Home » ಲೈವ್ ನ್ಯೂಸ್ » ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ

ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ

Facebook
X
WhatsApp
Telegram

ಬೆಂಗಳೂರು.05.ಫೆಬ್ರವರಿ.26: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿ.ಟಿ.ರವಿಯವರನ್ನು ಅಮಾನತು ಮಾಡಿದ್ದಾರೆ. ರಾತ್ರಿ 8.30 ಗಂಟೆಯೊಳಗೆ ಸಿ.ಟಿ.ರವಿ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್ನ ವಿಪಕ್ಷ ಮುಖ್ಯ ಸಚೆತರ್ ವತಿಯಿಂದ ಮಾಹಿತಿ ಲಭ್ಯ ವಾಗಿದೆ.

ಬಿಜೆಪಿ ಸದಸ್ಯ ಸಿ.ಟಿ.ರವಿ ಸಭಾಪತಿ ಆದೇಶಕ್ಕೆ ಗೌರವ ನೀಡಿರುವುದಿಲ್ಲ. ಹೀಗಾಗಿ ಸಿ.ಟಿ.ರವಿಯನ್ನು ಈ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದರಿಂದ ಪರಿಷತ್ ಸದಸ್ಯ ಸಿ.ಟಿ.ರವಿ ಬಂದರೆ ಹೊರಗೆ ನಿಲ್ಲಿಸಿ. ಯಾವ ಕಡೆಯಿಂದಲೂ ಅವರು ಒಳಗೆ ಬರತಕ್ಕದ್ದಲ್ಲ. ಎಲ್ಲಾ ಬಾಗಿಲಲ್ಲಿ ಇರುವವರಿಗೆ ಹೇಳಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪರಿಷತ್ನ ಚೀಫ್ ಮಾರ್ಷಲ್ಗೆ ಖಡಕ್ ಸೂಚನೆಯನ್ನು ಸೂಚಿಸಿದ್ದಾರೆ.

ಮೋದಿಗೆ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾನದ ನಾಲಿಗೆ ಎಂದು ಸಿಟಿ ರವಿಯವರು ಸದನದಲ್ಲೇ ಹೇಳಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಕೂಡಲೇ ಸಿಟಿ ರವಿ ಕ್ಷಮೆಯಾಚನೆ ಮಾಡಬೇಕೆಂದು ಕಾಂಗ್ರೆಸ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಈ ಸಂಬಂಧ ಸಭಾಪತಿ ಹೊರಟ್ಟಿ ಕೂಡಲೇ ಸದನಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದರು. ಆದರೂ ಸಿಟಿ ರವಿ ಬರದಿದ್ದರಿಂದ ಸಭಾಪತಿ ಈ ಕ್ರಮಕೈಗೊಂಡಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology