Home » ಲೈವ್ ನ್ಯೂಸ್ » ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೊರಟ್ಟಿಗೆ ಸರ್ಕಾರ ನೋಟಿಸ್.

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೊರಟ್ಟಿಗೆ ಸರ್ಕಾರ ನೋಟಿಸ್.

Facebook
X
WhatsApp
Telegram

ಬೆಂಗಳೂರು.30.ಜುಲೈ.26: ರಾಜ್ಯ ಸರ್ಕಾರ ಮುಂಬರುವ ಮುಂಗಾರು ಅಧಿವೇಶನ ಮುಂಚೆ ನೇ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ರಾಜೀನಾಮೆಗೆ ಸರ್ಕಾರ ಸೂಚನೆ ನೀಡಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಹಿನ್ನೆಲೆ ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ಸಭಾಪತಿ  ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ದೂರವಾಣಿ ಕರೆ ಮಾಡುವ ಮೂಲಕ ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಇದಕ್ಕೂ ಮುನ್ನ ವಿಜಯಪುರದಲ್ಲಿ ಮಾತನಾಡಿದ್ದ ಬಸವರಾಜ್ ಹೊರಟ್ಟಿ ಅವರು ನೋಟಿಸ್ ಬಂದಿದ್ದು ನೋಡಿದ್ರೆ, ಒಂದು ಸೆಕೆಂಡ್ನಲ್ಲಿ ರಾಜೀನಾಮೆ ನೀಡ್ತೇನೆ ಎಂದು ಹೇಳಿದ್ದರು.

ವಿಧಾನಪರಿಷತ್ ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಒತ್ತಡ, ಅವಿಶ್ವಾಸ ಮಂಡಿಸುವ ವಿಚಾರವಾಗಿ ಮಾತನಾಡಿದ್ದ ಅವರು, 1956 ರಿಂದ ಇಲ್ಲಿಯವರೆಗೆ ಒಬ್ಬ ಸಭಾಪತಿಯ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ. ಸಭಾಪತಿಗಳು ತಮ್ಮ ಪೂರ್ಣವಾದಂತಹ ಅವಧಿಯನ್ನು ಮುಗಿಸಿದ್ದಾರೆ. ಇವರೇನೋ ಹೊಸದು ತೆಗೆದಿದ್ದಾರೆ ಎಂದು ದಾಖಲೆ ತೋರಿಸಿ ಮಾಧ್ಯಮಗಳಿಗೆ ಬಸವರಾಜ ಹೊರಟ್ಟಿ ಅವರು ಪ್ರತಿಕ್ರಿಯೆ ನೀಡಿದ್ರು.

ಅವಿಶ್ವಾಸ ನಿರ್ಣಯ ಏತಕ್ಕೆ ಮಂಡಿಸ್ತೀರಿ? ಕಾರಣ ಬೇಕಲ್ಲ?
ಮುಂದುವರೆದು ಮಾತನಾಡಿದ ಅವರು, ಇವತ್ತಿನವರೆಗೂ ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ತಂದು ಬದಲು ಮಾಡುವ ಉದಾಹರಣೆಗಳೇ ಇಲ್ಲ. ನಾನು ಇಡೀ ಭಾರತ ದೇಶದಲ್ಲಿಯೇ ಅತ್ಯಂತ ಹಿರಿಯ ಸದಸ್ಯ. ನನ್ನವರು ಚೇಂಜ್ ಮಾಡ್ತಾರೆ ಅಂದರೆ, ಬಹುಮತ ಇದೆ ಅಂತ ಅಂದರೆ ಏನು ಮಾಡ್ತಾರೋ ಮಾಡಲಿ. ನಾನು ಅದರ ಬಗ್ಗೆ ವಿಚಾರ ಮಾಡುವುದಿಲ್ಲ, ನೋಡ್ತೀನಿ.

ಸಿಚುವೇಷನ್ ಮೇಲೆ ನಾನು ತೀರ್ಮಾನ ಮಾಡ್ತೀನಿ. ಅವಿಶ್ವಾಸ ನಿರ್ಣಯ ಏತಕ್ಕೆ ಮಂಡಿಸ್ತೀರಿ? ಕಾರಣ ಬೇಕಲ್ಲ? ಒಂದು ಭ್ರಷ್ಟಾಚಾರ ಮಾಡಿರಬೇಕು, ಪಕ್ಷಪಾತ ಮಾಡಿರಬೇಕು, ಏನಾದರೂ ಆಗಿರಬೇಕು. ಆದ್ರೆ ಏನಂತ ಮಾಡ್ತೀರಿ ಎಂದು ಪ್ರಶ್ನಿಸಿದರು.ಹಿರಿಯ ಎಂಎಲ್ಸಿಗಳು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನದಲ್ಲಿ ಮುಂದುವರೆಯಲಿ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶೇಕಡಾ, 90 ರಷ್ಟು ವಿಧಾನ ಪರಿಷತ್ ಸದಸ್ಯರು ನನ್ನ ಪರವಾಗಿದ್ದಾರೆ. ನನ್ನ ಗೌರವಕ್ಕಿಂತ ದೊಡ್ಡದಲ್ಲ ದೊಡ್ಡದಲ್ಲ ಎಂದು ಹೇಳಿದರು.

ಪ್ರಜಾ ಪ್ರಭಾತ ಸುಧಿ 24X7

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology