ಕಲಬುರಗಿ.27.ಮಾರ್ಚ್.26: ಇಂದು ಈ ಪ್ರಸ್ತುತ ಜಗತ್ತಿನಲ್ಲಿ ಬಸವಾದಿ ಶರಣರ ಪ್ರಸ್ತುತ ಚಿಂತನೆಗಳ ಪ್ರಸ್ತುತ ಅವಶ್ಯಕತೆ ಇದೆ ನಾವು ಸಪಾಯಿ ಕರ್ಮಚಾರಿಗಳ ಹತ್ತಿರ ತಾಯಿ ಗುಣವನ್ನು ಕಾಣುತ್ತೇವೆ .ಅಂತ ಗುಣವನ್ನು ಸಮಾಜದಲ್ಲಿನ ಉನ್ನತ ಸ್ಥಾನಮಾನ ಹೊಂದಿದವರಲ್ಲಿ ಕಂಡುಬರುವುದಿಲ್ಲ ಎಂದು ಕಲ್ಬುರ್ಗಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು, ಹಾಗೂ ಪ್ರಸಾರಂಗದ ನಿರ್ದೇಶಕರಾದ ಪ್ರೊ.ಹೆಚ್.ಟಿ.ಪೋತೆ ಅವರು ನುಡಿದರು ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹವಿದ್ಯಾಲಯ ಕಲಬುರ್ಗಿ ಹಾಗೂ ಸರಕಾರಿ ಕಾಲೇಜು ಕಲ್ಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು ,ಮುಂದುವರೆದು ಮಾತನಾಡಿದ ಅವರು ಇಂದು ನಮ್ಮ ದೇಶದಲ್ಲಿ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡಿದ್ದರು ಸಹ ಮಾನವ ಹಕ್ಕುಗಳ ಉಲ್ಲಂಘನೆ ದಿನಂಪ್ರತಿ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿ ಎಂದರು .ಸ್ವಾತಂತ್ರ್ಯ ,ಸಮಾನತೆ, ಭ್ರಾತೃತ್ವ ಇವುಗಳನ್ನು ಒತ್ತಿ ಹೇಳುವ ನಮ್ಮ ಸಂವಿಧಾನವನ್ನು ನಾವು ಎಷ್ಟು ಜನರು ಪರಿಪಾಲಿಸಿಕೊಂಡು ಬರುತ್ತಿದ್ದೇವೆ, ಹಾಗೇನಾದರೂ ನಾವು ಪ್ರತಿಯೊಬ್ಬರು ಇವುಗಳನ್ನು ಪರಿಪಾಲಿಸಿಕೊಂಡು ಬಂದು ಸಮಾಜದಲ್ಲಿನ ಕಟ್ಟ ಕಡೆಯ ಜನರಿಗೆ ಅಧಿಕಾರ ದೊರಕುವಂತೆ ಮಾಡುವುದು ಪ್ರಜ್ಞಾವಂತರಾದ ಲೇಖಕರು ವಿದ್ವಾಂಸರು ಚಿಂತಕರ ಜವಾಬ್ದಾರಿಯಾಗಿದೆ. ಎಂದರು.
ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ಸಾಹಿತ್ಯ ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ಕೊಡಬೇಕಾದ ಅವಶ್ಯಕತೆ ಇದೆ ಹಾಗಾಗಿ ಪ್ರಸ್ತುತ ಇಂತಹ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ನಿಜಕ್ಕೂ ಅಭಿನಂದನಾರ್ಹ ಕೆಲಸ ಎಂದು ನುಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ,ಮತ್ತು ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಚಾಲಕರಾದ ಶ್ರೀ ನಾಗಣ ಘಂಟಿ ವಹಿಸಿದ್ದರು ವೇದಿಕೆ ಮೇಲೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಅನಿಲ್ ಕುಮಾರ್ ಮರಗೋಳ ಉಪಸ್ಥಿತರಿದ್ದರು.
ಮಹಾವಿದ್ಯಾಲಯಗಳ ಪ್ರಾಚಾರ್ಯರಾದ ಡಾ. ಆರ್. ಬಿ. ಕೊಂಡ ಮತ್ತು ಡಾ. ಸವಿತಾ ತಿವಾರಿ ಮತ್ತು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಾರದಾ ಜಾಧವ್ ವಿ.ಜಿ.ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಡಾ. ಶಂಕರ್, ಶ್ರೀಮತಿ ಕವಿತಾ ಉಪಸ್ಥಿತರಿದ್ದರು. ಡಾ.ರಾಜೇಂದ್ರ ಕೊಂಡವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು ಅಂತರಾಷ್ಟ್ರೀಯ ಸಮ್ಮೇಳನ ಬಗ್ಗೆ ಪ್ರಾಸ್ತಾವಿಕವಾಗಿ ಡಾ.ಪ್ರೇಮಚಂದ್ ಚವ್ಹಾಣ, ಡಾ.ಶಾರದಾ ಜಾಧವ್ ಮಾತನಾಡಿದರು ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯ ಪ್ರೊಫೆಸರ್ ವಿಕ್ರಮ ವಿಸಾಜಿ, ಕೇಂದ್ರೀಯ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೂ. ಸಂದೀಪ್ ರಣಬೀರ್ಕರ್, ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್ ಪರುತೆ, ಸೋಲಾಪುರ ಪ್ರೊ ಧನ್ಯಕುಮಾರ ಬಿರಾಜದಾರ, ದೇಶದ ನಾನಾ ಭಾಗಗಳಿಂದ ಭಾಗವಹಿಸಿರುವ ಮತ್ತು ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರುಗಳು ಹೊರರಾಜ್ಯದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು







Any questions related to ಮನಸ್ಸಿನ ಅಂಧಕಾರ ಅಳಿದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ: ಡಾ. ಪೋತೆ?