Home » ಲೈವ್ ನ್ಯೂಸ್ » ಏ.1ರಿಂದ ಜನಗಣತಿ ಆರಂಭ: ಕೇಂದ್ರದಿಂದ ಅಧಿಸೂಚನೆ | Census 2027

ಏ.1ರಿಂದ ಜನಗಣತಿ ಆರಂಭ: ಕೇಂದ್ರದಿಂದ ಅಧಿಸೂಚನೆ | Census 2027

Facebook
X
WhatsApp
Telegram

ಹೊಸ ದೆಹಲಿ.08.ಜನೆವರಿ.26: ಕೇಂದ್ರ ಸರ್ಕಾರ ವತಿಯಿಂದ ಏಪ್ರಿಲ್.1, 2026ರಿಂದ 2027ರ ಜನಗಣತಿ ಕಾರ್ಯ ಆರಂಭದ ಭಾಗವಾಗಿ ಮನೆಗಳ ಪಟ್ಟಿ ಮಾಡುವಿಕೆ ಶುರುವಾಗಲಿದೆ ಎಂಬುದಾಗಿ ಭಾರತ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಈ ಕುರಿತಂತೆ ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2027 ರ ಭಾರತದ ಜನಗಣತಿಯ ಹಂತ I ಅಂದರೆ ಮನೆಪಟ್ಟಿ ಮತ್ತು ವಸತಿ ಗಣತಿ (HLO) ಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮನೆಪಟ್ಟಿ ಕಾರ್ಯಾಚರಣೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ಏಪ್ರಿಲ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ, ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶವು ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದಿದೆ.

ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶವು ಸೂಚಿಸಿದ ವೇಳಾಪಟ್ಟಿಯ ಪ್ರಕಾರ, ಮನೆ-ಮನೆಗೆ ಮನೆಪಟ್ಟಿ ಪ್ರಾರಂಭವಾಗುವ ಮೊದಲು 15 ದಿನಗಳ ಅವಧಿಗೆ ಸ್ವಯಂ-ಗಣತಿಗೆ ಅವಕಾಶ ಲಭ್ಯವಿರುತ್ತದೆ ಎಂದು ಹೇಳಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology