* ದೊಡ್ಡ ಸ್ಟಾರ್ ಗಳು ಮಾತ್ರ ಇಂತಹ ಸಿನಿಮಾದಲ್ಲಿ ನಟಿಸಿದರೆ ಪ್ರತಿಯೊಬ್ಬರಿಗೂ ತಲುಪುತ್ತದೆ.
ಚಾಮರಾಜನಗರ.31.ಜನವರಿ.26: ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ನಂತರ ಸಾಮಾಜಿಕ ಅಸಮಾನತೆ ವಿರುದ್ದ ಸಿನಿಮಾ ಮಾಡುತ್ತಿರುವುದಕ್ಕೆ ಮೆಚ್ಚಿಗೆ ವ್ಯಕ್ತಪಡಿಸಬೇಕು.
ಡಾ ರಾಜ್ ಕುಮಾರ್ ರವರು ಸಂಪತ್ತಿಗೆ ಸವಾಲ್ ಸಿನಿಮಾ ಮಾಡಿ ರೈತನ ಮಹತ್ವ ತೋರಿಸಿದರು. ಅದನ್ನು ಬಿಟ್ಟರೆ 2024 ರ ಕಾಟೇರ ಹಾಗೂ 2026 ರ ಲ್ಯಾಂಡ್ ಲಾರ್ಡ್ ಚಿತ್ರಗಳು ಅಸಮಾನತೆ ವಿರುದ್ದ ಸಮರ ಸಾರಿದ ಚಿತ್ರಗಳು.
ಸಿನಿಮಾ ಒಂದು ದೊಡ್ಡ ಮಾಧ್ಯಮವಾಗಿದೆ. ಎಷ್ಟೋ ಮಂದಿ ಜನರು ಸಿನಿಮಾಗಳನ್ನು ನೋಡಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಹಾಗೇಯೇ ಸಿನಿಮಾಗಳಿಂದ ಪ್ರೇರಣೆಗೊಂಡು ಸಾಮಾಜಿಕ ಅಸಮಾನತೆ ವಿರುದ್ದ ಚಳುವಳಿಗಳನ್ನು ಮಾಡುತ್ತಿದ್ದಾರೆ, ಕೆಲವರು ಸಿನಿಮೀಯ ರೀತಿಯಲ್ಲಿ ಕ್ರೈಂ, ಮಾಡಿ ಸಮಾಜದಲ್ಲಿ ದುಷ್ಟರಾಗಿದ್ದಾರೆ.ಅಂದರೆ ಯಾವ ಯಾವ ಸಿನಿಮಾಗಳು ಸಮಾಜವನ್ನು ಬದಲು ಮಾಡುತ್ತದೆ ಅನ್ನೋದ್ ಮುಖ್ಯ.
ನಟ ದರ್ಶನ್ ರವರು ಕಳೆದ ಎರಡು ವರ್ಷಗಳ ಹಿಂದೆ ತರುಣ್ ಸುಧೀರ್ ರವರ ನಿರ್ದೇಶನದ ಕಾಟೇರ ಎಂಬ ಚಿತ್ರದಲ್ಲಿ ನಟಿಸಿದರು ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿತು.ಈ ಚಿತ್ರವು ಜಾತಿ ಪದ್ದತಿ ವಿರುದ್ದ ಹಾಗೂ ತಲಾ ಸಮುದಾಯದ ಸಮಸ್ಯೆಗಳು, ಮರ್ಯಾದೆ ಹತ್ಯೆ, ಉಳುವವನೆ ಭೂಮಿಯ ಒಡೆಯ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡಿದರು
ಈ ಚಿತ್ರವನ್ನು ಪ್ರಗತಿಪರರು, ಸಾಹಿತಿಗಳು, ಹೋರಾಟಗಾರು, ರಾಜಕಾರಣಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಜೊತೆಗೆ ಈ ಸಿನಿಮಾ ದೊಡ್ಡ ಯಶಸ್ವಿಗೆ ದೊಡ್ಡ ಸ್ಟಾರ್ ದರ್ಶನ್ ರವರೆ ಕಾರಣ ಇಂತಹ ಮೌಲ್ಯಗಳು ಸಿನಿಮಾಗಳು ದೊಡ್ಡ ದೊಡ್ಡ ಸ್ಟಾರ್ ಗಳು ನಟಿಸಿದರೆ ಮಾತ್ರ ಸಮಾಜಕ್ಕೆ ತಲುಪುತ್ತದೆ ಎಷ್ಟೋ ದೊಡ್ಡ ನಟರು ಇಂತಹ ಸಿನಿಮಾಗಳನ್ನು ಮಾಡುವುದಕ್ಕೆ ಮುಂದೆ ಬರೋದಿಲ್ಲ ಅಂತಹದರಲ್ಲಿ ದರ್ಶನ್ ರವರು ನಟಿಸಿದ್ದಾರೆ ಅವರಿಗೆ ಅಭಿನಂದನೆಗಳು.
2026 ಜನವರಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸಾಮಾಜಿಕ ಅಸಮಾನತೆ ವಿರುದ್ದ ಒಂದ್ ಚಿತ್ರ ಬರುತ್ತದೆ ಅದೇ ಲ್ಯಾಂಡ್ ಲಾರ್ಡ್ ಈ ಸಿನಿಮಾವನ್ನು ಯುವ ನಿರ್ದೇಶಕ ಜಡೇಶ್ ಹಂಪಿಯವರು ನಿರ್ದೇಶನ ಮಾಡಿದರು ಈ ಚಿತ್ರದ ನಾಯಕ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ರವರು ನಟಿಸಿದ್ದಾರೆ.
ಈ ಸಿನಿಮಾ ಕೂಡ ಶೋಷಿತರ ಪರ ಹಾಗೂ ಶೋಷಿತರ ನೋವುಗಳು, ತಲಾ ಸಮುದಾಯದ ವರು ಭೂಮಿಯನ್ನು ಪಡೆಯಬೇಕಾದರೆ ಎಷ್ಟು ಕಷ್ಟವಿದೆ ಎಂಬುವುದನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಜೊತೆಗೆ ಅಂದಿನ ಕಾಲದಲ್ಲಿ ಊರಿನಲ್ಲಿ ಜಮೀನ್ದಾರ ದಬ್ಬಾಳಿಕೆಯನ್ನು, ಹಾಗೂ ಅಸಮಾನತೆಯನ್ನು, ಅನಿಷ್ಟ ಪದ್ದತಿಯಾದ ಬಸವಿ ಪದ್ದತಿ ಹಾಗೂ ಶೋಷಿತ ಹೆಣ್ಣು ಮಗು ಶಿಕ್ಷಣ ಪಡೆದುಕೊಂಡರು ತಪ್ಪಲಿಲ್ಲ ಶೋಷಣೆ, ಕೀಳು ಜಾತಿಯವರು ದೇವರು ಮುಟ್ಟಿದಕ್ಕೆ ರಥವನ್ನೇ ಸುಡುವುದು, ಚಪ್ಪಲಿ ಹಾರ ಹಾಕಿ ಶಿಕ್ಷೆ ಕೊಡುವುದು,ಮೇಲ್ವರ್ಗದ ದೌರ್ಜನ್ಯವನ್ನು ತಿಳಿಸುತ್ತದೆ.
ಜೊತೆಗೆ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕು, ಭೂ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು, ಈ ದೇಶದ ಸಂವಿಧಾನದ ಕಾನೂನು ಪ್ರತಿಯೊಬ್ಬರೂ ಹಾಗೂ ಪ್ರತಿ ಹಳ್ಳಿ ಹಳ್ಳಿಗೂ ತಲುಪಬೇಕು ಎಂಬ ಅಂಶಗಳನ್ನು ಈ ಚಿತ್ರ ತಿಳಿಸುತ್ತದೆ.
ಈ ಚಿತ್ರದಲ್ಲಿ ಸ್ಟಾರ್ ನಟರಾದ ಉಮಾಶ್ರೀ, ರಚಿತ ರಾಮ್, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್ ರವರ ಮಗಳಾದ ರಿತನ್ಯಾ ರವರೆಗೆ ಚೊಚ್ಚಲ ಚಿತ್ರವಾಗಿದೆ ಪ್ರತಿಯೊಬ್ಬರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಕಾಟೇರ ಬಿಟ್ಟರೆ ಪ್ರಗತಿಪರರು, ರಾಜಕಾರಣಿಗಳು, ಹೋರಾಟಗಾರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು, ದಲಿತ ಪರ ಸಂಘಟನೆಗಳು ಲ್ಯಾಂಡ್ ಲಾರ್ಡ್ ಸಿನಿಮಾವನ್ನು ಮೆಚ್ಚಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು ಜೊತೆಗೆ ಪ್ರತಿಯೊಬ್ಬರೂ ಸಿನಿಮಾ ನೋಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಾರೆ ಇಂತಹ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚು ಬರಲಿ ಜೊತೆಗೆ ಇಂತಹ ಸಿನಿಮಾ ಮಾಡುವಂತಹ ನಿರ್ದೇಶಕರಿಗೆ ಹಾಗೂ ನಾಯಕ ನಟರಿಗೆ ಎಲ್ಲರೂ ಪ್ರೋತ್ಸಾಹ ಮಾಡಿ ಅವರಿಗೆ ಧೈರ್ಯವನ್ನು ತುಂಬಾ ಬೇಕಾಗಿದೆ.
ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು ಚಾಮರಾಜನಗರ







Any questions related to ಅಸಮಾನತೆ ವಿರುದ್ದ ಕನ್ನಡ ಚಿತ್ರಗಳಾದ ಕಾಟೇರ ಹಾಗೂ ಲ್ಯಾಂಡ್ ಲಾರ್ಡ್. <br>?