Home » ಲೈವ್ ನ್ಯೂಸ್ » ನಿರ್ಧಿಷ್ಟ ನಿಯಮಗಳಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿ

ನಿರ್ಧಿಷ್ಟ ನಿಯಮಗಳಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿ

Facebook
X
WhatsApp
Telegram

ಕರ್ನಾಟಕದಲ್ಲಿ 440 ಪದವಿ ಕಾಲೇಜುಗಳಲ್ಲಿ 4.5 ಲಕ್ಷಕ್ಕಿಂತ ಗ್ರಾ ವಿಣೆ ಪ್ರದೇಶದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 4500 ಜನ ಕಾಯಂ ಉಪನ್ಯಾಸಕರಿದ್ದು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕ ಸಂಖ್ಯೆ 10,500 ಹಲವು ಕಾಲೇಜುಗಳ ಸಂಪೂರ್ಣ ಅತಿಥಿ ಉಪನ್ಯಾಸಕರನ್ನ ಅವಲಂಬಿಸಿವೆ. ಸರಕಾರ ಒಂದು ನಿರ್ಧಿಷ್ಟ ನಿಯಮವಿಲ್ಲದೆ ಪ್ರತಿ ವರ್ಷ ಒಂದೊಂದು ನಿಯಮಗಳಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಪದ್ಧತಿಗೆ ತೊಂದರೆಯಾಗುವ ಸರ್ವೆಸಾಮಾನ್ಯವಾಗಿದೆ. 2024-25ನೇ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅಗಷ್ಟ ತಿಂಗಳಲ್ಲಿ ಅರ್ಜಿ ಕರೆದಿತ್ತು. ಹೈಕೋರ್ಟ್ ಆದೇಶ ಹೊರಡಿಸಿ | ಯುಜಿಸಿಯ 2018ರ ನಿಯಮಗಳಂತೆಯೇ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಆದೇಶ

ನೀಡಿದ ಹಿನ್ನೆಲೆಯಲ್ಲಿ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿತು. ಕಾಲೇಜು ಶಿಕ್ಷಣ ಇಲಾಖೆ ಹಲವು ವರ್ಷಗಳಿಂದ ಯುಜಿಸಿ ಅರ್ಹತೆಗಳಾದ ನೆಟ್, ಕೆ-ಸೆಟ್, ಪಿ.ಹೆಚ್.ಡಿ. ಕಡ್ಡಾಯಗೊಳಿಸದೆ ಕೇವಲ ಸ್ನಾತಕೋತ್ತರ ಪದವಿ ಪಡೆದವರನ್ನು ಸೇವಾನುಭವಕ್ಕೆ ಅಂಕಗಳನ್ನು ಕೊಟ್ಟು ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸುತ್ತಾ ಬಂದಿದೆ.

ಉಪನ್ಯಾಸಕ ವೃತ್ತಿ ನಿಂತ ನೀರಾಗಿ ಪಾಚಿಗಟ್ಟಬಾರದು-

‘ಉಪನ್ಯಾಸಕರಾದವರು ಸದಾ ವಿದ್ಯಾರ್ಥಿಗಳಾ ಗಿರಬೇಕು. ಎನ್ನುವುದು ಶಿಕ್ಷಣ ತಜ್ಞರ ಮಾತು ಉಪನ್ಯಾಸಕರು ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ನಿರಂತರ ತೊಡಗಿಕೊಂಡರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಉಪನ್ಯಾಸಕ ವೃತ್ತಿ ಕೇವಲ ಬೈಚಾನ್ಸ್ ಸಿಕ್ಕಿದೆ ಎಂದು ಮಾಡುವುದಲ್ಲ ಅದೊಂದು ಬೈಚಾಯ್ಸ್ ಆಗಬೇಕು. ಅಂದಾಗ ಉನ್ನತ ಶಿಕ್ಷಣ ಗುಣಮಟ್ಟ ಪಡೆಯಲು ಸಾಧ್ಯ

10-15 ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅತಿಥಿ ಉಪನ್ಯಾಸಕರು ಇಷ್ಟು ವರ್ಷಗಳಲ್ಲಿ ಯುಜಿಸಿಯ ಅರ್ಹತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲವೆಂದರೆ ಸರಕಾರ ಅಂತಹ ಉಪನ್ಯಾಸಕರಿಂದ ಯಾವ ರೀತಿಯ ಶಿಕ್ಷಣ ನೀಡುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಹಳ್ಳ ಹಿಡಿದು ಸಾಗಿದೆ.

ಯುಜಿಸಿ ಅರ್ಹತೆ ಪಡೆಯಲು ವಾಮಮಾರ್ಗ

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ |

ಅರ್ಹತೆಗಳನ್ನೆ ಅತಿಥಿ ಉಪನ್ಯಾಸಕ ಆಯ್ಕೆಗೂ ಅನ್ವಯಿಸಬೇಕು. ಎಂದು 2018ರಲ್ಲಿ ಯುಜಿಸಿ ಆದೇಶ ಮಾಡಿದಾಗ 2019-2020ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕೆ-ಸೆಟ್ | ಪರೀಕ್ಷೆಯಲ್ಲಿ ಅಕ್ರಮ ನೆಡೆದದ್ದು ಜಗಜ್ಜಾಯರವಾಯಿತು. ಹಾಗೂ ಹೊರ ರಾಜ್ಯಗಳಿಂದ ನಕಲಿ ಪಿ.ಹೆಚ್.ಡಿ.ಗಳನ್ನು ತಂದು ನೇಮಕವಾದ ಅತಿಥಿ ಉಪನ್ಯಾಸಕರು ಇದ್ದಾರೆ. ಈಗ ಅತಿಥಿ ಉಪನ್ಯಾಸಕರ ಸಂಘಟನೆಗಳೇ ನಕಲಿ ಪಿ.ಹೆಚ್.ಡಿ. ನಕಲಿ ಅಂಗವಿಕಲ ಪ್ರಮಾಣ ಪತ್ರಗಳನ್ನು ರದ್ದುಪಡಿಸಲು ಶಿಕ್ಷಣ ಇಲಾಖೆಗೆ ಮನವಿಮಾಡಿದೆ. ಅಲ್ಲದೆ ಯು.ಜಿ.ಸಿ. ಮಾನದಂಡಗಳನ್ನು ಪೂರೈಸಲು 2025ರ ಜನವರಿವರೆಗೂ ಕೇಳಿದೆ. ಒಂದು ಕಡೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರು ಅತಿಥಿ ಉಪನ್ಯಾಸಕರ ವಿಷಯವು ಸರಕಾರವನ್ನು ಸರಕಾರವ ಇಕ್ಕಟ್ಟಿಗೆ ಸಿಲುಕಿಸಿದೆ. ಅತಿಥಿ ಉಪನ್ಯಾಸಕರಿಗೆ ಮಾನವೀಯಂತೆ ಆಧಾರದಲ್ಲಿ ಅವಕಾಶ ನೀಡಿದ್ದಾರೆ ನ್ಯಾಯಂಗ ನಿಂದನೆಯಾಗಲಿದೆ. ನೀಡದಿದ್ದರೆ ಯು.ಜಿ.ಸಿ. ಅರ್ಹತೆ ಪಡೆಯದ ಅತಿಥಿ ಉಪನ್ಯಾಸಕರ ಜೀವನ ನಡೆಯುವುದಿಲ್ಲ ಆದ್ದರಿಂದ ಕಾನೂನು ಸಲಹೆ ಪಡೆದು ಸರ್ಕಾರ ನೀಡಿದ್ದಾರೆ.

ಮುಂದುವರಿಯಲಿದೆ ಎನ್ನುತ್ತಾರೆ. ಸೌಲಭ್ಯ ಪಡಕೊಂಡೋನು ವೀರಭದ್ರ, ಕಳಕೊಂಡೋನು

ಕೋಡಂಗಿ –

2023-24ನೇ ಶೈಕ್ಷಣಿಕ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಅತಿಥಿ ಉಪನ್ಯಾಸಕ ಆಕಾಂಕ್ಷೆಗಳಿಗೆ ಮೆರಿಟ್ ಆಧಾರದ ಮೇಲೆ ರಾಜ್ಯ ಮಟ್ಟದ ಕೌನ್ಸಲಿಂಗ್ ಮೂಲಕ ನೇಮಕಾತಿ ಮಾಡಬೇಕಿದ್ದ ಶಿಕ್ಷಣ ಇಲಾಖೆ, ಕೋರ್ಟ್ ಆದೇಶ ನುಂಗಲಾರದ ತುತ್ತಾಗಿ ಕೋಟ್ ಆದೇಶ ಪಾಲಿಸಲು ಆಗದೇ ಯು.ಜಿ.ಸಿ ಅರ್ಹತೆ ಪಡೆಯಲು ಕೊಟ್ಟ ಮೂರು ವರ್ಷದ ಗಡುವು ಪೂರ್ಣಗೊಳ್ಳದೆ ಇದ್ದುದರಿಂದ ಇಲಾಖೆ ವರ್ಗಾವಣೆ ಮತ್ತು 1200 ಕಾಯಂ ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡುವ ನೆಪ ಹೇಳಿಕೊಂಡು ಈ ಶೈಕ್ಷಣಿಕ ವರ್ಷಕ್ಕೆ (2024-25) ನಡೆಯಬೇಕಿದ್ದ ಕೌನ್ಸಲಿಂಗ್ ತಡೆಹಿಡಿದು 2023-24ರಲ್ಲಿ | ಕಾರ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಮುಂದುವರಿಸಿತು. ಇದರಿಂದ ಕಾರ್ಯ ಬಾರದ ಕೊರತೆ, ಕಡ್ಡಾಯ ವರ್ಗಾವಣೆಯಿಂದ ಮೆರಿಟ್ ಪಟ್ಟಿಯಲ್ಲಿಯ ಮೇಲಿನ ಅಭ್ಯರ್ಥಿಗಳೇ ಹೊರ ಉಳಿದು, ಕೆಳಗಿನ ಅಭ್ಯರ್ಥಿಗಳು ಅತಿಥಿ ಉಪನ್ಯಾಸಕರಾಗಿ ಮುಂದುವರಿದಿದ್ದಾರೆ. ಈ ನಿರ್ಧಾರ ಯು.ಜಿ.ಸಿ. ಅರ್ಹತೆ, ಸೇವಾನುಭವ ಪಡೆದ ಎಷ್ಟು ಜನ ಅತಿಥಿ ಉಪನ್ಯಾಸಕರು

ಉದ್ಯೋಗವಿಲ್ಲದೆ ನಿರುದ್ಯೋಗಿಗಳನ್ನಾಗಿಸಿದೆ. ಒಂದೊಂದು ಕಾಲೇಜಿನಲ್ಲಿ, ಒಂದೊಂದು ನಿಯಮ –

ಕಾಲೇಜು ಶಿಕ್ಷಣ ಇಲಾಖೆ ಆದೀನದಲ್ಲಿ ಬರುವ 440 ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಬೇರೆ ಬೇರೆ | ನಿಯಮಗಳು ಕೆಲ ಕಾಲೇಜುಗಳಲ್ಲಿ ಬೆಳಗ್ಗೆ 9 ರಿಂದ 4 ಗಂಟೆವರೆಗೆ ಕಾಯಂ ಉಪನ್ಯಾಸಕರಂತೆ ಕಾಲೇಜುಗಳಲ್ಲಿ ಇದ್ದು ಕಾರ್ಯ ನಿರ್ವಹಿಸಬೇಕು. ಕೆಲ ಕಾಲೇಜುಗಳಲ್ಲಿ ಅವರ ತರಗತಿ

ಗಂಟೆ ಬೋಧನಾ ಕಾರ್ಯಭಾರ ಮಾಡಿದ ಮೇಲೆ ಬೇರೆ ಖಾಸಗಿ ಕಾಲೇಜು, ಇತರೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಾರದು ಎನ್ನುವ ನಿಯಮ ಕೆಲ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಇಷ್ಟದಂತೆ ಸರಕಾರಿ ಕಾಲೇಜಿನ ಅವದಿಯಲ್ಲಿ ಖಾಸಗಿ ಕಾಲೇಜು ಮತ್ತು ಇತರೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಪ್ರಾಚಾರ್ಯರಿಂದಲೇ ಅನುಕೂಲ, ಹೀಗೆ ವಿಭಿನ್ನ ನಿಯಮಗಳಿಂದ ಕೆಲ ಅತಿಥಿ ಉಪನ್ಯಾಸಕರು ರಾಜ-ರಾಣಿಯರಂತೆ, ಕೆಲ ಅತಿಥಿ ಉಪನ್ಯಾಸಕರು ಜೀತದಾಳುಗಳಂತೆ ಬೇಕಾಗಿದೆ.

ಉಪನ್ಯಾಸಕ ವೃತ್ತಿ ಸದಾ ಅಧ್ಯಯನದ ಮೂಲಕ ಅರ್ಹತೆ ಪಡೆದು ಅಧ್ಯಯನದ ಮೂಲಕ ಬೋಧನೆ ಸಾಗಬೇಕು. ಯು.ಜಿ.ಸಿ ಅರ್ಹತೆ ಪಡೆಯದೆ ಇರುವ ಅತಿಥಿ ಉಪನ್ಯಾಸಕರು ಒಂದೇ ಸಮಯಕ್ಕೆ ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿ ಪೂರ್ಣಕಾರ್ಯಭಾರ ಹೊಂದಿ ಬೋಧನೆ ಮಾಡುತ್ತಾರೆ. ಇದು ದುರಂತವಲ್ಲವೆ.? ಇಂತವರಿಂದ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೆ? ಇಲಾಖೆ ಇಂತದರಲೆ ಮೇಲೆ ಕ್ರಮ ಕೈಗೊಳ್ಳದೆ ಸಾವಿರಾರು ಸಂಖ್ಯೆಯ ಅಭ್ಯರ್ಥಿಗಳು ಯು.ಜಿ.ಸಿ. ಅರ್ಹತೆ ಪಡೆದು ಉಪನ್ಯಾಸಕ ವೃತ್ತಿಗಾಗಿ ಬಕಪಕ್ಷಿಗಳಂತೆ ಕಾಯುವ ಸ್ಥಿತಿಯನ್ನು ಸರ್ಕಾರ ಮತ್ತು ಇಲಾಖೆ ತಂದೊಡ್ಡಿವೆ. ಇಂತಹ ಗೊಂದಲಗಳಿಂದ ಸರಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೇಗೆ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ.

ಆದ್ದರಿಂದ ಇಂತಹ ಅತಿಥಿ ಉಪನ್ಯಾಸಕರು ಒಂದೇ ಕಡೆ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವದು

ಮಾಡಬೇಕು. ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲೆಬೇಕು

ಅವೈಜ್ಞಾನಿಕ ನಿಯಮಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಯು.ಜಿ.ಸಿ.ಯ ನಿಯಮ, ಕೋರ್ಟ್ ಆದೇಶ ಪಾಲಿಸುವ ಮೂಲಕ ವರ್ಗಾವಣೆ ಮತ್ತು ಕಾಯಂ ಉಪನ್ಯಾಸಕರ ನೇಮಕಾತಿಯನ್ನು ಪೂರ್ಣಗೊಳಿಸಿ. ಈಗಿರುವ ಗಮನದಲ್ಲಿಟ್ಟುಕೊಂಡು. ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು. ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವಾಭದ್ರತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ತರಗತಿ ಬಹಿಷ್ಕರಿಸಿ ಹೋರಾಟ ಮಾಡಿದ್ದಾರೆ.

ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮವಾಗಿದೆ. ಆದ್ದರಿಂದ ಸರ್ಕಾರ ಈ ಸಮಸ್ಯೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಂಡು 2024-25ರ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕ ನೇಮಕ ಮಾಡಬೇಕು. ಎಲ್ಲಾ ಕಾಲೇಜುಗಳ ಪ್ರಾಚಾರ್ಯರಿಗೆ ಆದೇಶ ಮಾಡುವ ಮೂಲಕ ಎಲ್ಲಾ ಕಾಲೇಜುಗಳಲ್ಲಿ ಒಂದೇ ನಿಯಮ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು.

ಪ್ರಾಚಾರ್ಯರು ಇದರಲ್ಲಿ ಮೀನಾಮೇಷ ಮಾಡಿದರೆ ಕೂಡಲೇ ಕ್ರಮವಹಿಸಿ ವಿದ್ಯಾರ್ಥಿಗಳಿಗೆ, ಶಿಕ್ಷಣ ವ್ಯವಸ್ಥೆಗೆ ನ್ಯಾಯ ನೀಡಬೇಕೆಂಬುದೇ ನೊಂದ ಯು.ಜಿ.ಸಿ. ಅಭ್ಯರ್ಥಿಗಳ ಒಕ್ಕೊರಲ ಧ್ವನಿಯಾಗಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology