ರಾಯಚೂರು.09.ಜನವರಿ.26:ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸದೆ ಗೊಂದಲ ಸೃಷ್ಟಿಸಿದೆಂದು ಮಾದಿಗ, ಸಮಗಾರ, ಡೋಹರ, ಡಕ್ಕಲಿಗ ಉಪ ಜಾತಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ರವೀಂದ್ರ ಜಲ್ದಾರ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹಂಚಿಕೆ ರಾಜ್ಯ ಸರ್ಕಾರ ರಚಿಸಿದ್ದ ನ್ಯಾ.ನಾಗಮೋಹನ ದಾಸ್ ಶಿಫಾರಸ್ಸುಗಳನ್ನು ಜಾರಿಗೊಳಿಸದೇ ತಾನೇ ಮೀಸಲಾತಿಯನ್ನು ಹಂಚಿಕೆ ಮಾಡಿ ಸಮಾಜಿಕ ನ್ಯಾಯ ನೀಡಿರುವದಾಗಿ ಹೇಳುತ್ತಿರುವದು ಹಸಿ ಸುಳ್ಳಾಗಿದೆ.
ರಾಜಕೀಯದ ಪ್ರಮುಖರ ಒತ್ತಡಕ್ಕೆ ಮಣಿದು ಅಲೆಮಾರಿಗಳ ಮೀಸಲು ಕಸಿದು ಕೊಂಡು ಹಂಚಿಕೆ ಮಾಡಲಾಗಿದೆ. ನ್ಯಾ.ನಾಗಮೋಹನ ದಾಸ್ ಆಯೋಗ ಮಾದಿಗರಿಗೆ 6 ಛಲವಾದಿ ಸಂಬಂಧಿತ ಜಾತಿಗಳಿಗೆ 5, ಬೋವಿ,ಲಂಬಾಣಿ ಸೇರಿ ಇತರೆರಿಗೆ 4 ಹಾಗೂ ಅಲೆಮಾರಿಗಳಿಗೆ 1 ಅನುಪಾತದಲ್ಲಿ ಮೀಸಲು ಹಂಚಿಕೆ ಮಾಡಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಮಾದಿಗರಿಗೆ, ಛಲವಾದಿ ಸಮೂದಾಯಕ್ಕೆ ತಲಾ ಆರು ಮೀಸಲು ನಿಗಧಿ ಮಾಡಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಅನ್ವಯಿಸಿರುವದಾಗಿ ಹೇಳುವ ಸರ್ಕಾರ ಬಡ್ತಿಯಲ್ಲಿ ಮೀಸಲು ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ ಮಾದಿಗ ಸಮಾಜಕ್ಕೆ ವ್ಯವಸ್ಥಿತವಾಗಿ ಮೀಸಲು ತಪ್ಪಿಸುವಹುನ್ನಾರ ನಡೆಸಿದೆಂದು ಆರೋಪಿಸಿದರು.
ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರಕವಾಗಿ ಮಾದಿಗ ಸಮೂದಾಯ್ಕಕೆ ಐತಿಹಾಸಿಕ ಅನ್ಯಾಯ ಮಾಡಿದೆ.
ಸುಪ್ರಿಂಕೋರ್ಟ್ನ ತೀರ್ಪುನ್ನು ತಮಗೆ ಅನುಕೂಲವಾಗುವಂತೆ ಜಾರಿಗೊಳಿಸಲು ಮುಂದಾಗಿದೆ. ಯಾವುದೇ ವೈಜ್ಞಾನಿಕ ವಿಶ್ಲೇಷಣೆಯಿಲ್ಲದೇ ಇದ್ದರೂ ಮೀಸಲು ಪ್ರಮಾಣ ಹಂಚಿಕೆ ಮಾಡಿರುವದು ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಭೀಮಣ್ಣ ಮಂಚಾಲ, ಚಂದ್ರು ಭಂಡಾರಿ, ಭೀಮಯ್ಯ, ಜೆ.ಮೌನೇಶ, ಆಂಜಿನೇಯ್ಯ, ಲಕ್ಷ್ಮಣ ಇದ್ದರು.






Any questions related to ಒಳ ಮೀಸಲಾತಿಯಲ್ಲಿ ರಾಜ್ಯ ಸರ್ಕಾರ ಗೊಂದಲ ಸೃಷ್ಠಿ?