Home » ಲೈವ್ ನ್ಯೂಸ್ » ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಅನುಮೋದನೆ

ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಅನುಮೋದನೆ

Facebook
X
WhatsApp
Telegram


ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಅನುಮೋದನೆ || ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸಚಿವರಿಗೆ ಅಭಿನಂದನೆ

ಭಾಲ್ಕಿ.05.ಜನವರಿ.26: ಬೆಂಗಳೂರಿನಲ್ಲಿ ವಿಶ್ವಗುರು ಬಸವಣ್ಣನವರ ಜೀವ ವೈವಿಧ್ಯ ಉದ್ಯಾನಕ್ಕೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನಲೆಯಲ್ಲಿ, ಖಟಕಚಿಂಚೋಳಿ ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಅರಣ್ಯಸಚಿವ ಈಶ್ವರ ಖಂಡ್ರೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಪಟ್ಟಣದ ಸಚಿವರ ನಿವಾಸದಲ್ಲಿ ಸೋಮವಾರ ಖಟಕಚಿಂಚೋಳಿಯ ಹಿರೇಮಠ (ಹುಗ್ಗೆಳ್ಳಿ) ಸಂಸ್ಥಾನದ ಪೀಠಾಧಿಪತಿ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ತಾಲೂಕಿನ ಲಿಂಗಾಯತ ಮುಖಂಡರು ಉದ್ಯಾನವನಕ್ಕೆ ಪ್ರಯತ್ನಿಸಿ, ಅನುಮೋದನೆ ಪಡೆದ ಅರಣ್ಯ ಸಚಿವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಜನಮಾನಸದಲ್ಲಿ ಅಚ್ಚಳಿಯದೇ ಇರಲು, ಬೆಂಗಳೂರು ಮಹಾನಗರದಲ್ಲಿ ಅರಣ್ಯ ಇಲಾಖೆಯಿಂದ ೧೫೩ ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಬೆಂಗಳೂರು ಮಹಾನಗರದಲ್ಲಿ ಅತ್ಯಗತ್ಯವಾದ ಶ್ವಾಸತಾಣ ಹಾಗೂ ಮನೋಲ್ಲಾಸ ಕೇಂದ್ರವಾಗಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು, ಸುಮಾರು ೫೦ ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಪ್ರಪ್ರಥಮವಾಗಿ ಸಂಸತ್ತಿನ ಕಲ್ಪನೆಯನ್ನು ನೀಡಿದರು. ಅಂದಿನ ಕಾಲದಲ್ಲಿ ತುಳಿತಕ್ಕೆ ಒಳಗಾಗಿರುವ ವಿವಿಧ ಸಮುದಾಯ ಕಾಯಕಜೀವಿಗಳ ೭೭೦ ಪ್ರತಿನಿಧಿನಗಳು ಅಂದಿನ ಅನುಭವಮಂಟಪದ ನಿರ್ಣಯದಲ್ಲಿ ಪಾಲ್ಗೊಳ್ಳುತ್ತಿದ್ದರು.

ಅವರೆಲ್ಲರೂ ಒಗ್ಗೂಡಿ ಪ್ರತಿನಿತ್ಯ ಅನುಭಾವ ನಡೆಸುತ್ತಿದ್ದರು. ಅವರ ಅನುಭಾವದಿಂದ ಹೊರಹೊಮ್ಮಿದ ವಚನ ಸಾಹಿತ್ಯ ಇಂದು ಸಕಲ ಜೀವಾತ್ಮರ ಕಲ್ಯಾಣ ಬಯಸುವ ವೈಶ್ವಿಕ ಸಾಹಿತ್ಯವಾಗಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ವೇದಿಕೆಯಾಗಿವೆ. ಹಿರೇಮಠದ ಲಿಂ.ಡಾ|ಚನ್ನಬಸವ ಪಟ್ಟದ್ದೇವರು, ಹಾನಗಲ್ಲ ಕುಮಾರ ಸ್ವಾಮೀಜಿಗಳ ಹತ್ತಿರ ಸುಮಾರು ವರ್ಷಗಳಕಾಲ ಸಂಸ್ಕಾರ ಪಡೆದು, ವೀರಶೈವ ಮಹಾಸಭಾದ ಸಂಸ್ಥಾಪಕರಿoದ ಉತ್ತಮ ಸ್ವಾಮೀಜಿಗಳಾಗಿ ಹೀರೇಮಠ ಸಂಸ್ಥಾನ ಭಾಲ್ಕಿಯ ಪೀಠಾಧ್ಯಕ್ಷರಾಗಿದ್ದು ಎಲ್ಲರಿಗೂ ತಿಳಿದ ವಿಷಯ.

ಹೀಗಾಗಿ ಲಿಂಗಾಯತರು ಯಾವುದೇ ಭೇದಗಳಿಗೆ ಮನಸ್ಸುಕೊಡದೆ, ವೀರಶೈವ ಲಿಂಗಾಯತ ಎರಡೂ ಒಂದೇ ವೇದಿಕೆಯಲ್ಲಿ ಮುನ್ನಡೆಸುವ ಕಾರ್ಯಮಾಡಬೇಕು ಎಂದರು.


ಖಟಕ ಚಿಂಚೋಳಿ ಹಿರೇಮಠ (ಹುಗ್ಗೆಳ್ಳಿ) ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರಿಗೆ ಮತ್ತು ಸಂಪುಟದ ಎಲ್ಲಾ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ವೀರಶೈವ ಲಿಂಗಾಯತ ಮಠಾಧಿಪತಿಗಳಿಂದ ಹೃತ್ಫೂರ್ವಕ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಜೈರಾಜ ಪಾತ್ರೆ, ಸಂತೋಷ ಬಿಜಿಪಾಟೀಲ, ಸೋಮನಾಥಪ್ಪ ಅಸ್ಟೂರೆ, ಚಂದ್ರಕoತ ಪಾಟೀಲ, ಶಿವಕುಮಾರ ಕಲ್ಯಾಣೆ, ಬಸವರಾಜ ಮರೆ, ಅಶೋಕ ಲೋಖಂಡೆ, ಜಯರಾಜ ದಾಬಶೆಟ್ಟಿ, ಪ್ರಕಾಶ ಮಾಶೆಟ್ಟೆ, ಸಂಗಮೇಶ ವಾಲೆ, ಕಪೀಲ ಕಲ್ಯಾಣೆ, ಅಶೋಕ ಬಾವುಗೆ, ಜೀವನ ಪೆದ್ದೆ, ಚಂದ್ರಕಾoತ ಖಂಡಾಳೆ, ಬಸವರಾಜ ವಂಕೆ, ಶಿವಕುಮಾರ ಪಾತ್ರೆ, ಗುರನಾಥ ನಿಜಗುಣಪ್ಪ, ಮಲ್ಲಿಕಾರ್ಜುನ ಪ್ರಭಾ, ಚಂದ್ರಕಾoತ ವಂಕೆ, ಮಲ್ಲಿಕಾರ್ಜುನ ಬಿರಾದಾರ, ಮಹಾದೇವ ಸ್ವಾಮಿ, ವಿಲಾಸ ಬಕ್ಕಾ, ದೀಪಕ ಥಮಕೆ ಮತ್ತಿತರರು ಇದ್ದರು.


ಕೋಟ್: ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯಿಂದ ಉತ್ತಮ ಪಾರ್ಕ ನರ್ಮಾಣಕ್ಕೆ ಇಷ್ಟೊಂದು ಅಭಿಮಾನ ದೊರೆತಿರುವುದು ಸಂತಸದ ಸಂಗತಿ, ಭಾಲ್ಕಿಯ ಅಭಿವೃದ್ಧಿಗೂ ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ಇಂಚೂರಿನಲ್ಲಿ ಟಿ.ಪಾರ್ಕ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ, ಭಾಲ್ಕಿ ಪಟ್ಟಣದ ಕೆರೆ ಅಭಿವೃದ್ಧಿಗೆ ೧೫ ಕೋಟಿ ರೂ. ಅನುದಾನ ನೀಡಲಾಗಿದೆ.      

       
– ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು.
ಚಿತ್ರ ೫ಬಿಎಲ್‌ಕೆ೧
ಭಾಲ್ಕಿ: ಪಟ್ಟಣದ ಸಚಿವರ ನಿವಾಸದಲ್ಲಿ ಖಟಕಚಿಂಚೋಳಿ ಹಿರೇಮಠ(ಹುಗ್ಗೆಳ್ಳಿ)ಯ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ವತಿಯಿಂದ ಸಚಿವ ಈಶ್ವರ ಖಂಡ್ರೆಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology