Home » ಲೈವ್ ನ್ಯೂಸ್ » ಕರಾಮುವಿ: ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಕರಾಮುವಿ: ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.18.ಜನವರಿ.26:-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ, ಬೀದರದಲ್ಲಿ ಶೈಕ್ಷಣಿಕ ವರ್ಷ 2025-26ರ ಜನವರಿ ಆವೃತ್ತಿಯಲ್ಲಿ ಪ್ರಥಮ ವರ್ಷಕ್ಕೆ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಬಿ.ಎ /ಬಿ.ಕಾಂ /ಬಿ.ಬಿ.ಎ /ಬಿ.ಸಿ.ಎ /ಬಿ.ಎಸ್ಸಿ /ಬಿ.ಎಸ್.ಡಬ್ಲ್ಯೂ /ಬಿ.ಲಿಬ್.ಐ.ಎಸ್ಸಿ /ಎಂ.ಎ /ಎಂ.ಕಾಂ /ಎಂ.ಬಿ.ಎ /ಎಂ.ಎಸ್ಸಿ /ಎಂ.ಸಿ.ಎ /ಎಂ.ಎಸ್.ಡಬ್ಲ್ಯೂ /ಎಂ.ಲಿಬ್.ಐ.ಎಸ್ಸಿ ಮತ್ತು ಯುಜಿ/ಪಿಜಿ/ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ  ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.


ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಅಧ್ಯಯನ ಮಾಡಲು ಅವಕಾಶವಿರುತ್ತದೆ. ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಬಿಪಿಎಲ್  ಕಾರ್ಡ ಹೊಂದಿದ ಮಹಿಳಾ ವಿದ್ಯಾರ್ಥಿನಿಯರಿಗೆ, ಡಿಫೆನ್ಸ/ಮಾಜಿ ಸೈನಿಕರಿಗೂ, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ ಕೆಎಸ್‍ಆರ್‍ಟಿಸಿ, ಕೆಕೆಆರ್‍ಟಿಸಿ, ಎನ್‍ಡಬ್ಲ್ಯೂಕೆಆರ್‍ಟಿಸಿ, ಬಿಎಂಟಿಸಿ ಚಾಲಕರಿಗೆ ಬೋಧನಾ ಶುಲ್ಕದಲಿ 10% ರಿಯಾಯಿತಿ ನೀಡಲಾಗಿದೆ. ಪ್ರವೇಶಾತಿಯ ಅಂತಿಮ ದಿನಾಂಕವನ್ನು ಯುಜಿಸಿಯು ಪ್ರಕಟಿಸಿದ ನಂತರ ತಿಳಿಸಲಾಗುವುದು.


ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ವಿ.ವಿಯ ಅಂತರ್ಜಾಲದಲ್ಲಿರುವ ಅಡ್ಮಿಷನ್ ಪೋರ್ಟಲ್ https://ksouportal.com/views/studenthome.aspx ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಅನುಸಾರ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ,್ರ ಬೀದರದಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9986696487, 9901216737 ಗೆ ಅಥವಾ ಖುದ್ದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ, ಬೀದರಕ್ಕೆ ಭೇಟಿ ನೀಡಿ ಪ್ರವೇಶಾತಿ ಸಂಬಂಧ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology