ಬೆಂಗಳೂರು.30.ಜನವರಿ ಅತಿಥಿ ಉಪನ್ಯಾಸಕರ ಹುದ್ದೆಗಾಗಿ ನಕಲಿ ಪಿಎಚ್‌ಡಿ ಸಲ್ಲಿಸಿರುವ ಶಂಕೆ, ಅಂಥವರಿಗೆ ನೋಟಿಸ್ | ಜ.31 ರಂದು ದಾಖಲೆ ಜತೆಗೆ ವಿಚಾರಣೆಗೆ ಹಾಜರಾಗಲು ಉನ್ನತ ಶಿಕ್ಷಣ ಇಲಾಖೆ ಸೂಚನೆ.
ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಕೆಲವು ಹೊರರಾಜ್ಯಗಳ ವಿಶ್ವವಿದ್ಯಾಲಯಗಳು ನೀಡುವ ಪಿಎಚ್‌ಡಿ ಪದವಿಯ ಗುಣಮಟ್ಟ-ವಿಶ್ವಾಸಾರ್ಹತೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಮಧ್ಯೆಯೇ ಪಿಎಚ್‌ಡಿ ಮುಗಿದಿರುವುದಾಗಿ ನಕಲಿ ದಾಖಲೆ ಸಲ್ಲಿಸಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡಿರುವ ಆರೋಪಗಳು ಕೇಳಿ ಬರುತಿದೆ. ಉನ್ನತ ಶಿಕ್ಷಣ ಇಲಾಖೆ ಈಗ ಇಂತಹ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.
ಈಗ ಯಾವುದೇ ಪದವಿ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕ ಹುದ್ದೆ ಪಡೆಯಲು ಯುಜಿಸಿ ನಿಯಮ ಗಳನ್ವಯ ಪಿಎಚ್ ಡಿ ಮುಗಿದಿರಬೇಕು ಇಲ್ಲವೇ ನೆಟ್ ಅಥವಾ ಕೆಸೆಟ್ ಪರೀಕ್ಷೆ ಉತ್ತೀರ್ಣ ಆಗಿರಬೇಕು. ನೆಟ್ -ಕೆಸೆಟ್ ಪರೀಕ್ಷೆ ಪಾಸಾಗುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ಕೆಲವರು ಪಿಎಚ್ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಕೆಲಸ ಪಡೆದಿದ್ದಾರೆ.
ಬೋಧನೆ ಅನುಭವ ಆಧರಿಸಿ ನೇಮಕ ಕೈಬಿಟ್ಟ ಇಲಾಖೆ
ಮೊದಲೆಲ್ಲ ಪದವಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಅವಕಾಶ ನೀಡಲಾಗುತ್ತಿತ್ತು. ಪ್ರತಿ ವರ್ಷ ಬೋಧನೆಗೆ ಅವರಿಗೆ ಅಂಕಗಳನ್ನು ನೀಡಿ ಅದರ ಆಧಾರದ ಮೇಲೆಯೇ ಮರು ನೇಮಕ ಮಾಡಿಕೊಳ್ಳಲಾಗುತ್ತಿತ್ತು. 32ರಿಂದ 40 ಸಾವಿರ ರೂ.ವರೆಗೆ ವೇತನ ನೀಡಲಾಗುತ್ತಿತ್ತು. ಆದರೆ, ಕಳೆದ ವರ್ಷ ಅದಕ್ಕೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಕಡ್ಡಾಯವಾಗಿ ಕೆಸೆಟ್- ನೆಟ್ ಪರೀಕ್ಷೆ ಪಾಸಾಗಿರಬೇಕು. ಇಲ್ಲವೇ ಪಿಎಚ್ ಡಿ ಮುಗಿದವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿದೆ. ಇದರಿಂದ ಹೇಗಾದರೂ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಕೆಲವರು ಅಡ್ಡದಾರಿ ಹಿಡಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
2025-26ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಪ್ರಕ್ರಿಯೆ ನಡೆಸಲಾಗಿತ್ತು. ರೀತಿ ಕೆಲಸಕ್ಕೆ ಸೇರಿದವರಲ್ಲಿ ಕೆಲವರು ನಕಲಿ ಪಿಎಚ್‌ಡಿ ದಾಖಲೆಗಳನ್ನು ಸಲ್ಲಿಸಿರುವ ಆರೋಪಗಳು ಕೇಳಿ ಬಂದಿವೆ. ಅಂಥ ಕಾಲೇಜುಗಂಗೆಶಿಕಣ ಇಲಾಖೆ ನೋಟಿಸ್ ಕಳುಹಿಸಿದ್ದು ಜ.31ರಂದು ದಾಖಲೆಗಳ
ಸಮೇತ ಕಾಲೇಜಿನ ಪ್ರಾಚಾರ್ಯರು ಹಾಗೂ ಅತಿಥಿ ಉಪನ್ಯಾಸಕರು ಖುದು ವಿಚಾರಣೆಗೆ ಹಾಜರಾಗಲು ನೀಡಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು, ದೇವದುರ್ಗ, ಜಾಲಹಳ್ಳಿ ಯಾದಗಿರಿ ಜಿಲ್ಲೆಯ ಹುಣಸು ಸೇರಿದಂತೆ ಕೆಲ ಸರ್ಕಾರಿ ಪದವಿ ಕಾಲೇಜುಗಳು, ಇನ್ನೂ ಕೆಲ ಅತಿಥಿ ಉಪನ್ಯಾಸಕರಿಗೆ
ಅತಿಥಿ ಉಪನ್ಯಾಸಕರು ನಕಲಿ ಪಿಎಚ್ ಡಿ ದಾಖಲೆ
ಸಲ್ಲಿಸಿರುವ ಕುರಿತು ಪರಿಶೀಲನೆ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ನಮಗೆ ನೋಟಿಸ್ ಬಂದಿದೆ. ನಾವು ಎಲ್ಲ ಅತಿಥಿ ಉಪನ್ಯಾಸಕರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಏನಾದರೂ ಶಂಕೆ ಬಂದಲ್ಲಿ ಇಲಾಖೆ ಗಮನಕ್ಕೆ ತರಲಾಗುವುದು.
ಯಂಕಣ್ಣ ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜು, ರಾಯಚೂರು
ನೋಟಿಸ್ ನೀಡಲಾಗಿದೆ. ರಾಜ್ಯದ ಬೇರೆ ಕಡೆಗಳಲ್ಲೂ ಇಂಥ ಪ್ರಕರಣಗಳು ಸಿಗಬಹುದು ಎನ್ನುತ್ತಾರೆ ಕೆಲ ಉದ್ಯೋಗಕಾಂಕ್ಷಿಗಳು.
ಸಲ್ಲಿಸಬೇಕಾದ ದಾಖಲೆಗಳು: ಈ ಮುಂಚೆ ಕೆಲಸ ಪಡೆಯಬೇಕಾದರೆ ಅರ್ಜಿ ಜತೆಗೆ ಪಿಎಚ್ ಡಿ ಮುಗಿದಿದೆ ಎನ್ನುವ ನೈಜತೆ ಪ್ರಮಾಣಪತ್ರ ಸಲ್ಲಿಸಿದರೆ ಸಾಕಾಗಿತ್ತು. ಆದರೆ, ಈಗ ಅದರ 12 ದಾಖಲೆಗಳನ್ನು
ತಿಳಿಸಲಾಗಿದೆ. ಹಾಕಿದಾಗಿನಿಂದ ಅವಾರ್ಡ್ ತೆಗೆದುಕೊಳ್ಳುವವರೆಗೆ ಹಂತ-ಹಂತವಾಗಿ ಎಲ್ಲ ರೀತಿಯ ದಾಖಲೆಗಳನ್ನು ಒಟ್ಟುಗೂಡಿಸಿ ಇಲಾಖೆಗೆ ಸಲ್ಲಿಸಬೇಕಿದೆ.
ಪಿಎಚ್ ಡಿ ರಿಜಿಸ್ಟ್ರೇಶನ್ ಕಾಪಿ, ಗೈಡ್ ಅಲಾಟೆಂಟ್ ಅಥವಾ ಸೂಪರ್ ಅಪಾಯಿಂಟೆಂಟ್ ಲೆಟರ್, ಅಧ್ಯಯನ ಸಲಹಾ ಸಮಿತಿಯ ಆದೇಶ, ಕೋರ್ಸ್ ವರ್ಕ್ ಕಂಪ್ಲಿಟೇಶನ್ ಪ್ರಮಾಣಪತ್ರ, ಅಂಕಪಟ್ಟಿಯ ದಾಖಲೆ ಹಾಗೂ ಗ್ರೇಡ್ ಶೀಟ್, ಕಾಯಂ ನೋಂದಣಿ ಪ್ರತಿ, ಅರೆವಾರ್ಷಿಕ ಪ್ರಗತಿ ವರದಿ, ಪಬ್ಲಿಕ್ ವೈವಾ ನೋಟಿಫಿಕೇಶನ್, ಪಿಎಚ್ ಡಿಗೆ ಸಂಬಂಧಿಸಿದ ಪ್ರಬಂಧದ ಪ್ರತಿ, ಫೈನಲ್ ವೈವಾ ನೋಟಿಫಿಕೇಶನ್, ಅವಾರ್ಡ್ ನೋಟಿಫಿಕೇಶನ್, ಪ್ರಾವಿಜಿನಲ್ ಡಿಗ್ರಿ ಸರ್ಟಿಫಿಕೇಟ್, ಪಿಎಚ್ ಡಿ ಪದವಿ ಪ್ರಮಾಣಪತ್ರ, ನೈಜ ಪ್ರಮಾಣ ಪತ್ರ ಇಷ್ಟು ದಾಖಲೆಗಳನ್ನು ಪಕ್ಷ ನೈಜ ಪ್ರಮಾಣ ಪಕಂದು ಎದುರು ಸಲ್ಲಿಸಬೇಕಿದೆ.






Any questions related to ನಕಲಿ ಪಿಎಚ್ ಡಿ: ಅತಿಥಿ ಉಪನ್ಯಾಸಕರಿಗೆ ಉನ್ನತ ಶಿಕ್ಷಣ ಇಲಾಖೆಯ ನೋಟಿಸ್!?