Home » ಲೈವ್ ನ್ಯೂಸ್ » ವೇಗ ಪಡೆಯುತ್ತಿರುವ ಬೀದರ ಜಿಲ್ಲೆ ಕಲಾಗ್ರಾಮದ ಯೋಜನೆ

ವೇಗ ಪಡೆಯುತ್ತಿರುವ ಬೀದರ ಜಿಲ್ಲೆ ಕಲಾಗ್ರಾಮದ ಯೋಜನೆ

Facebook
X
WhatsApp
Telegram

ಬೀದರ.18.ಜನವರಿ.26:- ಕರ್ನಾಟಕದಲ್ಲಿಯೇ ಅಪರೂಪವಾದ ಕಲೆ ಸಂಸ್ಕøತಿ ಹಾಗೂ ಮನರಂಜನೆಗೆ ಸಂಬಂಧಿಸಿದ ಕಲಾಗ್ರಾಮದ ಅಪರೂಪದ ಯೋಜನೆ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬೀದರ ವಿಶ್ವವಿದ್ಯಾಲಯದದ ಆವರಣದಲ್ಲಿ ತಲೆ ಎತ್ತಲಿದೆ. ಕಲಾಗ್ರಾಮಕ್ಕಾಗಿ ಜಿಲ್ಲಾಡಳಿತ 10 ಎಕರೆ ಜಾಗವನ್ನು ನಿಗದಿ ಮಾಡಿದ್ದು ಬೀದರ ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗವನ್ನು ಗುರುತಿಸಲಾಗಿದೆ. ಕಲಾ ಗ್ರಾಮದಲ್ಲಿ ಬೀದರ ಜಿಲ್ಲೆಯ ಕಲೆ, ಸಂಸ್ಕೃತಿ ಗಡಿಭಾಗದ ಅಪರೂಪದ ಕಲಾ ಪರಂಪರೆ, ಗುಡಿ ಕೈಗಾರಿಕೆ, ಕಿರುರಂಗಮಂದಿರ, ಮಕ್ಕಳ ಮನೋರಂಜನಾ ಪಾರ್ಕ, ವಸ್ತುಪ್ರದರ್ಶನ ಇತ್ಯಾದಿ ಹಲವು ಅಪರೂಪದ ಪರಿಚಯಾತ್ಮಕ ಸ್ವರೂಪವನ್ನು ಕಲಾಗ್ರಾಮ ಹೊಂದಿದೆ.


ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಈ ಕುರಿತು ವಿಶೇಷ ಕಾಳಜಿ ವಹಿಸಿದ್ದು, ಈಗಾಗಲೇ ಹಲವು ಸಭೆಗಳನ್ನು ಮಾಡಿ ಕಲಾಗ್ರಾಮದ ಅನುμ್ಠನಕ್ಕೆ ತುರ್ತು ಕ್ರಮವಹಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಯೋಜನೆಯನ್ನು ತುರ್ತಾಗಿ ಅನು್ಠನಗೊಳಿಸಲು ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಕಲಾಗ್ರಾಮದ ಸ್ಥಳ ಪರಿಶೀಲಿನೆಗಾಗಿ ಭಾಲ್ಕಿ, ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಪಕ್ಕ ಇರುವ ಸ್ಥಳವನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನೈಸರ್ಗಿಕವಾಗಿ ಇರುವ ಸ್ಥಳದಲ್ಲಿಯೇ ವಿಶೇಷವಾದ ಕಲಾಗ್ರಾಮವನ್ನು ರೂಪಿಸಬಹುದಾಗಿದೆಯೆಂದು ತಿಳಿಸಿದರು. ವಿಶ್ವವಿದ್ಯಾಲಯ ಒಂದು ಶೈಕ್ಷಣಿಕವಾದ ಕೇಂದ್ರವಾಗಿರುವುದರಿಂದ ಕಲಾಗ್ರಾಮವು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ನಿಮಾ ಣವಾಗಲಿದೆ ಎಂದರು.

ಈ ಕುರಿತು ವಿಶ್ವವಿದ್ಯಾಲಯದ ಸಿಂದಿಕೇಟ ಸದಸ್ಯರ ಜೊತೆ ಚರ್ಚಿಸಲು ವಿಶೇಷ ಸಭೆ ಆಯೋಜಿಸಿದ್ದಾರೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಎಸ್. ಬಿರಾದಾರ ಹಾಜರಿದ್ದು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಲಬುರಗಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಬೀದರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ರಾಮ ಸಿಂಧೆಯವರು ಹಾಜರಿದ್ದರು.

ಬೀದರ ಜಿಲ್ಲೆಗೆ ಕಲಾಗ್ರಾಮ ಒಂದು ಮುಕುಟಮಣಿ, ಎಲ್ಲಾ ಸಾಹಿತಿಗಳ ಕಲಾವಿದರ ಬೀದರ ನೆಲದ ಸಾಂಸ್ಕೃತಿಕ ಹೆಮ್ಮೆಯ ತಾಣವಾಗಲು ಎಲ್ಲಾ ಅಧಿಕಾರಿಗಳು ವಿಶೇಷವಾಗಿ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿದ್ದು ಕೋರಿಕೆಗೆ ಸ್ಪಂದಿಸಿ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಚಾಲನೆ ನೀಡಿದ್ದಕ್ಕೆ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ವಿಜಯಕುಮಾರ ಸೋನಾರೆಯವರು ಅಭಿನಂದನೆ ಸಲ್ಲಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology