Home » ಲೈವ್ ನ್ಯೂಸ್ » ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.27.ಜುಲೈ .26 : ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

     ಬೀದರೆ ಜಿಲ್ಲೆಗೆ ಸಂಘ/ಸoಸ್ಥೆ ಘಟಕದಡಿ ಘಟಕದಡಿ 01 ಕಂಬೈನ್ಸ್ ಹಾರ್ವೇಸ್ಟರ್ ಹಬ್‌ಗೆ ಹಾಗೂ ಸಾಮಾನ್ಯ ವರ್ಗ (ವೈಯಕ್ತಿಕ) ಘಟಕದಡಿ 02 ಶುಗರ್ ಕೇನ್ ಹಾರ್ವೆಸ್ಟರ್ ಹಬ್ಬಗಳಿಗೆ, ಒಟ್ಟು 01 ಕಂಬೈನ್ಸ್ ಹಾರ್ವೇಸ್ಟರ್ ಹಬ್ ಮತ್ತು 02 ಶುಗರ್ ಹಾರ್ವೇಸ್ಟರ್ ಹಬ್‌ಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿರುತ್ತದೆ.

ಪ್ರತಿ “ಶುಗರ್‌ಕೇನ್ ಹಾರ್ವೆಸ್ಟರ್‌ಹಬ್”ನಲ್ಲಿ ಶುಗರ್ ಕೇನ್ ಹಾರ್ವೆಸ್ಟರ್ ದೊಂದಿಗೆ ಅಂತರ ಸಾಲು ರೋಟವೇಟರ್ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಪ್ರತಿ ಕಂಬೈನ್ಸ್ ಹಾರ್ವೆಸ್ಟರ್ ಹಬ್‌ನಲ್ಲಿ ಕಂಬೈನ್ಸ್ ಹಾರ್ವೆಸ್ಟರ್ ನೊಂದಿಗೆ ಬೇಲರ್ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯಡಿ ಸಾಮಾನ್ಯ ವರ್ಗ (ವೈಯಕ್ತಿಕ) ಘಟಕದಡಿ ಫಲಾನುಭವಿಗಳಿಗೆ ಶೇ.40.00 ರಷ್ಟು ಸಹಾಯಧನ ಇರುತ್ತದೆ ಮತ್ತು ಸಂಘ/ಸoಸ್ಥೆ, ಪರಿಶಿಷ್ಟ ಜಾತಿ (ವೈಯಕ್ತಿಕ) ಪರಿಶಿಷ್ಟ ಪಂಗಡ (ವೈಯಕ್ತಿಕ) ಫಲಾನುಭವಿಗಳಿಗೆ ಶೇ.50.00 ರಷ್ಟು ಸಹಾಯಧನ ಇರುತ್ತದೆ.

     ರೈತರು ಅರ್ಜಿ ನಿಗದಿತ ನಮೂನೆಯಲ್ಲಿ ದಾಖಲಾತಿಗಳೊಂದಿಗೆ 2026ರ ಆಗಸ್ಟ್ 10ರ ಒಳಗೆ ಸಂಬoಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿಸಲ್ಲಿಸಬೇಕು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಉಪ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲಾಗುವುದು. ನಂತರ ಈ ಕಛೇರಿಯಲ್ಲಿ ಉಪ ಕೃಷಿ ನಿರ್ದೇಶಕರ ಕಛೇರಿಯಿಂದ ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಉಪಕರಣ ಸಮಿತಿಯಲ್ಲಿ ಮಂಡಿಸಲಾಗುವುದು.

ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಒಂದೇ ಹಬ್‌ಗೆ ಒಂದಕ್ಕಿoತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಅರ್ಹಗೊಂಡಲ್ಲಿ, ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು. ಕಛೇರಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನಿಕರಿಸಲು ಕಾರ್ಯಾದೇಶ ನೀಡಲಾಗುವುದು. ಹಬ್‌ವಾರು ಸ್ವೀಕೃತವಾದ ಯಂತ್ರೋಪಕರಣಗಳನ್ನು ಸಂಬoಧಿಸಿದ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಪರಿಶೀಲಿಸಿ. ಸಹಾಯಧನವನ್ನು ನಿಯಾಮನುಸಾರ ಸಂಬAಧಿಸಿದವರ ಸಾಲದ ಬ್ಯಾಂಕ್ ಖಾತೆಗೆ ಕ್ರೆಡಿಟ್ ಲಿಂಕ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮೂಲಕ ಜಮಾ ಮಾಡಲಾಗುವುದು.

   ಅರ್ಜಿದಾರರು ಅರ್ಜಿಯೊಂದಿಗೆ ಪಹಣಿ ಪತ್ರ, ಜಾತಿ ಪ್ರಮಾಣ ಪತ್ರ ಆಧಾರ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಎಫ್.ಐ.ಡಿ ಸಂಖ್ಯೆ, ಮತ್ತು 100 ರೂ.ಗಳ ಛಾಪಾ ಕಾಗದದ ಮೇಲೆ ಹಬ್‌ಅನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ (ನೋಟರಿಯೊಂದಿಗೆ), ಸಂಘ/ಸoಸ್ಥೆಗಳಾದಲ್ಲಿ ಇತ್ತೀಚಿನ 2ವರ್ಷಗಳ (2024-25, 2025-26) ಲೆಕ್ಕ ಪರಿಶೋಧನಾ ಪತ್ರ,ಸಹಾಯ ಧನವು ಕ್ರೆಡಿಟ್ ಲಿಂಕ್ಸ್ ಬ್ಯಾಕ್ ಎಂಡೆಡ್ ಸಬ್ಸಿಡಿ ಆಗಿರುವುದರಿಂದ ಸಂಬoಧಿಸಿರುವ ಬ್ಯಾಂಕ್‌ನಿoದ ತಾತ್ವಿಕ ಸಾಲ ಮಂಜೂರಾತಿ ಪತ್ರ (ಇನ್ ಪ್ರಿನ್ಸಿಪಲ್ ಲೋನ್ ಸ್ಯಾಂಕ್ಷನ್ ಲೆಟರ್) ಮತ್ತು ಶುಕರ್‌ಕೇನ್ ಹಾರ್ವೆಸ್ಟರ್ ಹಬ್‌ಗೆ ಅರ್ಜಿಸಲ್ಲಿಸಲು ಇಚ್ಚಿಸುವ ಅರ್ಜಿದಾರರು ಎಲ್ಲಾ ದಾಖಲಾತಿಗಳೊಂದಿಗೆ, ವ್ಯಾಪ್ತಿಯಲ್ಲಿ ಬರುವ ರೈತರೊಂದಿಗೆ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ “ಒಪ್ಪಂದ ಪ್ರಮಾಣ ಪತ”ವನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ಅರ್ಜಿಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology