Home » ಲೈವ್ ನ್ಯೂಸ್ » ನ್ಯಾ.ನಾಗಮೋಹನದಾಸ್ ವರದಿ ರದ್ದುಪಡಿಸಲು ಆಗ್ರಹ.

ನ್ಯಾ.ನಾಗಮೋಹನದಾಸ್ ವರದಿ ರದ್ದುಪಡಿಸಲು ಆಗ್ರಹ.

Facebook
X
WhatsApp
Telegram

ಚಾಮರಾಜನಗರ. 22.ಮಾರ್ಚ್.26:ಅವೈಜ್ಞಾನಿಕ ನ್ಯಾ.ನಾಗಮೋಹನದಾಸ್‌ ಅವರ ಒಳ ಮೀಸಲಾತಿ ವರದಿಯನ್ನು ರದ್ದುಪಡಿಸಬೇಕು ಸಮುದಾಯಗಳ ಹಿತಕ್ಕೆ ಮಾರಕವಾಗಿರುವ ಆಯೋಗ ರದ್ದುಪಡಿಸಬೇಕು ಎಂದು ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ಗುರಿಯಾಗಿಸಿ ನಿಂದಿಸುವುದು ಸರಿಯಲ್ಲ, ಈಚೆಗೆ ಕೊಳ್ಳೇಗಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವ ಮಹದೇವಪ್ಪ ಹಾಗೂ ಸಮುದಾಯದ ಶಾಸಕರು, ಸಚಿವರು ಹಾಗೂ ಸ್ವಾಮೀಜಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಅವಮಾನ ಮಾಡಿರುವುದು ಖಂಡನೀಯವಾಗಿದ್ದು ಕ್ಷಮೆಯಾಚಿಸುತ್ತೇವೆ ಎಂದರು.

ಎಡಗೈ ಹಾಗೂ ಬಲಗೈ ಸಮುದಾಯಗಳ ಮಧ್ಯೆ ಒಳ ಮೀಸಲಾತಿ ಹಂಚಿಕೆ ವಿಚಾರದದಲ್ಲಿ ಬಿಕ್ಕಟ್ಟು ಉಂಟಾಗಿದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಹಾಗೂ ಇತರೆ ಕ್ಷೇತ್ರಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವಾಗ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು, ಸಾಮಾಜಿಕ ನ್ಯಾಯ ಸಿಗುವಂತೆ ಸೂತ್ರ ರೂಪಿಸ ಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಒತ್ತಾಯಿಸಿದರು.

ಒಳಮೀಸಲಾತಿ ಜಾರಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಎಡಗೈ, ಬಲಗೈ ಸಮುದಾಯಗಳು, ಸಚಿವರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಕ್ಕುಗಳಿಗಾಗಿ ಸಂವಿಧಾನ ವ್ಯಾಪ್ತಿಯಲ್ಲಿ ಹೋರಾಟ ಮಾಡಬೇಕು. ಪರಸ್ಪರ ಬೀದಿ ಕಾಳಗ ಅವಶ್ಯಕತೆ ಇಲ್ಲ, ಸಮುದಾಯ ರಾಜಕೀಯ ದಾಳ ವಾಗದಂತೆ ಎಚ್ಚರ ವಹಿಸಬೇಕು. ನಾಯಕರ ನಿಂಧಿಸು ವುದು, ಅವಮಾನ ಮಾಡುವುದು ಸಲ್ಲದು ಎಂದರು.

ಒಳಮೀಸಲಾತಿ ವಿರೋಧಿಸಿ ಬಲಗೈ ಸಮುದಾಯಗಳ ಒಕ್ಕೂಟ ಮಾರ್ಚ್‌ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ನಾಗರಾಜು, ಕಮಲ್, ಪಿ.ಸಂಘಸೇನಾ, ಭಾಗ್ಯ ಉಮ್ಮತ್ತೂರು, ರಾಜೇಂದ್ರ ಹೊನ್ನೂರು, ಮರಿಸ್ವಾಮಿ ಚಾಟೀಪುರ, ಲಿಂಗಣ್ಣ ಉತ್ತಂಬಳ್ಳಿ ಹಾಜರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology