Home » ಲೈವ್ ನ್ಯೂಸ್ » ಇಂದರಗಿ ಗ್ರಾಮದ ಹೊಸಕೆರೆ ಪುನಶ್ಚೇತನ ಕಾಮಗಾರಿ ಪರಿಶೀಲನೆ!

ಇಂದರಗಿ ಗ್ರಾಮದ ಹೊಸಕೆರೆ ಪುನಶ್ಚೇತನ ಕಾಮಗಾರಿ ಪರಿಶೀಲನೆ!

ವಿಬಿಜಿ ರಾಮ್ ಜೀ ಯೋಜನೆಯಡಿ ಪ್ರತಿ ಕುಟುಂಬಕ್ಕೆ 125 ದಿನಗಳ ಕೂಲಿ ಕೆಲಸ: ಕೊಪ್ಪಳ ತಾ.ಪಂ. ಸಹಾಯಕ ನಿರ್ದೇಶಕಿ ಸೌಮ್ಯ ಕೆ.

ಕೊಪ್ಪಳ.26.ಆಗಸ್ಟ್ 26: ವಿಕಸಿತ ಭಾರತ ಜಿರಾಮ್ ಜೀ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸ್ಥಳೀಯವಾಗಿ 125 ದಿನಗಳ ಕೂಲಿ ಕೆಲಸ ನಿರ್ವಹಿಸಲು ಅವಕಾಶವಿದ್ದು, ಪ್ರತಿ ಕುಟುಂಬವು 125 ದಿನಗಳ ಕೂಲಿ ಕೆಲಸ ನಿರ್ವಹಿಸಬೇಕೆಂದು ತಾಲೂಕ ಪಂಚಾಯತ ಸಹಾಯಕ ನಿರ್ದೇಶಕಿ ಸೌಮ್ಯ ಕೆ ಕರೆ ನೀಡಿದರು.


ಮಂಗಳವಾರದoದು ಇಂದರಗಿ ಗ್ರಾಮ ಪಂಚಾಯತಿ ವತಿಯಿಂದ ಇಂದರಗಿ ಗ್ರಾಮದ ಹೊಸಕೆರೆ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಯ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.


ವಿಬಿಜಿ ರಾಮ್ ಜೀ ಯೋಜನೆಯು ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗದಂತೆ ತಡೆದು ಒಂದು ಕುಟುಂಬಕ್ಕೆ ಸ್ಥಳೀಯವಾಗಿ 125 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶ ಹೊಂದಿದೆ. ಪುರುಷ-ಮಹಿಳೆಯರಿಗೆ ಸಮಾನ ಕೂಲಿ, ಯೋಜನೆಯ ಮೂಲ ಉದ್ದೇಶಗಳಾದ ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ, ಜಲಾನಯನ ಪ್ರದೇಶದ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನ ಪ್ರಮುಖ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತದೆ.

ವಿಕಸಿತ ಗ್ರಾಮ ಪಂಚಾಯತಿಯಿAದ ವಿಕಸಿತ ಭಾರತದೆಡೆಗೆ ಯೋಜನೆಯ ಉದ್ದೇಶ ಈಡೇರಿಸುವುದಾಗಿದೆ. ಪ್ರಸಕ್ತದಲ್ಲಿ ಪ್ರತಿ ಮಾನವ ದಿನಕ್ಕೆ ಕೂಲಿ ಹಣ ರೂ.382/- ನಿಗದಿಪಡಿಸಲಾಗಿದ್ದು, ಎಲ್ಲರೂ ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಿದರೆ ಕೂಲಿ ಹಣವನ್ನು ಅಳತೆಗೆ ಅನುಗುಣವಾಗಿ ಪಾವತಿಸಲಾಗುತ್ತದೆ.

318 ಕಾಮಗಾರಿಗಳಲ್ಲಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರು ಶೆಡ್, ಮೇಕೆಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಜಮೀನು ಇರದಿದ್ದಲ್ಲಿ ಗ್ರಾಮ ಪಂಚಾಯತಿಯಿoದ ನೀಡುವ ಸಾಮೂಹಿಕ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಕೂಲಿ ಹಣ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಹೊಸದಾಗಿ ನೋಂದಣಿಯಾದ ಕುಟುಂಬಗಳಿಗೆ ಗ್ಯಾರಂಟಿ ಕಾರ್ಡ್ಗಳನ್ನುವಿತರಿಸಲಾಗುತ್ತದೆ ಎಂದು ಅವರು ಯೋಜನೆಯ ಮಾಹಿತಿ ನೀಡಿದರು.


ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರಸ್ತುತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾಬ್‌ಕಾರ್ಡ್ ಮೇಳ ಜರುಗುತ್ತಿದ್ದು, ಇಲ್ಲಿಯವರೆಗೆ ವಿಬಿಜಿ ರಾಮ್ ಜೀ ಯೋಜನೆಯಡಿ ನೋಂದಣಿಯಾಗದೇ ಉಳಿದುಕೊಂಡಿರುವ ಕುಟುಂಬಗಳಿಗೆ ಜಾಬ್‌ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ, ಇಕೆವೈಸಿ ಪೂರೈಸಿ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ಗಳನ್ನು ಪಡೆಯಬಹುದಾಗಿದೆ ಎಂದರು.


ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಯಮನೂರ, ತಾಂತ್ರಿಕ ಸಹಾಯಕ ಗುರುಲಿಂಗಪ್ಪ, ಗ್ರಾಮ ಕಾಯಕ ಮಿತ್ರ ಯಮುನಾ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.

Author

ಪ್ರಮುಖ ಸುದ್ದಿ

Stock market

Astrology