ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬೇಳಕುಣಿ ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 2 ರಲ್ಲಿರುವ ಆಸ್ತಿ ಸಂಖ್ಯೆ 2-156 ಹಾಗೂ 2-156/1 ರಲ್ಲಿರುವ ಸಾರ್ವಜನಿಕ / ತಾತ್ಕಾಲಿಕ ಮಾಲೀಕತ್ವದ ತಿಪ್ಪೆ ಜಾಗದಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಅಧಿಕೃತ ಅನುಮತಿ ಇಲ್ಲದೆ ನೀಲಿ ಧ್ವಜ ಹಾಗೂ ಅಶೋಕ್ ಸ್ಥಂಭದ ಕಂಬವನ್ನು ನೆಟ್ಟು ಅಕ್ರಮವಾಗಿ ಕಬಳಿಸಿರುವ ಘಟನೆ ಸುಮಾರು 12 ದಿನಗಳ ಹಿಂದೆ ನಡೆದಿದೆ.
ಈ ಕುರಿತು ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬರವಣಿಗೆಯ ಮೂಲಕ ತಿಳಿಸಿದರೂ ಸಹ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಗ್ರಾಮಸ್ಥರ ಆಕ್ಷೇಪವಾಗಿದೆ.
ಸಾರ್ವಜನಿಕ ಜಾಗವನ್ನು ಯಾವುದೇ ಒಂದು ಸಮುದಾಯದ ಹೆಸರಿನಲ್ಲಿ ಕಬಳಿಸಲು ಅವಕಾಶ ನೀಡಿದರೆ ಭವಿಷ್ಯದಲ್ಲಿ ಗ್ರಾಮದಲ್ಲಿ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ಜಾಗವನ್ನು ಅಕ್ರಮ ಕಬಳಿಕೆಯಿಂದ ರಕ್ಷಿಸಿ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
– ಬೇಳಕುಣಿ ಬಿ ಗ್ರಾಮದ ಗ್ರಾಮಸ್ಥರು






Any questions related to ಬೇಳಕುಣಿ ಬಿ ಗ್ರಾಮದಲ್ಲಿನ ಸಾರ್ವಜನಿಕ ತಿಪ್ಪೆ ಜಾಗ ಅಕ್ರಮ ಕಬಳಿಕೆ ಕುರಿತು.?