ರಾಯಚೂರು.12.ಜನವರಿ.26: ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026 ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಜನವರಿ 17ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ಟಿಪಿಇಒ ಮಾರುತಿ ಮೊ.ಸಂಖ್ಯೆ:9986121146 ಅಥವಾ ದೈಹಿಕ ಶಿಕ್ಷಕರಾದ ಮುಕ್ತರ್ ಅಹ್ಮದ್ ಅವರ ಮೊ.ಸಂಖ್ಯೆ:8050224221ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ.
ಜನವರಿ 18ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಕಬ್ಬಡಿಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ದೇವದುರ್ಗದ ಟಿಪಿಇಒ ಮುದುಕನ್ನ ಕವಡಿಮಟ್ಟಿ ಮೊ.ಸಂಖ್ಯೆ: 9448619792 ಅಥವಾ ದೈಹಿಕ ಶಿಕ್ಷಕರಾದ ಉಮೇಶ ಮೊ.ಸಂಖ್ಯೆ: 9448218095ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ.
ಕ್ರೀಡೆಗಳಲ್ಲಿ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆಪಡುವಂತಹ ಕ್ರೀಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ರಾಯಚೂರು ಉತ್ಸವ: ಜ.17, 18…ರಂದು ವಾಲಿಬಾಲ್, ಕಬಡ್ಡಿ ಸ್ಪರ್ಧೆ?