ಬೆಂಗಳೂರು.07.ಜನವರಿ.26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಆಯ್ದ ಮಾರ್ಗಗಳ ಬಸ್ ಪ್ರಯಾಣ ದರದಲ್ಲಿ ಶೇ.5 ರಿಂದ 15ರ ವರೆಗೆ ರಿಯಾಯಿತಿ ಘೋಷಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಚೆನ್ನೈ, ಹೈದರಾಬಾದ್, ತಿರುಪತಿ, ಮಂತ್ರಾಲಯ, ಮುಂಬಯಿ, ವಿಜಯವಾಡ, ಎರ್ನಾಕುಲಂ, ಮಧುರೈ, ಕೊಯಮತ್ತೂರು ಮಾರ್ಗಗಳಲ್ಲಿ ರಿಯಾಯಿತಿ ನೀಡಿದೆ.
ಇಷ್ಟು ಮಾರ್ಗಗಳ ಜೊತೆಗೆ ಕೆಲವು ಆಯ್ದ ಮಾರ್ಗಗಳಲ್ಲಿ ಸಂಚರಿಸುವ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್ಗಳಿಗೂ ಅನ್ವಯಿಸುತ್ತದೆ.







Any questions related to KSRTC ಕೆಲವು ಮಾರ್ಗಗಳ ಬಸ್ ಪ್ರಯಾಣ ದರದಲ್ಲಿ ಶೇ.5 ರಿಂದ 15ರ ವರೆಗೆ ರಿಯಾಯಿತಿ?