Home » ಲೈವ್ ನ್ಯೂಸ್ » ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

Facebook
X
WhatsApp
Telegram

ಬೆಂಗಳೂರು.05.ಫೆಬ್ರವರಿ.26: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ(ನಿ)., ಬೆಂಗಳೂರು ಈ ಸಂಸ್ಥೆಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ವೃಂದದ ಒಟ್ಟು 34 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಅರ್ಜಿ ಮತ್ತು ಅರ್ಜಿ ಶುಲ್ಕವನ್ನು ಆನ್-ಲೈನ್ ಮುಖಾಂತರವೇ ಪಾವತಿಸತಕ್ಕದ್ದು.

ಅರ್ಜಿಗಳನ್ನು ಖುದ್ದಾಗಿ / ಅಂಚೆ / ಕೋರಿಯರ್ ಇತ್ಯಾದಿಗಳ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

ಅಭ್ಯರ್ಥಿಗಳು ಮಹಾಮಂಡಳದ ಅಧಿಕೃತ WEB SITE https://virtualofficeerp.com/ksccf2026 ಪರದೆಯ ಮೇಲೆ KSCCF RECURITMENT 2026 ಎಂದು ಮೂಡುತ್ತದೆ ಮತ್ತು ಅಧಿಸೂಚನೆ /ಸೂಚನೆಗಳನ್ನು ಕಡ್ಡಾಯವಾಗಿ ಓದತಕ್ಕದ್ದು. ಅಂತಿಮವಾಗಿ ನಿಯಮ ಮತ್ತು ಷರತ್ತುಗಳನ್ನು ಕೆಳಗಿನ ಚೆಕ್ ಬಾಕ್ಸ್ ಅನ್ನು ಒತ್ತುವ ಮೂಲಕ ಒಪ್ಪಿಕೊಳ್ಳತಕ್ಕದ್ದು ಹಾಗೂ NEW REGISTRATION ಗುಂಡಿಯನ್ನು ಒತ್ತಿ ಮುಂದುವರಿಯುವುದು.

ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ APPLY ಗುಂಡಿಯನ್ನು ಒತ್ತಿ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು. ಅರ್ಜಿಯನ್ನು ಭರ್ತಿ ಮಾಡಿದ ನಂತರ ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿಕೊಂಡು, ಎಲ್ಲಾ ವಿವರಗಳು ಸರಿಯಾಗಿರುತ್ತವೆ ಎಂದು ಖಚಿತ ಪಡಿಸಿಕೊಂಡ ನಂತರವೇ PREVIEW ಗುಂಡಿಯನ್ನು ಒತ್ತಿ ಮುಂದುವರಿಯುವುದು.

ಅರ್ಜಿಯ ಯಾವುದೇ ವಿವರಗಳ ಬದಲಾವಣೆ ಅಗತ್ಯವಿದ್ದರೆ ಪೂರ್ವದರ್ಶನ ಪುಟದಲ್ಲಿ EDIT ಗುಂಡಿಯನ್ನು ಒತ್ತಿ ನಿಮ್ಮ ಅರ್ಜಿಯಲ್ಲಿನ ಮಾಹಿತಿಗಳನ್ನು ಸರಿಪಡಿಸಿಕೊಂಡು ವಿವರಗಳು ಸರಿ ಇರುವುದನ್ನು ಖಚಿತಪಡಿಸಿಕೊಂಡು, ನಿಮ್ಮ ಸಹಿಯೊಂದಿಗಿನ ಪಾಸ್ ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿದ ಭಾವ ಚಿತ್ರವನ್ನು ಅಪ್ ಲೋಡ್ ಮಾಡುವ ಬಗ್ಗೆ NEXT ಗುಂಡಿಯನ್ನು ಒತ್ತುವುದು.

NOTE : ಈ ಹಂತದಲ್ಲಿ ಅಭ್ಯರ್ಥಿಯು ಕಂಪ್ಯೂಟರ್ ಪರದೆಯ ಮೇಲೆ ಮೂಡಲಾದ REGISTRATION ID ಯನ್ನು ತಪ್ಪದೇ ಬರೆದಿಟ್ಟುಕೊಳ್ಳಬೇಕು. ಅಭ್ಯರ್ಥಿಯು ನೋಂದಾಯಿಸಿದ E-MAIL / MOBILE 2 E-MAIL / MOBILE REGISTRATION ID ಮತ್ತು PASSWORD ಅನ್ನು ಕಳುಹಿಸಲಾಗುವುದು.

ಅಭ್ಯರ್ಥಿಯು EDIT APPLICATION ಗುಂಡಿಯನ್ನು ಒತ್ತಿ, ಅವರ REGISTRATION ID ಮತ್ತು NEXT PASSWORD ಅನ್ನು ಬಳಸಿ ತಮ್ಮ ವಿವರಗಳನ್ನು ಅಪ್ ಲೋಡ್ ಮಾಡಬಹುದು ಅಥವಾ ಅಪ್ ಲೋಡ್ ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು. ಅಭ್ಯರ್ಥಿಯು ತಾನು ಅಪ್ ಲೋಡ್ ಮಾಡಿದ ಎಲ್ಲಾ ಮಾಹಿತಿಗಳನ್ನು ಖಚಿತ ಪಡಿಸಿಕೊಂಡ ನಂತರವೇ NEXT ಗುಂಡಿಯನ್ನು ಒತ್ತುವುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology