Home » ಲೈವ್ ನ್ಯೂಸ್ » ಮಡಿವಾಳ ಮಾಚಿದೇವರು 12ನೆಯ ಶತಮಾನದ ಅಪ್ರತಿಮ ಶರಣರು-ಸಚಿವ ಈಶ್ವರ ಬಿ.ಖಂಡ್ರೆ

ಮಡಿವಾಳ ಮಾಚಿದೇವರು 12ನೆಯ ಶತಮಾನದ ಅಪ್ರತಿಮ ಶರಣರು-ಸಚಿವ ಈಶ್ವರ ಬಿ.ಖಂಡ್ರೆ

Facebook
X
WhatsApp
Telegram

ಬೀದರ,02.ಫೆಬ್ರವರಿ.26:- ಮಡಿವಾಳ ಮಾಚಿದೇವರು 12ನೆಯ ಶತಮಾನದ ಅಪ್ರತಿಮ ಶರಣರು ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರದಲ್ಲಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಆಯೋಜಿಸಿದ ಶ್ರೀ ಮಡಿವಾಳ ಮಾಚಿದೇವರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾಚಿದೇವರು ಜನರ, ಸಮಾಜದ ಮನೆ-ಮನಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ನಿರತರಾದವರು, ಅವರು ಕೇವಲ ಬಟ್ಟೆಯ ಕೊಳಕನ್ನು ತೊಳೆಯದೆ ಸಮಾಜದಲ್ಲಿರುವ ಮೌಢ್ಯತೆ, ಕಂದಾಚಾರ, ವರ್ಣಭೇದಗಳಂತಹ ಕೊಳಕನ್ನು ತೊಳೆಯಲು ಹೊರಾಟ ನಡೆಸಿದ ಶ್ರೇಷ್ಠ ಶರಣರು. ಬಸವಣ್ಣನವರ ನೇತೃತ್ವದಲ್ಲಿ ಸರ್ವ ಸಮಾನತೆಗಾಗಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಮುಂಚುಣಿಯಲ್ಲಿದ್ದ ಶರಣರಲ್ಲಿ ಮಾಚಿದೇವರು ಸಹ ಒಬ್ಬರು. ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ ಅವರು “ಅಗಸತನ ಕೀಳಲ್ಲ, ಅರಸತನ ಶ್ರೇಷ್ಠವಲ್ಲ” ಎನ್ನುತ್ತಿದ್ದರು ಎಂದು ಹೇಳಿದರು.

ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಇನ್ನು ಪ್ರಗತಿ ಸಾದಿಸಬೇಕಿದೆ. ಸಮಾಜದ ಕುಲಕಸುಬಿಗೆ ಬೇಕಾಗುವ ಸೌಲಭ್ಯಗಳ ಈಡೆರಿಕೆಗೆ ಪ್ರಯತ್ನಿಸಲಾಗುವುದು. ಭವನ ನಿರ್ಮಾಣಕ್ಕೆ ಸಮಾಜದ ಬಾಂಧವರು ಬೇಡಿಕೆ ಇಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಅವರ ಬೇಡಿಕೆಯಂತೆ ಭವನಕ್ಕಾಗಿ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಅನುಧಾನ ನೀಡುವುದಾಗಿ ಭರವಸೆ ಸಚಿವರು ನೀಡಿದರು.

ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಮಾತನಾಡಿ, ಎಲ್ಲಾ ಮಹಾಪುರುಷರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರು ಸಾಗಬೇಕು. ತಂತ್ರಜ್ಞಾನ ಅಭಿವೃದ್ಧಿಯಿಂದ ಕುಲಕಸುಬುಗಳು ಅಳಿವಿನಂಚಿನಲ್ಲಿವೆ. ನೀವು ಮಾಡಿದ ಕೆಲಸ ನಿಮ್ಮ ಮಕ್ಕಳು ಮಾಡಲಾರರು, ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲರು ಈ ಅಭಿವೃದ್ದಿ ನಿಗಮದ ಲಾಭ ಪಡೆಯಬೇಕೆಂದರು.

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಡಾ. ಶಿವಶರಣಪ್ಪಾ ಹುಗ್ಗಿ ಪಾಟೀಲ್, ಮಡಿವಾಳ ಮಾಚಿದೇವರು ಎಂದರೆ ಶಕ್ತಿಯ ಪ್ರತೀಕ, ಎಲ್ಲಾ ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಶ್ರೇಯಸ್ಸು ಮಾಚಿದೇವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಣೆ ಮಾಡಿದ ಕಿರ್ತಿ ಭಾಲ್ಕಿಯ ಪಟ್ಟದೇವರಿಗೆ ಹಾಗೂ ಲೋಕನಾಯಕ ಭೀಮಣ್ಣ ಖಂಡ್ರೆಯವರಿಗೆ ಸಲ್ಲಿದರೆ, ಭವನ ನಿರ್ಮಾಣದ ಕಿರ್ತಿ ವಿಜಯಕುಮಾರ ಖಂಡ್ರೆಯವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ರಾಜಶೇಖರ ವಟಗೆ, ಮಡಿವಾಳ ಸಮಾಜದ ಕಲಬುರ್ಗಿ ವಲಯ ಕಾರ್ಯಾಧ್ಯಕ್ಷ ದಿಗಂಬರ ಮಡಿವಾಳ, ಮಡಿವಾಳ ಸಮಾಜದ ಬೀದರ ಗೌರವಾಧ್ಯಕ್ಷ ಬಾಬುರಾವ ಮಡಿವಾಳ, ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಉಪಾಧ್ಯಕ್ಷ ಶ್ರೀನಿವಾಸ ಚೌಧರಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಂದಗುಳ್, ಮಹೇಶ ಮಡಿವಾಳ ಸೇರಿದಂತೆ ಇತರರು ಉಪಸ್ಥತರಿದ್ದರು.
******

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology