Home » ಲೈವ್ ನ್ಯೂಸ್ » ಭ್ರಷ್ಟಾಚಾರದಲ್ಲಿ ಎಕಲಾರ ಪಂಚಾಯತ ತ್ತೊಡಗಿರುವ ಪಿಡಿಒ ವಿರುದ್ಧ ದೂರು.

ಭ್ರಷ್ಟಾಚಾರದಲ್ಲಿ ಎಕಲಾರ ಪಂಚಾಯತ ತ್ತೊಡಗಿರುವ ಪಿಡಿಒ ವಿರುದ್ಧ ದೂರು.

Facebook
X
WhatsApp
Telegram

ಔರಾದ.17.ಮಾರ್ಚ್.26: ಬೀದರ ಜಿಲ್ಲೆಯ ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಈ ಭ್ರಷ್ಟಾಚಾರದಲ್ಲಿ ಪಂಚಾಯತ್ ತೊಡಗಿರುವ ಗುತ್ತಿಗೆದಾರನ ಮತ್ತು ಔರಾದ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ.

ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, 2021-22ನೇ ಸಾಲಿನಲ್ಲಿ ಬೀದರ ಜಿಲ್ಲೆಯ ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ರೂ. 24.00 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಮತ್ತು ಕಂಪೌಂಡ್ ಗೋಡೆ ಕಾಮಗಾರಿ ಪೂರ್ಣಗೊಂಡಿದ್ದು, ಆದರೆ ಸದರಿ ಕಾಮಗಾರಿಯು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿರುವುದು ನಾವು ಸ್ಥಳಕ್ಕೆ ಹೋಗಿ ವೀಕ್ಷಿಸಿದಾಗ ಕಂಡುಬಂದಿರುತ್ತದೆ.

ಮಾನ್ಯರೆ, ನದರಿ ಅಂಗನವಾಡಿ ಕಟ್ಟಡದ ಹತ್ತಿರ 3 ತೆರೆದ ಬಾವಿಗಳಿದ್ದು, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಹೊರಗಡೆ ಬಂದು ಆಟವಾಡುತ್ತಾರೆ. ಇದರಿಂದ ಅನಾಹುತವಾಗುವ ಸಾಧ್ಯತೆ ಇರುತ್ತದೆ.

ಈ ವಿಷಯವು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲುಕಾ ಪಂಚಾಯತ್, ಔರಾದ (ಬಿ) ಇವರಿಗೆ ದೂರು ಸಲ್ಲಿಸಿರುತ್ತೇವೆ ಹಾಗ ಮಾನ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಎಕಲಾರ ಇವರಿಗೂ ಕೂಡ ಸದರಿ ಅಂಗನವಾಡಿ ಕಟ್ಟಡವು ಪಂಚಾಯತ್ ವಶಕ್ಕೆ ತೆಗೆದುಕೊಳ್ಳದಂತೆಯೂ ಮೂಲಕ ತಿಳಿಸಿರುತ್ತೇವೆ. ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡದೇ, ವೀಕ್ಷಿಸದೇ, ಸದರಿ ಅಂಗನವಾಡಿ ಕಟ್ಟಡವು ಪಂಚಾಯತ್‌ ವಶಕ್ಕೆ ಪಡೆದುಕೊಂಡು, s ಭ್ರಷ್ಟಾಚಾರದಲ್ಲಿ ಗುತ್ತಿಗೆದಾರನಲ್ಲದೇ ಶಾಮಿಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಕೂಡ ದೂರಿನ .. ಕೂಡ

ಆದ್ದರಿಂದ ಈ ಕಾರ್ಯನಿರ್ವಾಹಕ ಭ್ರಷ್ಟಾಚಾರದಲ್ಲಿ ಶಾಮಿಲಾದ ಗುತ್ತಿಗೆದಾರ, ಅಧಿಕಾರಿಗಳು ತಾಲುಕಾ ಪಂಚಾಯತ್ ಔರಾದ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಔರಾದ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಎಕಲಾರ ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು,. ಗುತ್ತಿಗೆದಾರನ ಹೆಸರು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.

ಒಂದು ವೇಳೆ ತಾವು ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡಲಾಗುವುದೆಂಬ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology