ಪ್ರತಿಭಟಿಸಿದ್ದಕ್ಕೆ ಬ್ಲಾಕ್ ಲೀಸ್ಟ್ಗೆ ಸೇರ್ಪಡೆ : ಆರೋಪ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶೀನಪ್ಪ , ಕೊಪ್ಪಳ ಜಿಲ್ಲೆಯ ೩೧ ಬಸ್ ನಿಲ್ದಾಣಗಳ ಸ್ವಚ್ಚತಾ ಗುತ್ತಿಗೆದಾರಳಾದ ಮಂಗಳಗೌರಿಗೆ ತನ್ನ ಟೆಂಡರ್ ವ್ಯಾಪ್ತಿಗೆ ಇಲ್ಲದ ಕೆಲಸಗಳನ್ನು ಮಾಡಲು ತಾಕೀತು ಮಾಡಿದ್ದಲ್ಲದೇ, ಕೆಲ ಪ್ರಮುಖ ಬಸ್ ನಿಲ್ದಾಣಗಳಲ್ಲಿ ವಿದ್ಯುತ್ ಕಡಿತ, ನೀರಿನ ಅವ್ಯವಸ್ಥೆ, ಶೌಚಾಲಯದ ಕಾರ್ಮಿಕರಿಗೆ ಕಿರುಕುಳ ನೀಡುವಂತೆ ನಿಲ್ದಾಣಾಧಿಕಾರಿಗಳಿಗೆ ಮೌಖಿಕ ಸೂಚನೆ ನೀಡುವುದರೊಂದಿಗೆ, ನನ್ನ ಆದಾಯ ಕುಸಿತಕ್ಕೆ ಕಾರಣರಾಗಿ, ಹಾಗೆ ಮಾಡದಂತೆ ನಾನು ಮನವಿ ಮಾಡಿದ್ದಕ್ಕೆ “ ಕೊಪ್ಪಳ ಕೆಕೆಆರ್‌ಟಿಸಿ ಬಿಟ್ಟು ತೊಲಗು” ಎಂದು ಏಕವಚನದಲ್ಲಿ ಮಾತನಾಡಿ ಅನುಸೂಚಿತ ಜಾತಿಯವಳು ಎಂಬ ಕಾರಣಕ್ಕೆ ನನ್ನನ್ನು ಬ್ಲಾಕ್ ಲೀಸ್ಟ್ಗೆ ಸೇರ್ಪಡೆಗೊಳಿಸಿದ್ದಾರೆಂದು ಕೊಪ್ಪಳ ಕೆಕೆಆರ್‌ಟಿಸಿಯ ಗುತ್ತಿಗೆದಾರಳಾದ ಮಂಗಳಗೌರಿ ಪತ್ರಿಕಾ ಪ್ರಕಟಣೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳದ ನಗರ ಸಭೆಯವರು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶೌಚಾಲಯವನ್ನು ಮೂರು ವರ್ಷದ ಹಿಂದೆ ಕಟ್ಟಿರುತ್ತಾರೆ. ಈ ಶೌಚಾಲಯಕ್ಕೆ ಹಿಂದೆ ಚೇಂಬರುಗಳನ್ನು ಕಟ್ಟಿರುವುದಿಲ್ಲ. ಸೌಚಾಲಯ ಬ್ಲಾಕ್ ಆದರೆ ಸರಿ ಪಡಿಸುವುದು ಕ್ಲಿಷ್ಟಕರವಾಗಿದೆ., ಇನ್ನು ಹಲವಾರು ನ್ಯೂನ್ಯತೆಗಳು ಶೌಚಾಲಯದಲ್ಲಿ ಇದ್ದರೂ ಅದನ್ನು ಸ್ವದೀನಕ್ಕೆ ತೆಗೆದುಕೊಳ್ಳಲು ಬಲವಂತ ಪಡಿಸಲಾಯಿತು. ಅಲ್ಲದೇ ನನ್ನ ಟೆಂಡರ್ ವ್ಯಾಪ್ತಿಯಲ್ಲಿರುವ ಬಸ್ ನಿಲ್ದಾಣದ ಮೂರು ಶೌಚಾಲಯಗಳನ್ನು ಮಾತ್ರ ನಾನು ನಿರ್ವಹಣೆ ಮಾಡಲು ಸಾದ್ಯ ಎಂದಿದ್ದಕ್ಕೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ನಿನ್ನನ್ನು ಟರ‍್ಮಿನೇಟ್ ಮಾಡುತ್ತೇನೆಂದು ಕೂಗಾಡಿ, ಒಂದೇ ದಿನ ಕೊಪ್ಪಳ ಜಿಲ್ಲೆಯ ಎಲ್ಲಾ ಬಸ್ ನಿಲ್ಧಾಣಗಳು ಸ್ವಚ್ಚತೆಯಿಲ್ಲವೆಂದು ೩೫೦೦ ರೂಪಾಯಿಗಳಂತೆ ದಂಡ ವಿಧಿಸಿ ಎರಡು ನೋಟಿಸ್ ಜಾರಿ ಮಾಡಿರುತ್ತಾರೆ. ಆಗ ಇವರ ಒತ್ತಡಕ್ಕೆ ಮಣಿದು ನಗರ ಸಭೆಯ ಶೌಚಾಲಯ ಸ್ವದೀನಕ್ಕೆ ಪಡೆದಿರುತ್ತೇನೆ. ಇದರಿಂದ ನನ್ನ ಆದಾಯ ಕುಸಿತವಾಯಿತು.
ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಗೊಂಡಬಾಳ ಪ್ಲಾಟ್ ಪಾರಂ ಬಳಿಯ ಮಹಿಳಾ ಶೌಚಾಲಯ ಬಸ್ ನಿಲ್ದಾಣ ಆರಂಭವಾದಗಿನಿoದ ಬಂದ್ ಇದೆ. ಇದು ನನ್ನ ಟೆಂಡರ್ ವ್ಯಾಪ್ತಿಯಲ್ಲಿ ಇಲ್ಲ. ಆದರೂ ಇದನ್ನು ಬಲವಂತವಾಗಿ ರಿಪೇರಿ ಮಾಡಿ ತೆರೆಯಲಾಯಿತು. ಇದನ್ನು ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ಈ ಮನವಿ ಸಲ್ಲಿಸಿದ ಮಾರನೇ ದಿನವೇ ಬೇರೆಯ ಹಲವಾರು ಕಾರಣಗಳನ್ನು ಕೊಟ್ಟು, ಅಂತೀಮ ನೋಟಿಸ್ ಜಾರಿ ಮಾಡಲಾಯಿತು. ಅಂತಿಮ ನೋಟಿಸ್‌ಗೆ ನಾನು ಸಮರ್ಥವಾಗಿ ಉತ್ತರ ನೀಡಿದ್ದರೂ, ಅದನ್ನು ಲೆಕ್ಕಿಸದೇ, ಉಲ್ಲೇಖಿಸದೇ, ಕಾನೂನು ಬಾಹಿರವಾಗಿ, ಮಹಿಳೆಯೆಂದೂ, ಅನುಸೂಚಿತ ಜಾತಿಯವಳು ಎಂದು ಲೆಕ್ಕಿದೇ, ಸ್ವಚ್ಚತಾ ಕೆಲಸ, ಶೌಚಾಲಯ ನಿರ್ವಹಣೆ ಸರಿಯಾಗಿ ಮಾಡಿದರೂ, ಅಮಾನವೀಯವಾಗಿ ಟರ‍್ಮಿನೇಟ್ ಮಾಡಿ ಆದೇಶ ನೀಡಿರುತ್ತಾರೆಂದು ಈ ಕುರಿತು ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗುವುದೆಂದು ಮಂಗಳಗೌರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





Any questions related to ಕೆಕೆಆರ್‌ಟಿಸಿ ಸ್ವಚ್ಚತಾ ಗುತ್ತಿಗೆದಾರಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿಯಿoದ ಕಿರುಕುಳ. ಆರೋಪ?