ಬೆಂಗಳೂರು.10.ಮಾರ್ಚ್.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 20 ಮಂದಿ ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳು ನೈಜತೆಯಿಂದ ಕೂಡಿರುವುದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.
ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ರಾಜ್ಯದ ವಿವಿಧೆಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 20 ಜನ ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳು ನೈಜತೆಯಿಂದ ಕೂಡಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ, ಕಾಲೇಜು ಹಂತದಲ್ಲಿ ಈವರೆಗೂ ಪರಿಶೀಲಿಸಲಾಗಿರುವ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಮತ್ತು ಇತರ ಪ್ರಮಾಣಪತ್ರಗಳ ನೈಜತೆ ಪೈಕಿ 20 ಅತಿಥಿ ಉಪನ್ಯಾಸಕರು ಹಾಜರುಪಡಿಸಿರುವ ದಾಖಲೆಗಳು ನೈಜತೆಯಿಂದ ಕೂಡಿರುವುದಿಲ್ಲವೆಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿರುತ್ತದೆ ಎಂದಿದ್ದಾರೆ. ಅಂತೆಯೇ ಅಂಗವಿಕಲ-5, ಪಿಎಚ್ .ಡಿ-10, ಎಂ.ಫಿಲ್-1 ಮತ್ತು ಸ್ನಾತಕೋತ್ತರ ಪದವಿ-4 ಸೇರಿದಂತೆ ಒಟ್ಟು 20 ಜನ ಅತಿಥಿ ಉಪನ್ಯಾಸಕರು ಹಾಜರುಪಡಿಸಿದ ಪ್ರಮಾಣಪತ್ರ ನಕಲಿ ಎಂದು ತಿಳಿಸಿದ್ದಾರೆ.






Any questions related to ರಾಜ್ಯದ ವಿವಿಧೆಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಂದ ನಕಲಿ ಪ್ರಮಾಣಪತ್ರ?