ಕೊಪ್ಪಳ.13.ಜೂನ್.26: ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಕೈಗಾರಿಕ ತರಬೇತಿ ಸಂಸ್ಥೆಗಳು 2026ನೇ ಸಾಲಿನಲ್ಲಿ ಎನ್.ಸಿ.ವಿ.ಟಿ ಸಂಯೋಜನೆ ಪಡೆಯಲು ಡಿ.ಜಿ.ಟಿ ರವರ ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಅನುದಾನಿತ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಡಿ.ಜಿ.ಟಿ ನವದೆಹಲಿರವರ ಆನ್ಲೈನ್ ಪೋರ್ಟಲ್ ಮೂಲಕ 2026ನೇ ಸಾಲಿನಲ್ಲಿ ಹೊಸ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿ ಅಥವಾ ಘಟಕಗಳನ್ನು ಪ್ರಾರಂಭಿಸಲು ಎನ್.ಸಿ.ವಿ.ಟಿ ಸಂಯೋಜನೆ ಪಡೆಯಲು ಮತ್ತು ಸ್ಥಳಾಂತರಗೊಂಡ ಸಂಸ್ಥೆಗಳು ಮರು ಸಂಯೋಜನೆ ಪಡೆಯುವ ಸಂಬಂಧ ಸಂಯೋಜನಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಡಿ.ಜಿ.ಟಿ ನವದೆಹಲಿ ರವರ Affiliation portal https://affiliation-dgt.skillindiadigital.gov.in/ ನಲ್ಲಿ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಿರುತ್ತಾರೆ ಎಂದು ಕೊಪ್ಪಳ ಟಣಕನಕಲ್ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಗವಿಶಂಕರ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಕೈಗಾರಿಕ ತರಬೇತಿ ಸಂಸ್ಥೆಗಳಿಂದ ಎನ್.ಸಿ.ವಿ.ಟಿ ಸಂಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ?