Home » ಲೈವ್ ನ್ಯೂಸ್ » RBI 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನ.

RBI 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನ.

Facebook
X
WhatsApp
Telegram

ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. RBI ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಆಯ್ಕೆಯನ್ನು ಆನ್ಲೈನ್ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ, ನಂತರ ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗುತ್ತದೆ.

RBI ನೇಮಕಾತಿ 2026 ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ

RBI ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು.

ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ

ವಯೋಸಡಿಲಿಕೆ
OBC ಅಭ್ಯರ್ಥಿಗಳು: 3 ವರ್ಷ
SC / ST ಅಭ್ಯರ್ಥಿಗಳು: 5 ವರ್ಷ
PwD ಅಭ್ಯರ್ಥಿಗಳು: 10 ವರ್ಷ
PwD (OBC): 13 ವರ್ಷ
PwD (SC/ST): 15 ವರ್ಷ

ಅರ್ಜಿ ಶುಲ್ಕ
SC / ST / PwBD / ಮಾಜಿ ಸೈನಿಕರು: ₹50 (ಮಾಹಿತಿ ಶುಲ್ಕ ಮಾತ್ರ)
GEN / OBC / EWS ಅಭ್ಯರ್ಥಿಗಳು: ₹450 (ಪರೀಕ್ಷಾ ಶುಲ್ಕ + ಮಾಹಿತಿ ಶುಲ್ಕ)
RBI ಸಿಬ್ಬಂದಿ ಅಭ್ಯರ್ಥಿಗಳು: ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್ ಮೂಲಕ

ಆಯ್ಕೆ ಪ್ರಕ್ರಿಯೆ
RBI ನೇಮಕಾತಿ 2026 ಆಯ್ಕೆ ಪ್ರಕ್ರಿಯೆ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ಆನ್‌ಲೈನ್ ಪರೀಕ್ಷೆ
ಭಾಷಾ ಪ್ರಾವಿಣ್ಯತೆ ಪರೀಕ್ಷೆ (Language Proficiency Test – LPT)
RBI ನೇಮಕಾತಿ 2026ಗೆ ಅರ್ಜಿ ಸಲ್ಲಿಸುವ ವಿಧಾನ
ಮೊದಲು RBI ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ, ನೀವು ಅರ್ಹರಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹೊಂದಿರಲಿ.

ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರ (ಇದ್ದಲ್ಲಿ) ಮೊದಲಾದ ದಾಖಲೆಗಳನ್ನು ಸಿದ್ಧವಾಗಿರಿಸಿ.

RBI Office Attendant Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಮತ್ತು ಇತ್ತೀಚಿನ ಫೋಟೊ (ಅಗತ್ಯವಿದ್ದಲ್ಲಿ) ಅಪ್‌ಲೋಡ್ ಮಾಡಿ.

ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ.

ಭವಿಷ್ಯದ ಬಳಕೆಗೆ ಅರ್ಜಿ ಸಂಖ್ಯೆ / ರೆಫರೆನ್ಸ್ ನಂಬರ್ ಅನ್ನು ಕಡ್ಡಾಯವಾಗಿ ಉಳಿಸಿಕೊಳ್ಳಿ.

ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 15-01-2026
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 04-02-2026
ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 04-02-2026
ಆನ್‌ಲೈನ್ ಪರೀಕ್ಷೆಯ ಸಾಧ್ಯ ದಿನಾಂಕ: 28 ಫೆಬ್ರವರಿ & 01 ಮಾರ್ಚ್ 2026
RBI ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ & ಆನ್‌ಲೈನ್ ಅರ್ಜಿ:


ಅಧಿಕೃತ ವೆಬ್‌ಸೈಟ್: http://rbi.org.in

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology