ಬೆಂಗಳೂರು.20.ಜನವರಿ.26: 2025-26ನೇ ಸಾಲಿಗೆ ನೋಂದಾಯಿಸಲು ಅರ್ಹ ಫಲಾನುಭವಿಗಳಿಗೆ ಸೂಚಿಸಿದೆ.
ಯಶಸ್ವಿನಿ ಆರೋಗ್ಯ ವಿಮಾ ಯೋಜನೆ (Yeshasvini Health Insurance Scheme) ಕರ್ನಾಟಕ ಸರ್ಕಾರವು ಸಹಕಾರಿ ಸಂಘಗಳ ಸದಸ್ಯರಿಗಾಗಿ ಜಾರಿಗೆ ತಂದ ಜನಪ್ರಿಯ ವೈದ್ಯಕೀಯ ವಿಮಾ ಯೋಜನೆಯಾಗಿದೆ. 2003ರಲ್ಲಿ ಪ್ರಾರಂಭವಾದ ಈ ಯೋಜನೆ, ಗ್ರಾಮೀಣ ಮತ್ತು ನಗರದ ಕಡಿಮೆ/ಮಧ್ಯಮ ಆದಾಯದ ಸದಸ್ಯರಿಗೆ ₹2.5 ಲಕ್ಷದವರೆಗೆ (2,000ಕ್ಕೂ ಹೆಚ್ಚು ಚಿಕಿತ್ಸೆಗಳು) ನಗದು ರಹಿತ ಚಿಕಿತ್ಸೆ ಒದಗಿಸುತ್ತದೆ. ವಾರ್ಷಿಕ ಕನಿಷ್ಠ ಪ್ರೀಮಿಯಂ (ಗ್ರಾಮೀಣ: ₹500, ನಗರ: ₹1,000) ಪಾವತಿಸಿ ನೋಂದಾಯಿಸಿಕೊಳ್ಳಬಹುದು.
ಯಶಸ್ವಿನಿ ಯೋಜನೆಯ ಪ್ರಮುಖಾಂಶಗಳು:
ಅರ್ಹತೆ: ಕರ್ನಾಟಕದ ಸಹಕಾರಿ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರು.
ಪ್ರಯೋಜನಗಳು: ಆಯ್ದ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳು.
ಚಿಕಿತ್ಸಾ ವ್ಯಾಪ್ತಿ: ಹೃದಯ, ಕ್ಯಾನ್ಸರ್, ಮೂಳೆ, ನರರೋಗ, ಕಣ್ಣಿನ ಕಾಯಿಲೆ, ನಾಯಿ/ಹಾವು ಕಡಿತ, ಕೃಷಿ ಅಪಘಾತಗಳ ಚಿಕಿತ್ಸೆಗಳು ಲಭ್ಯ.
ಪ್ರೀಮಿಯಂ ವಿವರ: 4 ಜನರ ಕುಟುಂಬಕ್ಕೆ ವಾರ್ಷಿಕ ಗ್ರಾಮೀಣ ಪ್ರದೇಶದಲ್ಲಿ ₹500 ಹಾಗೂ ನಗರ ಪ್ರದೇಶದಲ್ಲಿ ₹1,000. ಹೆಚ್ಚುವರಿ ಸದಸ್ಯರಿಗೆ ಹೆಚ್ಚುವರಿ ಶುಲ್ಕವಿರುತ್ತದೆ.
ನೋಂದಣಿ: ಸಹಕಾರ ಸಂಘಗಳ ಉಪ ನಿಬಂಧಕರು ಅಥವಾ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬಹುದು.
ಈ ಯೋಜನೆಯು ಕರ್ನಾಟಕದ ರೈತರು, ನೇಕಾರರು, ಮೀನುಗಾರರು ಮತ್ತು ಬೀಡಿ ಕಾರ್ಮಿಕರಿಗೆ ಬಡತನದ ಸಾಲಿಗೆ ಬೀಳದಂತೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದೆ.
ಕರ್ನಾಟಕ ಸೌಹಾರ್ದ ಸಹಕಾರಿ, ಕರ್ನಾಟಕ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು ಮತ್ತು ಸಹಕಾರಿ ನೇಕಾರರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.
ಯಶಸ್ವಿನಿ ಪ್ರೋಟೋಕಾಲ್ನಂತೆ ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳ್ಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಸಹಕಾರ ಸಂಘಗಳಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 1 ತಿಂಗಳು ಗತಿಸಿದ್ದಲ್ಲಿ ಈ ಯೋಜನೆಯಡಿಯಲ್ಲಿ ನೋಂದಾಯಿಸಬಹುದಾಗಿದೆ ಹಾಗೂ ವಯೋಮಿತಿಯ ನಿರ್ಬಂಧವಿರುವುದಿಲ್ಲ.
ಯೋಜನೆಯ ಸೌಲಭ್ಯ ಪಡೆಯಲು ಯಶಸ್ವಿನಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲು ಕೋರಿದೆ. ಸರ್ಕಾರದ ಆದೇಶದಂತೆ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ ಅವಧಿಯು ಮಾರ್ಚ್ 31 ರವರೆಗೆ ಮಾತ್ರ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ನೋಂದಾಯಿಸಲು ಕೋರಲಾಗಿದೆ. ಹಾಗೂ ಏಪ್ರಿಲ್ 01 ರಿಂದ ಈ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಎಲ್ಲಾ ವಿವಿಧ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳ ಹಾಗೂ ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಗಂಗಾವತಿ (ಪ್ರಭಾರ) ಮೊ.ಸಂ.: 7899648271, ಕುಷ್ಟಗಿ(ಪ್ರಭಾರ): 7892624164, ಯಲಬುರ್ಗಾ: 8660289535, ಸಹಕಾರ ಸಂಘಗಳ ನಿರೀಕ್ಷಕರು ಕೊಪ್ಪಳ: 7406960336, ಸೌಹಾರ್ದ ಸಂಯೋಜಕರು: 8884460274 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಯಶಸ್ವಿನಿ ಯೋಜನೆ’ ನೋಂದಣಿಗೆ ಸೂಚನೆ.!?