Home » ಲೈವ್ ನ್ಯೂಸ್ » ಶ್ರೀಗಳಿಗೆ ಭಾವಪೂರ್ಣ ಶೃದ್ಧಾಂಜಲಿ*

ಶ್ರೀಗಳಿಗೆ ಭಾವಪೂರ್ಣ ಶೃದ್ಧಾಂಜಲಿ*

Facebook
X
WhatsApp
Telegram

ಬೀದರ್.15.ಜನವರಿ.26: ಗುರುವಾರ, ಬೆಳಿಗ್ಗೆ 4 ಗಂಟೆಗೆ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ,
ಕಲಬುರ್ಗಿ ವಿಭಾಗ (ತಿಂಥಣಿ ಬ್ರಿಡ್ಜ್)ದ ಪೀಠಾಧಿಪತಿಗಳಾದ
ಪರಮಪೂಜ್ಯ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು
ಅನಾರೋಗ್ಯದ ಕಾರಣದಿಂದ ಸ್ವರ್ಗಸ್ಥರಾಗಿದ್ದಾರೆ.

ಪೂಜ್ಯರ ಅಗಲಿಕೆಯಿಂದ ಸಮಾಜವು ಒಬ್ಬ ಮಹಾನ್ ತ್ಯಾಗಿ, ಚಿಂತಕ ಹಾಗೂ ಸಂಸ್ಕೃತಿಯ ಸೇವಕನನ್ನು ಕಳೆದುಕೊಂಡಿದೆ.

ಪೂಜ್ಯರು ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಗೆ ಅಪಾರ ಪ್ರೀತಿ ಹೊಂದಿದ್ದ ಮಹಾನುಭಾವರು.
ಪುಸ್ತಕಗಳ ಮೇಲಿನ ಅವರ ಅಭಿಮಾನ ಅಳವಡಿಸಿಕೊಳ್ಳಲಾಗದಷ್ಟು ವಿಶಾಲವಾಗಿತ್ತು.
ಕಳೆದ ಮೂವತ್ತು ವರ್ಷಗಳಿಂದ “ಹಾಲುಮತ ಸಂಸ್ಕೃತಿ ವೈಭವ” ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸಿದರು.

ಹಾಲುಮತ ಸಂಸ್ಕೃತಿಯ ಕುರಿತ ವಿಚಾರ ಸಂಕಿರಣಗಳು, ಪುಸ್ತಕ ಪ್ರಕಟಣೆಗಳು, ಕಲೆಗಳ ಪ್ರದರ್ಶನಗಳು ಹಾಗೂ ಸಂಪ್ರದಾಯ–ಪರಂಪರೆಯ ದಾಖಲಾತಿ ಇವರ ಜೀವನದ ಮಹತ್ವದ ಧ್ಯೇಯವಾಗಿತ್ತು.
ಸಮಾಜ ತನ್ನ ಬೇರುಗಳನ್ನು ಮರೆತಿರಬಾರದು ಎಂಬ ಅವರ ಕಳಕಳಿ ಸದಾ ಪ್ರೇರಣಾದಾಯಕವಾಗಿತ್ತು.

ಪೂಜ್ಯರ ದಿವ್ಯಚೇತನಕ್ಕೆ ನಮ್ಮ ಭಕ್ತಿಪೂರ್ವಕ ಪ್ರಣಾಮಗಳು.
ಅವರ ಆದರ್ಶಗಳು ಹಾಗೂ ಸೇವಾಭಾವ ಸದಾ ನಮ್ಮನ್ನು ಮಾರ್ಗದರ್ಶನ ಮಾಡಲಿ ಎಂಬುದು ನಮ್ಮ ಪ್ರಾರ್ಥನೆ.

*ಪರಮಪೂಜ್ಯರ ಆತ್ಮಕ್ಕೆ ಶಾಂತಿ ಸಿಗಲಿ. ಭಾವಪೂರ್ಣ ಶೃದ್ದಾಂಜಲಿ ಓಂ ಶಾಂತಿ*
ಬಾಲಾಜಿ ಜಬಾಡೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology