ಬೆಂಗಳೂರು.08.ಜನವರಿ.26:ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡದ BUSSINESS MAN ಉದ್ಯಮಿಗಳಿಗೆ, ವ್ಯಾಪಾರ ಹಾಗೂ ಉದ್ಯಮ ಚಟುವಟಿಕೆಗಳಿಗೆ ಬಡ್ಡಿ ಸಹಾಯಧನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಉದ್ಯಮಿಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂ.ಎಸ್.ಎಂ.ಇ) MSME ಘಟಕಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ರಾಷ್ಟ್ರೀಕೃತ, ಜಿಲ್ಲಾ ಸಹಕಾರಿ ಮತ್ತು ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಸಾಲಗಳಿಗೆ ಶೇ.4ರಷ್ಟು ಬಡ್ಡಿ ಸಹಾಯಧನ ಸೌಲಭ್ಯವನ್ನು ಸರ್ಕಾರ ಒದಗಿಸಿದೆ.
2021-22ನೇ ಸಾಲಿನಿಂದ ಈ ಯೋಜನೆಯನ್ನು ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗೂ ವಿಸ್ತರಿಸಲಾಗಿದ್ದು, ಮಳಿಗೆಗಳು, ಡೀಲರ್ಶಿಪ್‌ಗಳು, ಫ್ರಾಂಚೈಸಿಗಳು ಹಾಗೂ ಹೋಟೆಲ್ ಉದ್ಯಮಗಳಿಗೂ ಬಡ್ಡಿ ಸಹಾಯಧನದ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ರಾಷ್ಟ್ರೀಕೃತ ಮತ್ತು ವಾಣಿಜ್ಯ ಶೆಡ್ಯೂಲ್ಡ್ ಬ್ಯಾಂಕ್‌ಗಳಿಂದ ಗರಿಷ್ಠ ರೂ.1 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಸಾಲದ ಮರುಪಾವತಿ ಅವಧಿಯನ್ನು 5 ವರ್ಷಗಳ ಕಾಲ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಪಂಗಡದ ಉದ್ಯಮಿಗಳನ್ನು ಆರ್ಥಿಕವಾಗಿ ಬಲಪಡಿಸಿ ಸ್ವಉದ್ಯೋಗ ಹಾಗೂ ವ್ಯಾಪಾರ ವಿಸ್ತರಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.






Any questions related to ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ,ರಾಜ್ಯ ಸರ್ಕಾರದಿಂದ: ಸಹಾಯಧನ.!?