Home » ಲೈವ್ ನ್ಯೂಸ್ » ನಕಲಿ ಪಿಎಚ್‌.ಡಿ ಪದವಿ ದಾಖಲೆ ಸಲ್ಲಿಸಿದವರಲ್ಲಿ 2000 ಉಪನ್ಯಾಸಕರಲ್ಲಿ ನಡುಕ!

ನಕಲಿ ಪಿಎಚ್‌.ಡಿ ಪದವಿ ದಾಖಲೆ ಸಲ್ಲಿಸಿದವರಲ್ಲಿ 2000 ಉಪನ್ಯಾಸಕರಲ್ಲಿ ನಡುಕ!

Facebook
X
WhatsApp
Telegram

ರಾಜ್ಯಾದ್ಯಂತ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವೀಧರರು ಅತಿಥಿ ಉಪನ್ಯಾಸಕರು ನಕಲಿ Ph.D. ಪದವಿಗಳು ಶಿಕ್ಷಣ ವ್ಯವಸ್ಥೆಗೆ ದೊಡ್ಡ ಸವಾಲಾಗಿದ್ದು, ಮಾನ್ಯತೆ ಪಡೆಯದ ಸಂಸ್ಥೆಗಳು ಹಣಕ್ಕಾಗಿ ಇಂತಹ ಪದವಿಗಳನ್ನು ನೀಡುತ್ತವೆ. ಇವುಗಳನ್ನು ಗುರುತಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮಾನ್ಯತೆ ಪಟ್ಟಿಯನ್ನು ಪರಿಶೀಲಿಸಬೇಕು, ಪ್ರಕಟಿತ ಸಂಶೋಧನಾ ಪ್ರಬಂಧಗಳನ್ನು (Scopus/Web of Science) ಪರಿಶೀಲಿಸಬೇಕು ಮತ್ತು ಪದವಿ ನೀಡಿದ ಸಂಸ್ಥೆಯ ವಿಳಾಸ/ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳಬೇಕು.

ನಕಲಿ Ph.D. ಹಾವಳಿಯನ್ನು ತಡೆಯಲು ಕೆಲವು ಸಲಹೆಗಳು:
UGC ಪಟ್ಟಿ ಪರಿಶೀಲನೆ: UGC ವೆಬ್‌ಸೈಟ್ ನಲ್ಲಿ ಪಟ್ಟಿ ಮಾಡಲಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಮಾತ್ರ Ph.D. ಪಡೆಯಿರಿ.

ಸಂಶೋಧನಾ ಗುಣಮಟ್ಟ: ನಕಲಿ Ph.D.ಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳನ್ನು ಹೊಂದಿರುವುದಿಲ್ಲ.

ಪ್ರಕ್ರಿಯೆ: ಸರಿಯಾದ ಮಾರ್ಗಸೂಚಿಗಳಿಲ್ಲದೆ, ಕಡಿಮೆ ಅವಧಿಯಲ್ಲಿ ಅಥವಾ ಸಂದರ್ಶನವಿಲ್ಲದೆ ನೀಡುವ ಪದವಿಗಳ ಬಗ್ಗೆ ಎಚ್ಚರವಿರಲಿ.


ಸಂಸ್ಥೆಯ ಮಾನ್ಯತೆ: ಪಿಎಚ್‌ಡಿ ಮುಗಿದ ಮೇಲೆ, ಆಯಾ ವಿಶ್ವವಿದ್ಯಾನಿಲಯದ ನಿಯಮಾವಳಿಗಳ ಪ್ರಕಾರ ಪ್ರಬಂಧ ಸಲ್ಲಿಸಬೇಕು.


ನಕಲಿ ಪದವಿಗಳನ್ನು ಬಳಸುವುದರಿಂದ ವೃತ್ತಿಜೀವನಕ್ಕೆ ಧಕ್ಕೆಯಾಗಬಹುದು ಮತ್ತು ಕಾನೂನು ಕ್ರಮ ಎದುರಿಸಬೇಕಾಗಬಹುದು.

ನಕಲಿ Ph.D. ಪದವಿಗಳ ಬಗ್ಗೆ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕೇ?

ಪಿಎಚ್‌ಡಿ ಮುಗಿದ ಮೇಲೆ. ಪ್ರಬಂಧ, ಅಭ್ಯರ್ಥಿಯು ಆಯಾ ವಿಶ್ವವಿದ್ಯಾನಿಲಯದ ನಿಯಮಾವಳಿ/ಮಾರ್ಗಸೂಚಿಯ ಪ್ರಕಾರ ನಿಗದಿತ ನಮೂನೆಯಲ್ಲಿ ಅಗತ್ಯ ಸಂಖ್ಯೆಯ ಪ್ರತಿಗಳನ್ನು ಸಲ್ಲಿಸುವುದರ ಹೊರತಾಗಿ, ಪ್ರಬಂಧ …

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಕೆಲ ದಿನಗಳ ಹಿಂದಷ್ಟೇ ಹೊರಡಿಸಿದ ಆದೇಶ, ನಕಲಿ ಪಿಎಚ್.ಡಿ ಪಡೆದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇರಿಕೊಂಡವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಅತಿಥಿ ಉಪನ್ಯಾಸಕರು ಸಲ್ಲಿಸಿದ ಪಿಎಚ್.ಡಿ ಪದವಿ ದಾಖಲೆಗಳು ನಕಲಿ ಎಂದು ಖಾತರಿಯಾದರೆ ಕರ್ತವ್ಯಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಿರುವುದರಿಂದ ಹುದ್ದೆ ವಂಚಿತ ಆರ್ಹರಲ್ಲಿ ಆಶಾಭಾವ ಮೂಡಿದೆ.

ಜಿಲ್ಲೆಯ 58 ಸೇರಿ ರಾಜ್ಯಾದ್ಯಂತ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇವುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಕೆಲವರು ಪಿಎಚ್.ಡಿ ಪದವಿ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಹುದ್ದೆ ಗಿಟ್ಟಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಕುರಿತು ದೂರು ಕೇಳಿಬಂದ ಹಿನ್ನೆಲೆ ಎಚ್ಚೆತ್ತುಕೊಂಡ ಕಾಲೇಜು ಶಿಕ್ಷಣ ಇಲಾಖೆ, ನಕಲಿ ಮತ್ತು ಅಸಲಿ ಪ್ರಮಾಣಪತ್ರಗಳನ್ನು ಪರಿಶೀಲಿಸುವತ್ತ ಚಿತ್ತ ನೆಟ್ಟಿದೆ. ಈ ಕುರಿತು ಆಯಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಫೆ.4, 2026ರಂದು ಪತ್ರ ರವಾನಿಸಿ ಹೊರರಾಜ್ಯದಿಂದ ಪಿಎಚ್.ಡಿ ಪದವಿ ಪಡೆದು ಬಂದು, ತಮ್ಮಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಿದೆ.

ಬೆಳವಣಿಗೆಗೆ ಕಾರಣ: ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ

ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ನಿಯಮಾವಳಿ ಪ್ರಕಾರ నేటో ಅಥವಾ ಪದವಿ ಪೂರ್ಣಗೊಳಿಸಿರಬೇಕು. ಹೀಗಾಗಿ ಹುದ್ದೆ ಉಳಿಸಿಕೊಳ್ಳಲು ತರಾತುರಿಯಲ್ಲಿ ಹೊರ ರಾಜ್ಯದಿಂದ ಕೆಲವರು ನಕಲಿ ಪ್ರಮಾಣ ಪತ್ರ ಪಡೆದು ಸಲ್ಲಿಸಿದ್ದಾರೆ ಎಂಬ ದೂರು ಕೇಳಿಬಂದಿವೆ. ಹುದ್ದೆಯಿಂದ ವಂಚಿತಗೊಂಡ ಅರ್ಹರೇ ಈ ಬಗ್ಗೆ ಮಾಹಿತಿಹಕ್ಕು.

ಫೆ.6 ರಂದು ಮಾತೊಂದು ಆದೇಶ ಹೊರಡಿಸಲಾಗಿದೆ.

ವಿಶೇಷಚೇತನ ಅತಿಥಿ ಉಪನ್ಯಾಸಕರ ಅಂಗವೈಕಲ್ಯದ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆಗೊಳಪಡಿಸಿ, ನೈಜತೆ, ದೃಢೀಕರಣ ಪಡೆದಿರುವ ಬಗ್ಗೆ ಪರಿಶೀಲಿಸಲು ಹೇಳಿದೆ. ಇದರ ಉಸ್ತುವಾರಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ವರದಿ ಸಲ್ಲಿಸಲು ಹೇಳಿದೆ. ಈ ಹಿನ್ನೆಲೆ ಅಗತ್ಯ ದಾಖಲೆಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಕೆಲಸ ಸಾಗಿದೆ.
ನಕಲಿ PhD certificate' s
ಹೊರ ರಾಜ್ಯದಿಂದ ಪಿಎಚ್‌.ಡಿ

ಪದವಿ ಪಡೆದು ಅತಿಥಿ ಉಪನ್ಯಾಸಕ ರಾಗಿ ಕಾರ್ಯ ನಿರ್ವಹಿಸುತ್ತಿ ರುವವರ ದಾಖಲೆ ಪರಿಶೀಲಿಸುವ ಪ್ರಕ್ರಿಯೆ ನಡೆದಿದೆ. ನಮ್ಮ ಕಾಲೇಜಿನಲ್ಲಿ ಒಟ್ಟು 58 ಅತಿಥಿ ಉಪನ್ಯಾಸಕರಿದ್ದು, ಅನುಮಾನ ಇರುವವರಿಗೆ ನೋಟಿಸ್‌ ಕೊಡಲಾಗಿದೆ. ಪೂರಕ ದಾಖಲೆಗಳನ್ನು ಕಾಲೇಜು ಶಿಕ್ಷಣ ಇಲಾಖೆ ಪೋರ್ಟಲ್ ಮೂಲಕ ಅಪ್ ಲೋಡ್ ಮಾಡಲಾಗುತ್ತಿದೆ.

FAKE PH.D CERTIFICATE

-ಪ್ರೊ.ಯಂಕಣ್ಣ ಪ್ರಾಂಶುಪಾಲರು, ಪ್ರಥಮ ದರ್ಜೆ ಕಾಲೇಜು, ರಾಯಚೂರು

ಈ ಮಧ್ಯೆ ವಾಮಮಾರ್ಗದ ಮೂಲಕ ಹುದ್ದೆ ಗಿಟ್ಟಿಸಿಕೊಂಡವರು ಆತಂಕಗೊಂಡಿದ್ದಾರೆ. ಕೆಲವರು ಈಗಾಗಲೇ ಸ್ವಯಂಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿ ಹೊರನಡೆದಿರುವುದು ನಡೆದಿದೆ. ಒಟ್ಟಾರೆ, ಆಸಲಿ, ನಕಲಿ ಬಗ್ಗೆ ಗಹನವಾಗಿ ಚರ್ಚೆಯಾಗುತ್ತಿದೆ. ಪ್ರಭಾವಿಗಳ ಮೂಲಕ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸುತ್ತಿದ್ದಾರೆ. ಆಯಾ ಕಾಲೇಜು ಪ್ರಾಂಶುಪಾಲರು ಸೇರಿ ಉನ್ನತ ಹುದ್ದೆಯಲ್ಲಿರುವ ಅಧಿ ಕಾರಿಗಳ ಮೇಲೆ ಒತ್ತಡ ಹೇರಿ ವಿಷಯ ಬಹಿರಂಗವಾಗದಂತೆ, ಹುದ್ದೆಗೆ ಪೆಟ್ಟು ಬೀಳದಂತೆ ತಡೆಯಲು ತೆರೆಮೆರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ದೃಢ ನಿಲುವು ತಳೆಯಲಾಗದ, ಒತ್ತಡಕ್ಕೆ ಒಳಗಾದ ಕೆಲ ಪ್ರಾಂಶುಪಾಲರು ಖುದ್ದು ಆಯುಕ್ತರನ್ನು ಭೇಟಿಯಾಗಿ ಅಸಲಿ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಗೆ ತಂಡ ರಚಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಕೋರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿಶೇಷಚೇತನ ಅತಿಥಿ ಉಪನ್ಯಾಸಕರ ಅಂಗವೈಕಲ್ಯದ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆಗೊಳಪಡಿಸಿ, ನೈಜತೆ, ದೃಢೀಕರಣ ಪಡೆದಿರುವ ಬಗ್ಗೆ ಪರಿಶೀಲಿಸಲು ಹೇಳಿದೆ. ಇದರ ಉಸ್ತುವಾರಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ವರದಿ ಸಲ್ಲಿಸಲು ಹೇಳಿದೆ. ಈ ಹಿನ್ನೆಲೆ ಅಗತ್ಯ ದಾಖಲೆಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಕೆಲಸ ಸಾಗಿದೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology