ಬೀದರ್,30 ಜೂನ್ 26:ಕಾರ ಹುಣ್ಣಿಮೆ ನಮ್ಮ ನಾಡಿನ ರೈತಾಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬವಾಗಿದೆ. ಕೃಷಿಯಲ್ಲಿ ಪ್ರಮುಖ ಪಾತ್ರವಹಿಸುವ ಎತ್ತುಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಿ, ಅವುಗಳ ಶ್ರಮವನ್ನು ಗೌರವಿಸುವ ಮೂಲಕ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ಶುಭ ಸಂದರ್ಭದಲ್ಲಿ ಎಲ್ಲಾ ರೈತ ಬಾಂಧವರಿಗೆ ಹಾಗೂ ರಾಜ್ಯದ ಜನತೆಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ. ರೈತರ ಶ್ರಮವೇ ದೇಶದ ಅಭಿವೃದ್ಧಿಗೆ ಬೆನ್ನೆಲುಬಾಗಿದ್ದು, ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ದಿನ ಇದಾಗಿದೆ.
ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಗೋ ಸಂರಕ್ಷಣೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾರ ಹುಣ್ಣಿಮೆ ಹಬ್ಬವು ರೈತರ ಬದುಕಿನಲ್ಲಿ ಸುಖ, ಸಮೃದ್ಧಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ
– ಸಂತೋಷ್ ರೆಡ್ಡಿ ಅಣದೂರು ಜಿಲ್ಲಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ಬೀದರ್ ನಾಗಯ್ಯ ಹಿರೇಮಠ ಪ್ರಭು ಪಸರ್ಗಿ ಸಂತೋಷ್ ಸುರಳಿ ಶಿವಶಾಂತ್ ರೆಡ್ಡಿ ಕಲ್ಲಪ್ಪ ಪಸರಗಿ ಅನಂತ ರೆಡ್ಡಿ ಆಕಾಶ್ ರೆಡ್ಡಿ ಜೈಪಾಲ್ ರೆಡ್ಡಿ ಸಂಜು ಕುಮಾರ್ ಹುಂಚಿಗಿರ್ ರಘು ಪಸರಗಿ ಶ್ರೀಕಾಂತ್ ಪುಲ್ಲಿ ಮೋಯಿಜ್ ಗ್ರಾಮದ ಮುಖಂಡರು ಹಿರಿಯರು ಯುವಕರು ಇತರರು ಭಾಗವಹಿಸಿದ್ದರು





Any questions related to ಕಾರ ಹುಣ್ಣಿಮೆ: ರೈತರ ಸಂಸ್ಕೃತಿ ಮತ್ತು ಗೋ ಸಂಸ್ಕೃತಿಯ ಪ್ರತೀಕ?