Home » ಲೈವ್ ನ್ಯೂಸ್ » ಗಂಗಾವತಿ ನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ.

ಗಂಗಾವತಿ ನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ.

Facebook
X
WhatsApp
Telegram

ಕೊಪ್ಪಳ.21.ಜನವರಿ.26: ಗಂಗಾವತಿಯ ಜೈಭೀಮ ನಗರದ ನಿವಾಸಿ 27 ವರ್ಷದ ಮಹ್ಮದ ತಂದೆ ಆಲಂಬಾಷ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಹ್ಮದ ತಂದೆ ಆಲಂಬಾಷ ವ್ಯಕ್ತಿ 2024ರ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋಗಿ ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ರೇಷ್ಮಾ ಬಾನು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 207/2025 ರಡಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿ ಚಹರೆ ವಿವರ: ಮಹ್ಮದ ತಂದೆ ಆಲಂಬಾಷ ವಯಸ್ಸು 27 ವರ್ಷ, 5.5 ಎತ್ತರ, ಗೋದಿ ಮೈಬಣ್ಣ, ದುಂಡನೇಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.

ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ. ದೂ.ಸಂ: 08539-230111, ಗಂಗಾವತಿ ಡಿವೈಎಸ್ಪಿ ದೂ.ಸಂ: 08533-230853, ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊ.ಸಂ: 9480803752 ಹಾಗೂ ದೂ.ಸಂ: 08533-230633, 08533-230100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology