Home » ಲೈವ್ ನ್ಯೂಸ್ » Ph.D (ಸಂಶೋಧನ) ಮಾಡುತ್ತಿರುವ ಶೋಧಾರ್ಥಿಗಳಿಂದ ಫೆಲೋಶಿಪ್’ಗೆ ಅರ್ಜಿ ಆಹ್ವಾನ.

Ph.D (ಸಂಶೋಧನ) ಮಾಡುತ್ತಿರುವ ಶೋಧಾರ್ಥಿಗಳಿಂದ  ಫೆಲೋಶಿಪ್’ಗೆ ಅರ್ಜಿ ಆಹ್ವಾನ.

Facebook
X
WhatsApp
Telegram

ಬೆಂಗಳೂರು.10.ಜನವರಿ.26: ಕರ್ನಾಟಕ ಜಾನಪದ ಅಕಾಡೆಮಿಯು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗೆ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕಾಡೆಮಿಯ ವೆಬ್‍ಸೈಟ್‍ನಲ್ಲಿ ತಿಳಿಸಿರುವ ಶೀರ್ಷಿಕೆಗಳನ್ನು ಆಧರಿಸಿ ಕ್ಷೇತ್ರಕಾರ್ಯ ನಡೆಸಿ ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಿಕೊಡಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಿದೆ.

ನಿಗದಿಪಡಿಸಿರುವ ಒಂದು ಶೀರ್ಷಿಕೆಯನ್ನು ಆಯ್ಕೆ ಮಾಡಿ 5 ಪುಟಗಳ ಸಾರಲೇಖ (Synopsis) ವನ್ನು ಬರೆದು ದಿನಾಂಕ : 23-01-2026ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಇವರಿಗೆ ಕಳುಹಿಸಿಕೊಡಲು ಕೋರಿದೆ.
ಸಾರಲೇಖ (Synopsis) ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಲೋಶಿಪ್ ಕಾರ್ಯ ನಡೆಸಲು  ನೀಡಲಾಗುವುದು. ಫೆಲೋಶಿಪ್‍ಗಾಗಿ ಸಾಮಾನ್ಯ- 1, ಪರಿಶಿಷ್ಟ ಜಾತಿ – 5 ಮತ್ತು ಪರಿಶಿಷ್ಟ ಪಂಗಡ – 9 ಮಂದಿಗಳು ಸೇರಿದಂತೆ 15 ಮಂದಿಗಾಗಿ ಅಭ್ಯರ್ಥಿಗಳಿಂದ ಫೆಲೋಶಿಪ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇತರೆ ವಿವರಗಳಿಗಾಗಿ ಅಕಾಡೆಮಿಯ ವೆಬ್‍ಸೈಟ್ (https://janapada.karnataka.gov.in) ನಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology