Home » ಲೈವ್ ನ್ಯೂಸ್ » ಬೀದರ | ಕ.ಕ.ರ.ಸಾ. ಸಿಬ್ಬಂದಿ ಒಂದು ದಿನ ಧರಣಿ ಸತ್ಯಗ್ರಹ’ಕೆ ಸಿದ್ಧ!

ಬೀದರ | ಕ.ಕ.ರ.ಸಾ. ಸಿಬ್ಬಂದಿ ಒಂದು ದಿನ ಧರಣಿ ಸತ್ಯಗ್ರಹ’ಕೆ ಸಿದ್ಧ!

Facebook
X
WhatsApp
Telegram

ಬೀದರ.04.ಫೆಬ್ರವರಿ.26: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಬೀದರ್ ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿ ಸ್ಥಾಯಿ ಸಮಿತಿ ಆದೇಶಗಳನ್ನು ಉಲ್ಲಂಘಿಸಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿರುವ ಅಧಿಗಕರಿಗಳ ವಿರುದ್ಧ 06-02-2026 ರಂದು ಕ.ಕ.ರ.ಸಾ.ನಿಗಮದ ಹಳೆ ಬಸ್ಸ ನಿಲ್ದಾಣದಲ್ಲಿರುವ ವಿಭಾಗೀಯ ಕಛೇರಿ ಮುಂಬಾಗದಲ್ಲಿ ಒಂದು ದಿನ ಸಾಂಕೇತಿಕ “ಧರಣಿ ಸತ್ಯಗ್ರಹ”ಮಾಡುವ ನಿರ್ಧರಿಸಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ವಿಭಾಗದಲ್ಲಿ ನಿಗಮಕ್ಕೆ ಲಕ್ಷಾಂತರ ರೂಪಾಯಿ ಆವ್ಯವಹಾರ ಮಾಡಿ, ಸಂಸ್ಥೆಯ ಸುತ್ತೋಲೆ/ಸ್ಥಾಯಿ ಸಮಿತಿ ಆದೇಶಗಳನ್ನು ಉಲ್ಲಂಘಿಸಿ, ನೌಕರರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿರುವ ವಿಷಯದಲ್ಲಿ ತನಿಖೆ ಮಾಡಿ ತಪ್ಪಿಸ್ತ ಅಧಿಕಾರಿಗಳ/ಮೇಲ್ವಿಚಾರಕ/ಸಿಬ್ಬಂದಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖಿತ ಪತ್ರದಡಿಯಲ್ಲಿ ಕೇಂದ್ರ ಕಛೇರಿಗೆ ದೂರನ್ನು ನೀಡಲಾಗಿರುತ್ತದೆ.

ಆದರೆ ಇಲ್ಲಿಯವರೆಗೆ ತಪ್ಪಿಸ್ತರ ವಿರುದ್ಧ ಕ್ರಮ ಜರುಗಿಸದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಇತರೆ ಸಂಘಟಣೆಗಳ ವತಿಯಿಂದ ದಿನಾಂಕ:06-02-2026 ರಂದು ಶುಕ್ರವಾರ ಬೀದರ ಕ.ಕ.ರ.ಸಾ.ನಿಗಮದ ಹಳೆ ಬಸ್ತ ನಿಲ್ದಾಣದಲ್ಲಿರುವ ವಿಭಾಗೀಯ ಕಛೇರಿ ಮುಂಭಾಗದಲ್ಲಿ ಒಂದು ದಿನ ಶಾಂತಿಯುತ “ಧರಣಿ ಸತ್ಯಗ್ರಹ” ಹಮ್ಮಿಕೊಳ್ಳಲಾಗಿರುತ್ತದೆ. ಈ ಧರಣಿ ಸತ್ಯಗ್ರಹ ನಡೆಯುವ ಸ್ಥಳದಲ್ಲಿ ತಮ್ಮ ದಿನಪ್ರತಿಕೆ/ಸುದ್ದಿವಾಹಿನಿ ವರದಿಗಾರರು ಹಾಜರಾಗಿ ಸುದ್ದಿಗಳನ್ನು ಪ್ರಕಟಿಸುವಂತೆ ಸಂಘಟನೆಯು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology