Home » ಲೈವ್ ನ್ಯೂಸ್ » ಜ.30 ರಿಂದ ಫೆ.13 ರವರೆಗೆ ಕುಷ್ಠರೋಗ ಅರಿವು ಆಂದೋಲನ

ಜ.30 ರಿಂದ ಫೆ.13 ರವರೆಗೆ ಕುಷ್ಠರೋಗ ಅರಿವು ಆಂದೋಲನ

Facebook
X
WhatsApp
Telegram

ಬೀದರ.25.ಜನವರಿ.26:- ಕುಷ್ಠರೋಗ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದೇ ಜನವರಿ.30 ರಿಂದ ಫೆಬ್ರುವರಿ.13 ರವರೆಗೆ ಕುಷ್ಠ ರೋಗ ಅರಿವು ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.

ಅವರು ಇತ್ತೀಚಿಗೆ ಬೀದರ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2026ರ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಷ್ಠರೋಗ ನಿವಾರಣೆ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಜನವರಿ.30 ರಂದು ಎಲ್ಲಾ ಗ್ರಾಮ ಪಂಚಾಯತ, ಪುರಸಭೆಗಳಲ್ಲಿ ಸಂಬಂಧಪಟ್ಟ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕುಷ್ಠರೋಗ ನಿವಾರಿಸಲು “ತಾರತಮ್ಮವನ್ನು ಕೊನೆಗೊಳಿಸುವುದು, ಘನತೆಯನ್ನು ಖಚಿತಪಡಿಸುವುದು” (Ending Discrimination,Ensuring Dignity)  ಎಂಬ ಘೋಷಣೆಯೊಂದಿಗೆ ಸದಸ್ಯರುಗಳು ಮತ್ತು ಸಾರ್ವಜನಿಕರ ಸಮೂಹಕದಲ್ಲಿ ಪ್ರತಿಜ್ಞೆ ಮಾಡಿ ಮಹಾತ್ಮ ಗಾಂಧೀಜಿಯವರ ಈ ಕನಸನ್ನು ನನಸಾಗಿಸೋಣ ಎಂದು ಹೇಳಿದರು.

ಕಷ್ಠರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಹು ಔಷದಿ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಹಾಗೂ ಸಂಪೂರ್ಣವಾಗಿ ಗುಣಹೊಂದುತ್ತದೆ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ನೆರೆ-ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ-ಬಾವ ಮಾಡದೇ ಗೌರವಯುತವಾಗಿ ಉಪಚರಿಸಿ, ರೋಗಿ ಗುಣಮುಖಹೊಂದಲು ಸಹಕರಿಸಿ ಸಮಾಜದಲ್ಲಿ ರೋಗದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲೆ ರೋಗ ಪತ್ತೆ ಮಾಡಿ ಬಹು ಔಷದಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೆ, ಮುಂದಾಗಬಹುದಾದ ವಿಕಲಾಂಗತೆಯನ್ನು ಕೂಡ ತಡೆಗಟ್ಟಬಹುದು, ಇದಕ್ಕೆಲ್ಲಾ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರು ಒಗ್ಗಟ್ಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸು “ಕುಷ್ಠರೋಗ ಮುಕ್ತ ಭಾರತವನ್ನು” ನಿರ್ಮಿಸಬಹುದಾಗಿದೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುಷ್ಠರೋಗ ನಿರ್ಮೂಲನೆ ಅಂದರೆ ಸ್ಥಾನಿಕತೆ 1000 ಜನಸಂಖ್ಯೆ 01 ಕ್ಕಿಂತ ಕಡಿಮೆ ಮಾಡುವುದು. ಕುಷ್ಠರೋಗ ಪೀಡಿತ ವ್ಯಕ್ತಿಗಳಿಗೆ ಅಂಗವಿಕಲತೆ ತಡೆಗಟ್ಟುವುದು ಮತ್ತು ವೈದ್ಯಕೀಯ ಪುನರ್ಮನನ ವ್ಯವಸ್ಥೆಯನು ಬಲಪಡಿಸುವುದು. ಕುಷ್ಠರೋಗದ ಜೊತೆಗೂಡಿರುವ ಸಾಮಾಜಿಕ ಪಿಡುಗನ್ನು ಕಡಿಮೆ ಮಾಡುವುದು ಉದ್ದೇಶ ಹೊಂದಿದೆ ಎಂದರು.

ಇದೇ ಸಂಧರ್ಭದಲ್ಲಿ ಸಿಇಓ ಡಾ.ಗಿರೀಶ ಬದೋಲೆ ಅವರು ಕುಷ್ಠರೋಗ ಅರಿವು ಆಂದೋಲನದ ಭಿತ್ತಿ ಪತ್ರಗಳು, ಕರಪತ್ರಗಳು, ಬ್ಯಾನರಗಳನ್ನು ಬಿಡುಗಡೆ ಮಾಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಅಸಂಕ್ರಾಮಿಕ ರೋಗಗಳ ಅಧಿಕಾರಿ ಡಾ.ಕಿರಣ.ಎಮ್.ಪಾಟೀಲ್, ಜಿಲ್ಲಾ ಕ್ಷಯರೋಗ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಅನೀಲ ಚಿಂತಾಮಣಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯ ಡಾ.ಆಹ್ಮದ್ದದ್ದೀನ, ಕಾರ್ಯಕ್ರಮ ಅನೂಷ್ಠಾನ ಅಧಿಕಾರಿ ಡಾ.ಶಿವಶಂಕರ.ಬಿ, ಡಾ.ಶಂಕ್ರಪ್ಪ ಬೊಮ್ಮಾ, ಡಾ.ರಾಜಶೇಖರ ಪಾಟೀಲ್, ಡಾ.ದಿಲೀಪ ಡೋಂಗರೆ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸಂಗಾರೆಡ್ಡಿ, ಡಾ.ಶಿವಕುಮಾರ ಸಿದೆಶ್ವರ, ಡಾ.ರವಿ ಕಲಶಟ್ಟಿ, ಡಾ.ಗಾಯಿತ್ರಿ, ಡಾ.ಅಶೋಕ ಮೈಲಾರೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology