ರಾಜ್ಯದಲ್ಲಿ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸತತ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರ ಸೇವೆ ಸಲ್ಲಿಸಿ ಪ್ರತಿ ವರ್ಷಾ ಎಷ್ಟೋ ಜನ ನಿವೃತ್ತಿ ಆಗಿದ್ದಾರೆ ಆದರೆ ಸರ್ಕಾರ ಇವರಿಗೆ ಯಾವುದೇ ವಿಶೇಷ ಕಾನೂನು ಮಾಡಿ ಇವರಿಗೆ ಖಾಯಂ ಮಾಡಲಿಲ್ಲ . ಇವರ ಮಕ್ಕಳ ಭವಿಷ್ಯ ಏನು ? ಈ ಸಮಸ್ಯೆಗಳನ್ನು ಬಗೆಹರಿಸಿ, ಸೇವೆಯನ್ನು ಕೂಡಲೇ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಅಥಣಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಸಹಕಾರ ಸಚಿವ ಲಕ್ಷ್ಮಣ ಸವದಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಸಚಿವರು ಮಾತನಾಡಿ, ಅತಿಥಿ ಉಪನ್ಯಾಸಕರ ಸಂಕಷ್ಟಗಳ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
ಒಕ್ಕೂಟದ ಪ್ರಮುಖ ಪ್ರೊ.ಪಿ.ಎಲ್. ಪೂಜಾರಿ ಮಾತನಾಡಿ, ರಾಜ್ಯದಲ್ಲಿ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ೨೦ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ನಿವೃತ್ತಿಗೆ ಬಂದಿದ್ದರೂ ಯಾವುದೇ ಭದ್ರತೆ ಇಲ್ಲ. ಸರ್ಕಾರ ಮಾನವೀಯ ದೃಷ್ಟಿಯಿಂದ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ಸದಸ್ಯರಾದ ಶ್ರೀಶೈಲ ದೇವರೆಡ್ಡಿ, ಬಿ.ಆರ್.ಮುಗ್ಗನವರ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಡಾ.ವಿಜಯ ಕಾಂಬಳೆ, ಡಾ.ರಾಜೇಂದ್ರ ಗೊಂಧಳೆ, ಡಾ.ಅಪ್ಪು ಮಾದರ, ಶಿವಾನಂದ ಮಟ್ಟೇಪ್ಪನವರ, ಎನ್.ಎನ್.ನೂಲಿ, ಬಿ.ಎಸ್.ಪಾಟೀಲ, ಆರ್.ಎಸ್.ಗೌರಿ, ಮಂಜುಳಾ ಹಳ್ಳೊಳ್ಳಿ, ಡಾ.ಪದ್ಮಶ್ರೀ, ಜ್ಯೋತಿ ಕೆಂಚಣ್ಣವರ ಇತರರಿದ್ದರು.
ಪ್ರಜಾ ಪ್ರಭಾತ ಸುದ್ಧಿ
ವರದಿಗಾರ: ಡಾ ಮಿಲಿಂದ ಸೋಮವಂಶಿ





Any questions related to ಅತಿಥಿ ಉಪನ್ಯಾಸಕರ ಕಾಯಂಗೊಳಿಸಿ:ಪಿ.ಎಲ್. ಪೂಜಾರಿ?