Home » ಲೈವ್ ನ್ಯೂಸ್ » ವಿಕಲಚೇತನ ಸಾಧನೆ ಪ್ರತಿಭೆ ಯೋಜನೆಯಡಿ ಅರ್ಜಿ ಆಹ್ವಾನ

ವಿಕಲಚೇತನ ಸಾಧನೆ ಪ್ರತಿಭೆ ಯೋಜನೆಯಡಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.18.ಜನವರಿ.26:- 2025-26ನೇ ಸಾಲಿಗೆ ಇಲಾಖೆಯಿಂದ ಜಾರಿ ಇರುವ ವಿಕಲಚೇತನ ಸಾಧನೆ ಪ್ರತಿಭೆ ಯೋಜನೆಯನ್ನು ಸೇವಾಸಿಂಧು ಅನ್‍ಲೈನ್ ಪೋರ್ಟಲ್ ಲೈವ್ ಮಾಡಲಾಗಿರುತ್ತದೆ.

ಸಾಧನೆ ಯೋಜನೆ ಲೈವ್ ಆಗಿರುವ ಕುರಿತು ಹಾಗೂ ಸದರಿ ಯೋಜನೆಗೆ 2025-26ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಅನ್‍ಲೈನ್ ಸೇವಾಸಿಂಧು ತಂತ್ರಾಂಶದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ ಬಳಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.


ಅನ್‍ಲೈನ್ https://sevasindhuservices.karnataka.gov.in   ಮೂಲಕ ದಿನಾಂಕ: 31-01-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿ ಒಂದು ಪ್ರತಿಯನ್ನು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮೈಲೂರ ಬೀದರ ಇಲ್ಲಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಎಂ.ಆರ್.ಡಬ್ಲ್ಯೂ.ಗಳ ದೂರವಾಣಿ ಸಂಖ್ಯೆ 9880801991 (ಬೀದರ), 9731772898 (ಹುಮನಾಬಾದ), 9741166275 (ಭಾಲ್ಕಿ), 9611221445 (ಬಸವಕಲ್ಯಾಣ), 9242321284 (ಔರಾದ) ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology