Home » ಲೈವ್ ನ್ಯೂಸ್ » Engineering ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೀಡಲು ಕಂಪನಿಗಳಿಂದ ಹಣಕ್ಕೆ ಬೇಡಿಕೆ ಆರೋಪ!

Engineering ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೀಡಲು ಕಂಪನಿಗಳಿಂದ ಹಣಕ್ಕೆ ಬೇಡಿಕೆ ಆರೋಪ!

Facebook
X
WhatsApp
Telegram

ಬೆಳಗಾವಿ.07.ಜನವರಿ.26:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ VTU ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತರಬೇತಿ (aprentice) ಬಳಿಕ ನೀಡುವ ಪ್ರಮಾಣಪತ್ರಗಳಿಗೂ ಕಂಪನಿಗಳು ಹಣ ಕೇಳುತ್ತಿವೆ ಎಂದು ಸ್ವತಃ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ VTU ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಅನೇಕ ಕಂಪನಿಗಳು ವಿಟಿಯು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಗೆ ಅವಕಾಶ ನೀಡಲು ಹಣ ಕೇಳುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

ಈ ವಿಚಾರವನ್ನು ವಿಶ್ವವಿದ್ಯಾಯ ಗಂಭೀರವಾಗಿ ಪರಿಗಣಿಸಿದೆ.

ಕಂಪನಿಗಳು ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಪಾವತಿಸಬೇಕಾದ ಕಡ್ಡಾಯ ನಿಯಮ ಇದೆ. ಈ ಕಾರಣಕ್ಕೆ ಕಂಪನಿಗಳ ಮೇಲೆ ಬಂದ ಆರೋಪಗಳನ್ನು ವಿಶ್ವವಿದ್ಯಾಲಯವು ಕೂಲಂಕುಷವಾಗಿ ಪರಿಶೀಲಿಸಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿಲು ತಂಡವನ್ನು ರಚಿಸಿದೆ.

ವಿದ್ಯಾರ್ಥಿಗಳಿಂದ ಹಣ ಕೇಳಿದ ಕಂಪನಿಗಳಿಗೆ ಈ ತಂಡದ ಸದಸ್ಯರು ಭೇಟಿ ನೀಡಬೇಕು. ಅಲ್ಲಿನ ಮಾಹಿತಿ ಸಂಗ್ರಹಿಸಿ ವರದಿ ನೀಡುವ ಜವಾಬ್ದಾರಿ ನೀಡಲಾಗಿದೆ. “ವಿಟಿಯು ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಪೈಕ ಒಂದು ಕಂಪನಿಗೆ ಸಂಪರ್ಕಿಸಿದಾಗ ಕಂಪನಿಯ ಸಿಬ್ಬಂದಿ ಇಂಟರ್ನ್‌ಶಿಪ್ ಪಡೆಯಲು ಹಣ ಪಾವತಿಸಬೇಕಿದೆ ಎಂದು ತಿಳಿಸಿದ್ದಾಗಿ ವಿದ್ಯಾರ್ತಿಗಳು ವಿಶ್ವವಿದ್ಯಾಲಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಕ್ರೆಡಿಟ್‌ಗಾಗಿ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಅತ್ಯಗತ್ಯ

ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿದ ಬಳಿಕ ಡೊಮೇನ್‌ಗಳಲ್ಲಿ ಪ್ರಾಯೋಗಿಕ ಅನುಭವ ಹೊಂದಲು ಏಳನೇ ಅಥವಾ ಎಂಟನೇ ಸೆಮಿಸ್ಟರ್‌ನಲ್ಲಿ ಆರು ತಿಂಗಳ ಇಂಟರ್ನ್‌ಶಿಪ್ ಮಾಡುವುದನ್ನು ವಿಶ್ವವಿದ್ಯಾಲಯ ಕಡ್ಡಾಯಗೊಳಿಸಿದೆ. ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಪ್ರತಿ ವಿದ್ಯಾರ್ಥಿಗೆ ಒಂಬತ್ತು ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ವ್ಯಾಸಂಗ ಪೂರ್ಣಗೊಳ್ಳಲು ಇಂಟರ್ನ್‌ಶಿಪ್ ಅಗತ್ಯವಾಗಿದೆ.

ವಿದ್ಯಾರ್ಥಿಗಳಿಂದ ನಕಲಿ ಪ್ರಮಾಣಪತ್ರ ಸಲ್ಲಿಕೆ ಆರೋಪ

ಹಲವು ಕಾಲೇಜುಗಳಿಗೆ ನಕಲಿ ಇಂಟರ್ನ್‌ಶಿಪ್ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ವಿಟಿಯು ಅಧಿಕಾರಿಯೊಬ್ಬರು ದೂರಿದ್ದಾರೆ. ಇಂತಹ ಅಕ್ರಮಗಳನ್ನು ತಡೆಗಟ್ಟಲು, ವಿಟಿಯು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಲಾದ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದೆ. ಇದರ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಆನ್‌ಲೈನ್ ಪೋರ್ಟಲ್ ಶುರು ಮಾಡಿತು. ಅದರೊಳಗೆ ಇಂಟರ್ನ್‌ಶಿಪ್ ಕೊಡುವ ಕಂಪನಿಗಳ ನೋಂದಣಿ ಆಗಿರುತ್ತದೆ. ಒಟ್ಟು ಸುಮಾರು 2,500 ಕ್ಕೂ ಅಧಿಕ ಕಂಪನಿಗಳು ವಿಟಿಯು ಜೊತೆಗೆ ಒಪ್ಪಂದ ಮಾಡಿಕೊಂಡಿವೆ.

ಕಂಪನಿಗಳು ಇಂಟರ್ನ್‌ಶಿಪ್ ನೀಡಲು ಹಣ ಕೇಳುತ್ತಿರುವ ದೂರುಗಳನ್ನು ವಿಟಯುಗೆ ಕಳುಹಿಸಲಾಗಿದೆ ಎಂದು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಿಯೋಜನಾ ಅಧಿಕಾರಿ ಹೇಳಿದರು. ವಿಟಿಯು ಉಪಕುಲಪತಿ ಎಸ್.ವಿದ್ಯಾಶಂಕರ್ ಅವರು ಸಹ ವಿದ್ಯಾರ್ಥಿಗಳ ಆರೋಪ, ದೂರುಗಳ ಸಲ್ಲಿಕೆಯನ್ನು ಒಪ್ಪಿಕೊಂಡರು. ಹಣ ಕೇಳಿದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಇನ್ನೂ ಕೆಲವು ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಸಮಯದಲ್ಲಿ ನಿಯಮಿತವಾಗಿ ಕೆಲಸಕ್ಕೆ ಹೈರಾಗುವ ಕುರಿತು ಒಂದಷ್ಟು ದೂರುಗಳು ಬಂದಿವೆ. ಈ ಬಗ್ಗೆಯು ಕಂಪನಿಗಳಿಗೆ ಭೇಟಿ ನೀಡುವ ವಿಟಿಯು ತನಿಖಾ ತಂಡವು ಪರಿಶೀಲಿಸಲಿದೆ ಎಂದು ಉಪಕುಲಪತಿಗಳು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology