Home » ಲೈವ್ ನ್ಯೂಸ್ » ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ

ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ

Facebook
X
WhatsApp
Telegram

ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ (ಹೊಲೆಯ) ಆಗಿರುವ ಅನ್ಯಾಯವನ್ನು ಖಂಡಿಸಿ ಒಂದು ದಿನದ ಔರಾದ(ಬಾ) ಪಟ್ಟಣ ಬಂದ್ ಕರೆ ಹಾಗೂ ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಮನವಿ ಸಲ್ಲಿಸಲಾಗಿದೆ.

ಅಗಸ್ಟ-1,2024 ರಂದು ಸುಪ್ರಿಂ ಕೋಟ್ ನೀಡಿದ ತಿರ್ಪಿನ ಮೂಲಕ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗಿಕರಣ ಮಾಡುವ ಅಧಿಕಾರವನ್ನು ನೀಡಿದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೋಳಿಸಲು ಸುಪ್ತಂ ಕೋರ್ಟ ನಿಯಮಾವಳಿಯಂತೆ 101 ಸಮುದಾಯಗಳ ಸಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು ಸದರಿ ಆಯೋಗವು ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಸರ್ಕಾರವು ಅದನ್ನು ಕ್ಯಾಬಿನೇಟನಲ್ಲಿ ಚರ್ಚಿಸಿ, ಪರಿಶೀಲಿಸಿ, ಕೆಲವು ತಿದ್ದುಪಡಿವಂದಿಗೆ ಪ್ರವರ್ಗ-ಎ.ಬಿ ಮತ್ತು ಸಿ ಎಂದು ವರ್ಗಿಕರಿಸಿ ಗೇಜೆಟ ಅಧಿಸೂಚನೆ ಹೊರಡಿಸಿತ್ತು.

ಈ ಕ್ರಮದಿಂದಾಗಿ ಸಂವಿಧಾನ ಆರ್ಟಿಕಲ್-14(4) ಮತ್ತು 16(4). ಸಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ವ್ಯವಸ್ಥೆ ಮತ್ತು ಆರ್ಟಿಕಲ್-64 ರಾಜ್ಯದ ನಿರ್ದೇಶಕ ತತ್ವಗಳಲ್ಲಿ ಹಿಂದುಳಿದ ವರ್ಗಗಳ ಹಿತಾಸಕ್ತಿಯ ರಕ್ಷಣೆ ಮೂಲ ತತ್ರಗಳಿಗೆ ಅನುಗುಣವಾಗಿ ನಿಜವಾಗಿಯು ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸುವುದು.ಅಸಮಾನರಿಗೆ ಸಮಾನ ಅವಕಾಶ ಕಲ್ಪಿಸಲು ಸೂಕ್ತ ದಾರಿಯನ್ನು ಹುಡುಕುವುದೇ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರವರ ಸಮಾಜಿಕ ನ್ಯಾಯದ ಪರಿಕಲ್ಪನೆಯ ಉದ್ದೇಶವಾಗಿತ್ತು.

ಒಳ ಮೀಸಲಾತಿ ಜಾರಿಯಾದ ಮೇಲೆ ರೋಸ್ಟರ್ ನಿಗದಿಯಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿದ್ದು, ಪ್ರವರ್ಗ-ಎ ಯನ್ನು 1ನೇ ಸ್ಥಾನದಲ್ಲಿ, ಪ್ರವರ್ಗ-ಬಿ ಯನ್ನು 9ನೇ ಸ್ಥಾನದಲ್ಲಿ ಹಾಗೂ ಪ್ರವರ್ಗ-ಸಿ ಯನ್ನು 15ನೇ ಸ್ಥಾನದಲ್ಲಿ ನಿಗದಿಪಡಿಸಿರುವ ಪ್ರಯೋಗಿಕವಾಗಿ ಇದು ಸಮಾನ ಅವಕಾಶವನ್ನು ಖಚಿತಪಡಿಸುತ್ತದೆಯೇ ಎಂಬ ಅನುಮಾನ ಹಾಗೂ ಪಶ್ನೆ ಕೋರ್ಟ ತೀರ್ಪು ಬಂದ ನಂತರ ತಾತ್ವಿಕವಾಗಿ ಬಹುತೇಕ ಸಮುದಾಯಗಳು ಮತ್ತು ನಾಯಕರುಗಳು ಒಪ್ಪಿಕೊಂಡಿದರು.

ಉದ್ದವಿಸಿದೆ ಇಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವುದಕ್ಕೆ ಆರಂಭದಲ್ಲಿ ವೀರೋದವಿದ್ದರೂ ಸುಪ್ರಿಂ ರೋಸ್ಪರ ಕೋಸಕ ಸಿದ್ದಪಡಿಸುವಾಗ ಸಮತೋಲನ ಕಾಪಾಡದಿದ್ದರೇ ಪರಿಶಿಷ್ಟ ಜಾತಿಗಳಿಗೆ ಕಡಿಮೆ ಹುದ್ದೆಗಳ ನೇಮಕಾತಿ ನಡೆಯುವ ಸಂದರ್ಭದಲ್ಲಿ ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಸಮುದಾಯಗಳು ಸಂಪೂರ್ಣವಾಗಿ ಅವಕಾಶದಿಂದ ವಂಚಿತರಾಗುವ ಅಪಾಯ ಎದ್ದು ಕಾಣುತ್ತಿದೆ, ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ಅರ್ಹಅಭ್ಯಾರ್ಥಗಳು ಇದ್ದರೂ ಅವರು ಸ್ಪರ್ಧಿಸಲು ಎಲ್ಲ ರೀತಿಯ ಅರ್ಹತೆ ಇದ್ದಾಗಿಯು ಅವರಿಗೆ ಸ್ಪರ್ಧಿಸುವ ಅವಕಾಶ ಸಿಗದ ಇದನ್ನು ಸಮಾಜಿಕ ನ್ಯಾಯ ಎಂದು ಹೇಳಲಾಗುತ್ತದೆಯೇ ಇಂತಹ ಘಟನೆಗಳು ಕಠಿಣ ಪರಿಶ್ರಮದಿಂದ, ಹೆಚ್ಚು ಅಭ್ಯರ್ಥಯಲ್ಲಿ ಅಸಮತೋಲನ ಹುಟ್ಟಿಸುವದಷ್ಟೇ ಅಲ್ಲದೇ ಅವರನ್ನು ಡಿ ಮೋಟವೈಟ್ ಮಾಡಿದ ಹಾಗಾವ ಮೀಸಲಾತಿಯ ಉದ್ದೇಶವು ಅವಕಾಶದ ಸಮಾನತೆಯನ್ನು ಸಾಧಿಸುವುದು, ಹಾಗಂತ ಅದು ಸಮಾನತೆ

ಹೆಸರಿನಿಂದ ಮತ್ತೊಂದು ಅಮಾನತೆಯನ್ನು ಸೃಷ್ಟಿಸಬಾರದು, ಸಮಾನತೆ ಎಂಬ ಮೂಲಭೂತ ಹಕ್ಕಿನ ವಿರುದ್ಧವಾಗಿರಬಾ ಎಂದು ಸುಪ್ರಿಂ ಕೋರ್ಟ ತನ್ನ ಅನೇಕ ತೀರ್ಪುಗಳಲ್ಲಿ ಸ್ಪಷ್ಟ ಪಡಿಸಿರುತ್ತದೆ. ಒಳ ಮೀಸಲಾತಿ ಜಾರಿ ಆಗುವ ಮುಂಚೆ ರೊ ಬಿಂದುವಿನಲ್ಲಿ ಪರಿಶಿಷ್ಟ ಜಾತಿಯ ಕ್ರಮ ಸಂಖ್ಯೆ (1) ರಲ್ಲಿ ಇತ್ತು ಆದರೆ ಒಳ ಮೀಸಲಾತಿ ಜಾರಿ ಆದ ಮೇಲೆ ಪದ ಜಾತಿಯಲ್ಲಿನ ಪ್ರವರ್ಗ-ಎ, ಬಿ, ಮತ್ತು ಸಿ ಎಂದು ವಿಂಗಡಿಸಿ, ಪ್ರವರ್ಗ-ಎ ಗೆ 1ನೇ ಸ್ಥಾನ, ಪ್ರವರ್ಗ-ಬಿ ಗೆ 9ನೇ ಹಾಗೂ ಪ್ರವರ್ಗ-ಸಿ ಗೆ 15ನೇ ಸ್ಥಾನ ನೀಡಲಾಗಿರುತ್ತದೆ, ಹೀಗಾಗಿ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗಳಿಗೆ ಬಹಳ ಡಿ ಅನ್ಯಾಯವಾಗಲಿದೆ. ರೋಸ್ಟರ ಬಿಂದುವನ್ನು ಕಡಿಮೆ ಸಂಖ್ಯೆಯ ನೇಮಕಾತಿಗಳಲ್ಲಿ ಸಮತೋಲನ ಸಾಧಿಸುವಂತೆ ಕಾ ರೂಪಿಸಬೇಕು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯ ನೇಮಕ ನಡೆಯುವಾಗ ಒಳ ಮೀಸಲು ಹಂಚಿಕೆದ ವ್ಯತ್ಯಾಸವಾಗುವುದಿಲ್ಲಾ ಆದರೇ ಬೆರಳೆಣಿಕೆ ಹುದ್ದುಯ ನೇಮಕ ಬೆಳೆ ಪ್ರವರ್ಗ-ಎ ಗೆ ಸಿಕ್ಕ ಪ್ರಾಧ್ಯಾನ್ಯತೆ ಪ್ರವರ್ಗ-ಬಿ – ಪ್ರವರ್ಗ-ಸಿ ಗೆ ಸಿಗುವುದೇ ಇಲ್ಲ, ಸರ್ಕಾರದ ಇಲಾಖೆಯ ಎಲ್ಲಾ ಹುದ್ದುಗಲು ಫೋಲ್ ಮಾಡಿಕೊಂಡು ಹೆಚ್ಚು ನೆಮಹ ಮಾಡಿದರೆ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಂತಾಗುತ್ತದೆ. ನ್ಯಾಯಮೂರ್ತಿ ನಾಗಮೋಹನದಾಸ ಆಯೋಗ ಕೆ ಶೀಫಾರಸ್ಸಿನಂತೆ ಪ್ರವರ್ಗಗಳ ಹಂಚಿಕೆಯಾಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ, ಆದರೆ ರಾಜಕೀಯ ತಿರ್ಮಾನದಿಂದ ಸಮ ಹೆಚ್ಚಾಗಿದೆ.ಸರ್ಕಾರ ತೀರ್ಮಾನ ಮಾಡುವಾಗ ದೊರದೃಷ್ಟಿಯಲ್ಲಿ ಆಲೋಚಿಸಲಿಲ್ಲಾ ಸಮಾಜಿಕ ನ್ಯಾಯ ಎನ್ನುವುದು ಕೇವ ರಾಜಕೀಯ ಘೋಷಣೆಯಾಗದೇ ಅದು ಸಂವಿಧಾನದ ಆತ್ಮವಾಗಿ ಉಳಿಯಬೇಕಾಗಿದೆ ಸರ್ಕಾರದ ನೀತಿಗಳನ್ನು ರೊಪಿಸ ಸ್ಥಾನದಲ್ಲಿರುವ ಮುಖ್ಯ ಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳಿಗೆ ರೋಸ್ಪರ ಬಿಂದುವಿನಲ್ಲಾಗಿರುವ ಇಂತಹ ಸಮಸ್ಯೆ-ಅವರ ಗಮನಕ್ಕೆ ಬಂದಿಲ್ಲವೆಂದರೇ ಇದು ನಿಜಕ್ಕೂ ಘೋರ ದುರಂತರವೇ ಸರಿ, ಇದು ಪ್ರವರ್ಗ-ಬಿ, ಮತ್ತು ಪ್ರವರ್ಗ ಸಮುದಾಯಗಳಿಗೆ ಮರಣ ಶಾಸನವಾಗಿದೆ.

ಆರ್ಟಿಕಲ್-38 ರಾಜ್ಯಕ್ಕೆ ಸಮಾಜಿಕ,ಆರ್ಥಿಕ, ಮತ್ತು ರಾಜ್ಯಕೀಯ ನ್ಯಾಯ ಸಾಧಿಸಲು ನಿರ್ದೇಶಿಸುತ್ತ ಆದುದ್ದರಿಂದ ಒಳ ಮೀಸಲಾತಿಯ ಮೂಲ ಉದ್ದೇಶವನ್ನು ಕಾಪಾಡಿಕೊಳ್ಳಲು ಅದರ ಜೊತೆಗೆ ಅನುಷ್ಠಾನದಲ್ಲಿ ಉಂಟಾಗಿದೆ-ಅಸಮತೋಲನವನ್ನು ಹಾಗೂ ನ್ಯೂನ್ಯತೆಯನ್ನು ಸರಿಪಡಿಸಲು ಸರ್ಕಾರ ಮತ್ತು ಎಲ್ಲಾ ಸಮುದಾಯಗಳ ನಾಯಕರುಗ ಮುಂದಿರುವ ಸವಾಲು ಮತ್ತು ಹೊಣೆಗಾರಿಕೆ ಆಗಿರುತ್ತದೆ. ಅದುದ್ದರಿಂದ ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಗೆ ಮರ ಶಾಸನವಾಗಿರುವ ಈ ಒಳ ಮೀಸಲಾತಿ ಕಾಯ್ದೆಯನ್ನು ಮಾನ್ಯ ರಾಜ್ಯಪಾಲರು ಶೀಘ್ರವೇ ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇ ಮತ್ತು ಆಗಿರುವ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿ ದಿನಾಂಕ:06/03/2026 ರಂದು ಬೀದ ಸರ್ಕಾರವು ಉನ್ನತ ಮಟ್ಟಡ ಸಮೀತಿಯನ್ನು ರಚಿಸಿ, ರೋಸ್ಟರ್ ಬಿಂದುವನ್ನು ಮರು ಪರಿಶೀಲಿಸಬೇಕು ಎಂದು ಈ ಮೂಲ ಜಿಲ್ಲೆಯ ಔರಾದ(ಬಾ) ಪಟ್ಟಣ ಬಂದ್ ಕರೆ ಹಾಗೂ ಬೃಹತ ಪ್ರತಿಭಟನಾ ರ್ಯಾಲಿ ಮೂಲಕ ತಮ್ಮ ಗಮನಕ್ಕೆ ತರಬಯಸುತಾ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಹೋರಾಟ ಸಮಿತಿ ಔರಾದ(ಬಾ) ಮೂಲಕ ಆಗ್ರಹಪಡಿಸುತ್ತಾ, ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ಇಡಿ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಗುತ್ತದೆ.

1) ರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆಗಳನ್ನು ಹಾಗೂ ಸರ್ಕಾರ ತಮಗೆ ಕಳುಹಿಸಿರುವ ಒಳ ಮೀಸಲಾತಿಯ ವರದಿಯನ್ನು ಪ್ರವರ್ಗ-ಬಿ ಮತ್ತು ಸಿ ರವರಿಗೆ ಮರಣ ಶಾಸನವಾಗಿದ್ದು. ಇದನ್ನು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇಕು.

2) ಪ್ರವರ್ಗ-ಎ, ಬಿ,ಸಿ ರವರಿಗೆ ಸಮಾನ ಅವಕಾಶ ಕಲ್ಪಿಸುವಂತಹ ಕಾಯ್ದೆಯನ್ನು ರೂಪಿಸಬೇಕು, ಮತ್ತು ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್‌ ಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕು.

3) ಪವರ್ಗ-ಎ,ಬಿ,ಸಿ, ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳ ಮೀಸಲಾತಿ ವರದಿಯ ಸಮಸ್ಯೆಯು ಬಗೆಹರಿಸುವ 純 ಪ್ರಸ್ತುತ ಶೈಕ್ಷಣಿಕ ವಲಯ ಮತ್ತು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯಚಟುವಟಿಕೆಗಳನ್ನು ಶೀಘ್ರವೇ ತಡೆ ಹಿಡಿಯಬೇಕು.

4) ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ, ಹಳೆ ಜಾತಿ ಪ್ರಮಾಣ ಪತ್ರವನ್ನೆ ಮುಂದೊರೆಸಬೆಕು.

5) ಒಳ ಮೀಸಲಾತಿಯ ಗೊಂದಲಗಳನ್ನು ಹಾಗೂ ನ್ಯೂನ್ಯತೆಗಳನ್ನು ಸರಿಪಡಿಸುವ ತನಕ ಹಳೆ ಮೀಸಲಾತಿ ಸನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology