ಕೊಪ್ಪಳ.20.ಆಗಸ್ಟ್.26: ಕುಕನೂರು ತಾಲೂಕಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗುಡ್ನೆಪ್ಪನ ಮಠದಲ್ಲಿ ಆಗಸ್ಟ್ 21 ರಂದು ಬೆಳಿಗ್ಗೆ 9 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ‘ಅಪ್ರೆಂಟಿಶಿಪ್ ಕ್ಯಾಂಪಸ್ ಸಂದರ್ಶನ ಮೇಳ’ವನ್ನು ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಪ್ರಮುಖ ಸಂಸ್ಥೆಯಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಯಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈ ಸಂದರ್ಶನವನ್ನು ನಡೆಸಲಿದ್ದು,ಇಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್ ಹಾಗೂ ಇಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಗಳಲ್ಲಿ ಉತ್ತೀರ್ಣರಾದ 18 ರಿಂದ 24 ವರ್ಷದ ಅರ್ಹ ಪುರುಷ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ.ಆಯ್ಕೆ ಮಾಡಿಕೊಳ್ಳಲಾಗುವುದು.
ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರೂ. 14,705 ಸ್ಟೆöÊಪೆಂಡ್ ನೀಡಲಾಗುವುದು ಹಾಗೂ ಉಚಿತ ಸಾರಿಗೆ, 2 ಜೋಡಿ ಯುನಿಫಾರ್ಮ್, ಪಿಪಿಇ ಕಿಟ್, ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ (ಉಪಾಹಾರ, ಊಟ ಮತ್ತು 2 ಬಾರಿ ಚಹಾ) ಹಾಗೂ ಭಾನುವಾರದ ರಜೆಯ ಜೊತೆಗೆ ತಿಂಗಳಿಗೆ ಒಂದು ಹೆಚ್ಚುವರಿ ರಜೆ ಲಭ್ಯವಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಪ್ರಮಾಣ ಪತ್ರಗಳ ಮೂಲ ದಾಖಲಾತಿ,ಹಾಗೂ 1 ಅಂಕಪಟ್ಟಿಗಳ ಸೆಟ್ ಝೆರಾಕ್ಸ್ ಪ್ರತಿಗಳು, ಬಯೋಡೇಟಾ ಹಾಗೂ 2 ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬೇಕು. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಆಗಮಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.ನಂ.9740358208, 9964247098, 9481718859, 8618952961 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಆಗಸ್ಟ್ 21 ರಂದು ಕುಕನೂರಿನಲ್ಲಿ ಅಪ್ರೆಂಟಿಶಿಪ್ ಕ್ಯಾಂಪಸ್ ಸಂದರ್ಶನ ಮೇಳ?