Home » ಲೈವ್ ನ್ಯೂಸ್ » ಒಳಮೀಸಲಾತಿ ಅನ್ಯಾಯ ಖಂಡಿಸಿ ಔರಾದ ಬಂದ್ ಮಾಡಿ ಬೃಹತ್‌ ಪ್ರತಿಭಟನೆ

ಒಳಮೀಸಲಾತಿ ಅನ್ಯಾಯ ಖಂಡಿಸಿ ಔರಾದ ಬಂದ್ ಮಾಡಿ ಬೃಹತ್‌ ಪ್ರತಿಭಟನೆ

Facebook
X
WhatsApp
Telegram

ಔರಾದ.07.ಮಾರ್ಚ್ .26: ಪ್ರರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಶುಕ್ರವಾರ ಔರಾದ ಪಟ್ಟಣ ಬಂದ್ ಮಾಡಿ ಬಲಗೈ ಸಮುದಾಯಗಳ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಬಹುತೇಕ ಅಂಗಡಿ-ಮುಂಗಟ್ಟು ಮುಚ್ಚಿ ವರ್ತಕರು ಬಂದ್‌ಗೆ ಬೆಂಬಲ ನೀಡಿದರು ಪಟ್ಟಣ ವ್ಯಾಪಾರಗಳು  ಸ್ವಾ ಇಚ್ಛೆಯಿಂದ ಬಂದ ಮಾಡಿ ಬೆಂಬಲ ಸೂಚಿಸಿದರು ,

ಶಾಲಾ-ಕಾಲೇಜುಗಳ ತರಗತಿಗಳು ಎಂದಿನಂತೆ ನಡೆದವು. ಸಾರಿಗೆ ಬಸ್‌ಗಳು, ಆಟೊಗಳು ಸಂಚರಿಸಿದವು. ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಿದರು.ಪಟ್ಟಣದ ಎಪಿಎಂಸಿ ಕ್ರಾಸ್  ದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು  ಬಸ್ ಸ್ಟಾಂಡ್ ಹತ್ತಿರ ರಾಜ್ಯಪಾಲರಿಗೆ ಬರೆದ ಮನವಿ  ಹೋರಾಟ ಸಮಿತಿ ತಾಲೂಕು ಅದೇಕ್ಷ ಪ್ರವೀಣ ಕುಮಾರ ಕಾರಂಜಿ ಮನವಿ ಪತ್ರವನ್ನು ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಸಲ್ಲಿಸಿದರು  ಸಮಿತಿಯ ಮುಖಂಡರು ಮಹೇಶ ಗೋರ್ನಾಳಕಾರ ಮಾತನಾಡಿ, ‘ಒಳಮೀಸಲಾತಿ ಜಾರಿಯಿಂದ ಹಲವು ವರ್ಗಗಳಿಗೆ ಬಹಳ ದೊಡ್ಡ ಅನ್ಯಾಯವಾಗಲಿದೆ.

ರೋಸ್ಟರ್ ಬಿಂದುವನ್ನು ಕಡಿಮೆ ಸಂಖ್ಯೆಯ ನೇಮಕಾತಿಗಳಲ್ಲಿ ಸಮತೋಲನ ಸಾಧಿಸುವಂತೆ ಕಾಯ್ದೆ ರೂಪಿಸಬೇಕು. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯ ನೇಮಕ ನಡೆಯುವಾಗ ಒಳಮೀಸಲು ಹಂಚಿಕೆಯಲ್ಲಿ ವ್ಯತ್ಯಾಸವಾಗವುದಿಲ್ಲ. ಆದರೆ ಬೆರಳೆಣಿಕೆ ಹುದ್ದೆಯ ನೇಮಕ ವೇಳೆ ಪ್ರವರ್ಗ-ಎಗೆ ಸಿಕ್ಕ ಪ್ರಾಧಾನ್ಯತೆ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗೆ ಸಿಗುವುದೇ ಇಲ್ಲʼ ಎಂದು ಹೇಳಿದರು.

ಹಿರಿಯ ಮುಖಂಡ ಅಂಕುಶ ಗೋಖಲೆ ಮಾತನಾಡಿ ಅಣ್ಣ ತಮ್ಮ ರಂತೆ ಇರುವ ಹೋಲಿಯ ಮಾದಿಗರನು ಕೆಲವು ರಾಜಕೀಯ ದವರ ಮಾತು ಕೇಳಿ ಬೆಂಕಿ ಹಚ್ಚುವ ಕೆಲಸ ಮಾಡುತಿದಾರೆ ಎoದು ಆಕ್ರೋಶ ವೇಕ್ತಪಡಿಸಿದರು ಪ್ರತಿಭಟನೆಯ ವೇಳೆ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ಶ್ರೀ ಸುಭಾಷ ಲಾಧಾ ಹಾಗೂ ಶ್ರೀ ಪ್ರವೀಣ ಕಾರಂಜೆ ಅವರು, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ನೀಡಿದ ಶಿಫಾರಸ್ಸುಗಳನ್ನು ಸರಿಯಾಗಿ ಜಾರಿಗೊಳಿಸಿದ್ದರೆ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಒತ್ತಡಗಳು ಮತ್ತು ತೀರ್ಮಾನಗಳಿಂದ ರೋಸ್ಟರ್ ವ್ಯವಸ್ಥೆಯ ಸಮತೋಲನ ಹದಗೆಟ್ಟಿದ್ದು, ಕೆಲವು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Aq
ಶ್ರೀ ಸುಭಾಷ ಲಾಧಾ” ಶ್ರೀ ಸಂಜುಕುಮಾರ ಲಾಧಾ ಶ್ರೀ ಸಂತೋಷ ಕೆ ಶಿಂದೆ ಶ್ರೀ ಧನಾಜಿ ಕಾಂಬಳೆ ಶ್ರೀ ದಿನೇಶ ಶಿಂದೆ
ಶ್ರೀ ತುಕಾರಾಮ್ ಹಸ್ನಮುಖ ಶ್ರೀ ಅಖಿಲೇಶ ಸಾಗರ ಶ್ರೀ ಪ್ರಕಾಶ ಕಾಂಬಳೆ. ಶ್ರೀ ಸುನೀಲ್ ಮಿತ್ರಾ, ಶ್ರೀ ಪ್ರಕಾಶ ಭಂಗಾರೆ. ಶ್ರೀ ಸಂತೋಷ ಸೂರ್ಯವಂಶಿ, ಶ್ರೀ ರತ್ನದೀಪ ಕಸ್ತೂರೆ. ಶೀ ಆನಂದ ಕಾಂಬಳೆ ಶ್ರೀ ಮಾರುತಿ ಜಗದಾಳೆ,
ಶ್ರೀ ಅನೀಲ್ ಭುಜಂಗ ಶ್ರೀ ಉತ್ತಮ ಗಾಯಕವಾಡ ಶ್ರೀ ಸೂರ್ಯಕಾಂತ ರಕ್ಷಾಳೆ ಶ್ರೀ ಕಾಂತೇಶ ಭಾಲ್ಕೆ ಶ್ರೀ ವಿನೋದ ಡೋಳೆ  ಶ್ರೀ ರವಿ ನಾಗೂರೆ ಶ್ರೀ ಸೋನು ನಾಗೂರೆ
ಶ್ರೀ ರಾಹುಲ ಭೋರೆ ಶ್ರೀ ಗಣಪತಿ ವಾಸುದೇವ.

ಶ್ರೀ ಉತ್ತಮ ಮಾಂತ್ರಿಕರ. ಶ್ರೀ ಗೌತಮ ಮೇತ್ರ ಶ್ರೀ ಶಿವು ಕಾಂಬಳೆ.. .ಶ್ರೀ ಆನಂದ ಗಲಗಲೆ. ಶ್ರೀ ನರೇಂದ್ರ ಮೋರೆ. ಶ್ರೀಶಿದ್ವಾರ್ಥ ಬೋಸ್ಥೆ, ಶ್ರೀ ಬಸವರಾಜ ಕಾರೆಬಳೆ.ಹಾಗೂ ಮುಖಂಡರು ಹಾಗೂ ಮಹಿಳೆಯರು ಭಾಗಿಯಾಗಿದರು

ಒಳಮೀಸಲಾತಿ ಅನ್ಯಾಯ ಹೋರಾಟ ಸಮಿತಿ ತಾಲೂಕ ಅದೇಕ್ಷರಾದ ಪ್ರವೀಣಕುಮಾರ ಕರಂಜಿ ಅವರು ವಿಶೇಷವಾಗಿ ತಾಲೂಕಿನ ವ್ಯಾಪಾರಸ್ತರಿಗೂ ಪೊಲೀಸ ಇಲಾಖೆ ಹಾಗೂ ವರದಿಗಾರರಿಗೂ  ಧನ್ಯವಾದ ತಿಳಿಸುದರು

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology