Home » ಲೈವ್ ನ್ಯೂಸ್ » ಸಣ್ಣ ಮಗುವಿನಿಂದ ಖಾಸಗಿ ಅಂಗ ಮುಟ್ಟಿಸಿಕೊಳ್ಳುವುದು ಗಂಭೀರ ಲೈಂಗಿಕ ಅಪರಾಧ: ದೆಹಲಿ ಹೈಕೋರ್ಟ್

ಸಣ್ಣ ಮಗುವಿನಿಂದ ಖಾಸಗಿ ಅಂಗ ಮುಟ್ಟಿಸಿಕೊಳ್ಳುವುದು ಗಂಭೀರ ಲೈಂಗಿಕ ಅಪರಾಧ: ದೆಹಲಿ ಹೈಕೋರ್ಟ್

Facebook
X
WhatsApp
Telegram

            POCSO ACT 2012

                (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012) ಲೈಂಗಿಕ ದೌರ್ಜನ್ಯ, ಹಲ್ಲೆ, ಕಿರುಕುಳ ಮತ್ತು ಅಶ್ಲೀಲತೆಯಿಂದ ಮಕ್ಕಳನ್ನು (18 ವರ್ಷದೊಳಗಿನವರು) ರಕ್ಷಿಸಲು, ವರದಿ ಮಾಡಲು ಮತ್ತು ವಿಚಾರಣೆಗೆ ವಿಶೇಷ ನ್ಯಾಯಾಲಯಗಳು ಮತ್ತು ಮಕ್ಕಳ ಸ್ನೇಹಿ ಕಾರ್ಯವಿಧಾನಗಳನ್ನು ಸ್ಥಾಪಿಸಲು, ತ್ವರಿತ ನ್ಯಾಯವನ್ನು ಗುರಿಯಾಗಿಟ್ಟುಕೊಂಡು ಮತ್ತು ಇತ್ತೀಚಿನ ಕಠಿಣ ತಿದ್ದುಪಡಿಗಳು ಸೇರಿದಂತೆ ಸೂಕ್ಷ್ಮ ನಿರ್ವಹಣೆ ಮತ್ತು ಕಠಿಣ ಶಿಕ್ಷೆಗಳ ಮೂಲಕ ಮಗುವಿನ ಹಿತಾಸಕ್ತಿಯನ್ನು ಕೇಂದ್ರೀಕರಿಸಲು ವಿನ್ಯಾಸಗೊಳಿಸಲಾದ ಒಂದು ಹೆಗ್ಗುರುತು ಭಾರತೀಯ ಕಾನೂನಾಗಿದೆ.

ಹೊಸ ದೆಹಲಿ.07.ಜನವರಿ.26: Posco Act 2012. ಲೈಂಗಿಕ ಭಾವನೆಯಿಂದ ಸಣ್ಣ ಮಗುವಿನಿಂದ ಖಾಸಗಿ ಭಾಗಗಳನ್ನು ಮುಟ್ಟಿಸಿಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯಡಿ ಗಂಭೀರ ಲೈಂಗಿಕ ದೌರ್ಜನ್ಯವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

ಪೋಕ್ಸೊ ಕಾಯ್ದೆಯ ಪರಿಚ್ಛೇದ 10ರಡಿ ತನ್ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ತೀರ್ಪು ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಆ ವ್ಯಕ್ತಿಯು ಸುಮಾರು ನಾಲ್ಕು ವರ್ಷದ ಹೆಣ್ಣು ಮಗುವಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಮಗುವಿನಿಂದ ಮುಟ್ಟಿಸಿಕೊಂಡಿದ್ದನು ಎಂಬ ಆರೋಪವಿದೆ.

ಪೋಕ್ಸೊ ಪ್ರಕಾರ, 12 ವರ್ಷಕ್ಕಿಂತ ಕೆಳಗಿನ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಗಂಭೀರ ಲೈಂಗಿಕ ದೌರ್ಜನ್ಯವಾಗಿ ಪರಿಗಣಿಸಲಾಗುತ್ತದೆ.

ಮಗುವಿನ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಆರೋಪಿಯನ್ನು ದೋಷಿ ಎಂದು 2024ರ ಜುಲೈನಲ್ಲಿ ವಿಚಾರಣಾ ನ್ಯಾಯಾಲಯ ಘೋಷಿಸಿದ್ದು, ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology