ಬೀದರ,05.ಜನವರಿ.26:- ದಿನಾಂಕ: 14-10-2025 ರಂದು ಬೀದರ ರೈಲ್ವೆ ನಿಲ್ದಾಣದ ಟಿಕೇಟ್ ಕೌಂಟರ ಹತ್ತಿರ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 50-60 ವರ್ಷ ವಯಸ್ಸಿನ ಅಪರಿಚಿತ ಮಹಿಳೆ (ವಾಹೀದಾ ಬೇಗಂ) ಆಕೆಗೆ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 02-01-2026 ರಂದು ಮೃತಪ್ಟಟಿರುತ್ತಾಳೆಂದು ಬೀದರ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಈ ಬೀದರ ಬೀದರ ರೈಲ್ವೆ ಪೊಕೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ: 01/2026 ಕಲಂ 194 ಬಿಎನ್‌ಎಸ್‌ಎಸ್ ಪ್ರಕರಣ ದಾಖಲಾಗಿರುತ್ತದೆ.
ಮೃತ ಅಪರಿಚಿತ ಮಹಿಳೆ ಸುಮಾರು 5.5 ಅಡಿ ಎತ್ತರ ಇದ್ದು, ಸದೃಢ ಮೈಕಟ್ಟು, ಸಾದಗಪ್ಪು ಮೈಬಣ್ಣ ತಲೆಯಲ್ಲಿ ಬಿಳಿ-ಕಪ್ಪು ಕೂದಲು, ಚಿಕ್ಕ ಕಣ್ಣುಗಳು, ಸಣ್ಣ ಮೂಗು, ಗುಂಡು ಮುಖ ಹೊಂದಿರುವ ಇವಳು ಮೈಮೇಲೆ ಒಂದು ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಕೆಂಪು ಬಣ್ಣದ ಲಂಗಾ, ಒಂದು ನೀಲಿ ಬಣ್ಣದ ಹೂವಿನ ಚಿತ್ರವುಳ್ಳ ಬೇಡಶೀಟ್ ಇರುತ್ತದೆ.
ಈ ಮೃತ ಅಪರಿಚಿತ ಮಹಿಳೆಯ ವಾರಸುದಾರರ ಯಾರಾದರೂ ಪತ್ತೆ ಸುಳಿವು ಸಿಕ್ಕರೆ ಪೊಲೀಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೀದರಗೆ ಹಾಗೂ ದೂರವಾಣಿ ನಂ. 08482 – 226389, ಮೊಬೈಲ್ ನಂ. 9480802133, 7019384645 ಗೆ ಸಂಪರ್ಕಿಸುವAತೆ ಅವರು ತಿಳಿಸಿದ್ದಾರೆ.






Any questions related to ಅಪರಿಚಿತ ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ?