Home » ಲೈವ್ ನ್ಯೂಸ್ » ನೆಕೆ-ಸೆಟ್‌ಗೆ ಡೂಪ್ಲಿಕೇಟ್ ಕಾಟ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದ ನಕಲಿ ವಿಶೇಷಚೇತನರು

ನೆಕೆ-ಸೆಟ್‌ಗೆ ಡೂಪ್ಲಿಕೇಟ್ ಕಾಟ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದ ನಕಲಿ ವಿಶೇಷಚೇತನರು

Facebook
X
WhatsApp
Telegram

ಬೆಂಗಳೂರು.13.ಡಿಸೆಂಬರ್.25: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನವೆಂಬರ್ 2025 ರಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ವಿಶೇಷಚೇತನರ ಕೋಟಾದಡಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವ 31 ಮಂದಿ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾರೆ,  ಕೆ-ಸೆಟ್ ಪರೀಕ್ಷೆ ನಡೆಸಿದ ನಂತರ ಈ ಅಕ್ರಮ ಬಯಲಾಗಿದೆ. ಡಿ.8 ಮತ್ತು 9 ರಂದು ತಜ್ಞ ವೈದ್ಯರ ತಂಡದಿಂದ ನಡೆದ ಪರಿಶೀಲನೆಯಲ್ಲಿ ಈ ನಕಲಿ ಪ್ರಮಾಣಪತ್ರಗಳು ಪತ್ತೆಯಾಗಿವೆ, ಇದರಿಂದಾಗಿ ಕೆ-ಸೆಟ್ ಪರೀಕ್ಷೆಗಳಲ್ಲಿ ನಕಲಿ ದಾಖಲೆಗಳ ಹಾವಳಿ ಹೆಚ್ಚಿರುವುದು ಸ್ಪಷ್ಟವಾಗಿದೆ.

ಘಟನೆಯ ವಿವರ:

ದಾಖಲೆ ಪರಿಶೀಲನೆ: ವಿಶೇಷಚೇತನ ಕೋಟಾದಡಿ ಅರ್ಜಿ ಸಲ್ಲಿಸಿದ್ದವರ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು.

ನಕಲಿ ಪತ್ತೆ: ಪರಿಶೀಲನೆಯಲ್ಲಿ 31 ಮಂದಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವುದು ಪತ್ತೆಯಾಗಿದೆ.

ವೈದ್ಯಕೀಯ ಮಂಡಳಿ: ತಜ್ಞ ವೈದ್ಯರ ತಂಡದ ಮೂಲಕ ಮತ್ತೊಮ್ಮೆ ಪರಿಶೀಲನೆ ನಡೆಸಿ, ನಕಲಿಗಳನ್ನು ಗುರುತಿಸಲಾಯಿತು.

ಪರಿಣಾಮ: ಈ ಘಟನೆಯು ಕೆ-ಸೆಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳ ಹಾವಳಿಯ ಕುರಿತು ಕಳವಳ ವ್ಯಕ್ತಪಡಿಸಿದೆ.

ಈ ಘಟನೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ನಕಲಿ ದಾಖಲೆಗಳ ತಡೆಗಟ್ಟುವಿಕೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವನ್ನು ತೋರಿಸುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿಶೇಷಚೇತನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಿಯಾಯಿತಿ ನೀಡಿದ್ದ ‘ಕೆ-ಸೆಟ್’ ಪರೀಕ್ಷೆಗಳಲ್ಲಿಯೂ ನಕಲಿ ಪ್ರಮಾಣ ಪತ್ರಗಳು ಸಲ್ಲಿಕೆಯಾಗಿರುವುದು ಪತ್ತೆಯಾಗಿದೆ.

ನ.2ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಆಯ್ಕೆ ಅರ್ಹತೆಗಾಗಿ ‘ಕೆ-ಸೆಟ್’ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ವಿಶೇಷಚೇತನ ಕೋಟಾದಡಿ ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಪರಿಶೀಲಿಸಿದಾಗ 31 ಮಂದಿ ನಕಲಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ. ನಂತರ ಕೆಇಎ ‘ಕೆ-ಸೆಟ್’ ಬರೆದಿದ್ದ ವಿಶೇಷಚೇತನ ಅಭ್ಯರ್ಥಿಗಳ ದಾಖಲೆಗಳನ್ನು ಡಿ.8 ಹಾಗೂ ಡಿ.9 ರಂದು ಪರಿಶೀಲನೆ ನಡೆಸಿತ್ತು.

ತಜ್ಞ ವೈದ್ಯರ ತಂಡದ ಮೂಲಕ ನಡೆದ ಪರಿಶೀಲನೆಯಲ್ಲಿ ನಕಲಿ ಅಭ್ಯರ್ಥಿಗಳ ಬಂಡವಾಳ ಬಯಲಾಗಿದೆ.

ಶೇ.40ರಷ್ಟು ವಿಕಲತೆ ಹೊಂದಿದವರು ‘ಕೆ-ಸೆಟ್’ನಲ್ಲಿ ಶೇ.35ರಷ್ಟು ಅಂಕ ಪಡೆದರೆ ಅರ್ಹತೆ ಸಿಗಲಿದೆ. ಆದರೆ, ಅರ್ಹರಲ್ಲದವರಿಗೂ ವಿಶೇಷಚೇತನರ ಪ್ರಮಾಣಪತ್ರ ಸಿಕ್ಕಿರುವುದು ಶಂಕೆ ಮೂಡಿಸಿದೆ. ವಿಶೇಷಚೇತನರಿಗೆ ನೀಡಿರುವ ರಿಯಾಯಿತಿಗಳನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಅಭ್ಯರ್ಥಿಗಳು, ನಕಲಿ ಪ್ರಮಾಣ ಪತ್ರ ಸಲ್ಲಿಸಿ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾರೆ.

2025ನೇ ಸಾಲಿನಲ್ಲಿ 375 ಮಂದಿ ವಿಶೇಷಚೇತನರು ‘ಕೆ-ಸೆಟ್’ಗೆ ನೋಂದಾಯಿಸಿದ್ದರು. ಈ ಪೈಕಿ 278 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈಗ 31 ಅಭ್ಯರ್ಥಿಗಳ ಪ್ರಮಾಣಪತ್ರ ನಕಲಿಯಾಗಿದೆ ಎಂಬುದನ್ನು ಕೆಇಎ ಪತ್ತೆ ಹಚ್ಚಿದೆ. ಕಳೆದ ಬಾರಿ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಕೂಡ 21 ಮಂದಿ ನಕಲಿ ವಿಶೇಷಚೇತನರ ಪ್ರಮಾಣಪತ್ರ ಸಲ್ಲಿಸಿದ್ದ ಬಗ್ಗೆ

ಪ್ರಮಾಣಪತ್ರಕ್ಕೆ ಯಾರು ಅರ್ಹರು?

# ಶೇ.40ರಷ್ಟು ವಿಕಲತೆ ಹೊಂದಿರಬೇಕು

# ಆಯುಷ್, ನಿಮ್ಹಾನ್ಸ್, ಸರಕಾರಿ ವಾಕ್ ಮತ್ತು ಶ್ರವಣ ಆಸ್ಪತ್ರೆ ದೃಢೀಕರಿಸಿರಬೇಕು

# ದೃಷ್ಟಿದೋಷ, ಶ್ರವಣದೋಷ ಹಾಗೂ ಅಂಗಾಂಗ ವೈಫಲ್ಯತೆ ಹೊಂದಿದವರು

# ಕುಷ್ಠರೋಗದಿಂದ ಗುಣಮುಖರಾಗಿ ವಿಕಲತೆ ಇದ್ದವರು

* ಆ್ಯಸಿಡ್ ದಾಳಿಯಿಂದ ತೀವ್ರ ಹಾನಿಯಾದವರು

# ಬಹು ಅಂಗಾಂಗ ವೈಫಲ್ಯತೆ ಹೊಂದಿದವರು

‘ಕೆ-ಸೆಟ್’ ಪರೀಕ್ಷೆ ದಾಖಲೆಗಳ ಪರಿಶೀಲನೆ ವೇಳೆ ನಕಲಿ ವಿಶೇಷಚೇತನರ ಪ್ರಮಾಣಪತ್ರ ಸಲ್ಲಿಕೆಯಾಗಿ ರುವುದು ಪತ್ತೆಯಾಗಿದೆ. ಶೇ.40ರಷ್ಟು ವಿಕಲತೆ ಇಲ್ಲದ ವರಿಗೆ ಪ್ರಮಾಣ ಪತ್ರ ಸಿಕ್ಕಿದೆ. ನಕಲಿ ಪ್ರಮಾಣಪತ್ರಗಳ ಬಗ್ಗೆ ತನಿಖೆಗೆ ಆರೋಗ್ಯ ಇಲಾಖೆಯನ್ನು ಕೋರಲಾಗಿದೆ.

-ಎಚ್.ಪ್ರಸನ್ನ ಕಾರ್ಯನಿರ್ವಾಹಕ

ನಿರ್ದೇಶಕರು, ಕೆಇಎ

ಮಾಹಿತಿ ಬಹಿರಂಗವಾಗಿತ್ತು. ಇದರ ಬೆನ್ನತ್ತಿದ್ದ ಕೆಇಎಗೆ ಮತ್ತೆ ಕಳ್ಳಾಟ ನಡೆದಿರುವುದು ಅರಿವಿಗೆ ಬಂದಿದೆ. 1995ರ ಕಾಯಿದೆ ಪ್ರಕಾರ ದೃಷ್ಟಿದೋಷ, ಶ್ರವಣದೋಷವುಳ್ಳ, ಅಂಗಾಗ ವೈಫಲ್ಯವಿದ್ದವರಿಗೆ ವಿಶೇಷಚೇತನರ ಪ್ರಮಾಣ ಪತ್ರ ಪಡೆಯುವ ಅವಕಾಶವಿದೆ. ಆದರೆ ಶೇ.40 ರಷ್ಟು ವಿಕಲತೆ ಇಲ್ಲದವರು ಕೂಡ ನಕಲಿ ಪ್ರಮಾಣ ಪತ್ರ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology