ಕಲಬುರಗಿ.07.ಜುಲೈ.26: ಕರದಾಳ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಸದ್ಯ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ ಸರ್ಕಾರದ ವಸತಿ ಯೋಜನೆಯ ಹಣ ಬಿಡುಗಡೆ ಮಾಡಲು ಫಲಾನುಭವಿಯಿಂದ ಫೋನ್ ಪೇ (PhonePe) ಮುಖಾಂತರ ಲಂಚ ಪಡೆಯುತ್ತಿದ್ದ ಮಾಹಿತಿ ಲೋಕಾಯುಕ್ತ ಪೊಲೀಸ್ ನೀಡಲಾಗಿದೆ.
ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಾನ್ಯ ಸಿದ್ದರಾಜು .ಸಿ. ರವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಹನಿಕೆರಾ ಗ್ರಾಮದ (ರಾಮನಾಯಕ ತಾಂಡಾ) ನಿವಾಸಿ ಸಿಖಂದರ್ ಎಂಬುವವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸಿಖಂದರ್ ಅವರ ಅಕ್ಕ ಶ್ರೀಮತಿ ಸವಿತಾ ಅವರಿಗೆ ಸರ್ಕಾರದಿಂದ ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ಯಡಿ ಮನೆ ಮಂಜೂರಾಗಿತ್ತು. ಈ ಯೋಜನೆಯಡಿ ಬರಬೇಕಾಗಿದ್ದ 3ನೇ ಮತ್ತು 4ನೇ ಕಂತಿನ ಅನುದಾನದ ಹಣವನ್ನು ಬಿಡುಗಡೆ ಮಾಡಲು ಕರದಾಳ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಸಂತೋಷ ರಾಠೋಡ ಎಂಬಾತ ಬರೋಬ್ಬರಿ 22 ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ಕೊನೆಗೆ ಲಂಚದ ಹಣದಲ್ಲಿ 15 ಸಾವಿರ ರೂಪಾಯಿಗಳನ್ನು ತನ್ನ ಫೋನ್ ಪೇ (PhonePe) ಖಾತೆಗೆ ಕಳುಹಿಸುವಂತೆ ಆರೋಪಿ ತಿಳಿಸಿದ್ದನು. ಅದರಂತೆ ದೂರುದಾರರಿಂದ ಹಣವನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಆತನನ್ನು ತಡೆದು, ಬಂಧಿಸಿದ್ದಾರೆ.
ಲೋಕಾಯುಕ್ತ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ ಬಡದೇಸಾರ ನೇರ ನಾಯಕತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲಂಚಬಾಕ ಸರ್ಕಾರಿ ನೌಕರನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯ ನಂತರ ಆರೋಪಿಯನ್ನು ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.






Any questions related to ಸರ್ಕಾರಿ ಅಧಿಕಾರಿ Phone pe ಮುಖಾಂತರ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.?