆ ಪ್ರಮಾಣಪತ್ರ. ಆಧಾರ್‌ಗಾಗಿ, ಆಯೋಗದ ನಿರ್ದೇಶನಗಳ ಪ್ರಕಾರ  (Letter No. 23/2025-ERS/Vol.II dated 09.09.2025, Annexure II ಅನ್ವಯಿಸುತ್ತದೆ. 

ಈ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗದೇ ಉಳಿದಿರುವ ಮತದಾರರು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಲಾದ ದಿನಾಂಕ: 24-08-2026 ರಿಂದ 23-09-2026ರ ಒಳಗಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಿಗದಿತ ನಮೂನೆ ನಮೂನೆ-6 ಮತ್ತು  Declaration form ನ್ನು ಭರ್ತಿಮಾಡಿ, ಈ ಮೇಲೆ ತಿಳಿಸಿರುವಂತೆ ಮೂಲ ದಾಖಲಾತಿಗಳನ್ನು ಲಗತ್ತಿಸಿ.

ಸಲ್ಲಿಸುವುದರ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗುವುದು ಹಾಗೂ ಆನ್‌ಲೈನ್ ವೆಬ್‌ಸೈಟ್ ಆದ  Citizen Service Portal (https://voters.eci.gov.in/)  ನಲ್ಲಿಯು ಸಹ ನಮೂನೆ-6 ಮತ್ತು  Declaration form ಮಾಡುವುದರ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.

2026ರ ಸೆಪ್ಟೆಂಬರ್ 23ರ ಒಳಗೆ ಸಲ್ಲಿಕೆಯಾದ ಆಕ್ಷೇಪಣೆ, ಅರ್ಜಿಗಳನ್ನು 2026ರ ಆಗಸ್ಟ್ 24 ರಿಂದ  2026ರ ಅಕ್ಟೋಬರ್ 22ರ ಒಳಗೆ ವಿಲೆವಾರಿ ಮಾಡಿ, 2026ರ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology