ಬೀದರ.31.ಡಿಸೆಂಬರ್.25:- ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಆಯುಕ್ತಾಲಯದಿಂದ ಆಯೋಜಿಸಲಾಗಿದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪಾಲಿಕ್ಲಿನಿಕ್ ಸ್ಪರ್ದೆಯಲ್ಲಿ ಬೀದರ ಜಿಲ್ಲೆಯ ಪಶು ಇಲಾಖೆಯ ಪಶುವೈದ್ಯಕೀಯ ಪಾಲಿಕ್ಲಿನಿಕ್ (ಜಿಲ್ಲಾ ಪಶು ಆಸ್ಪತ್ರೆ)ಗೆ “ಮೂರನೆಯ” ಅತ್ಯುತ್ತಮ ಪಾಲಿಕ್ಲಿನಿಕ್ ಪ್ರಶಸ್ತಿಯಂದು ಘೋಷಿಸಲಾಗಿದ್ದು. ಸದರಿ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರಯನ್ನು ಪಾಲಿಕ್ಲಿನಿಕ್ ಬೀದರನ ಮಾನ್ಯ ಉಪನಿರ್ದೇಶಕರಾದ ಡಾ.ರವಿಂದ್ರಕುಮಾರ ಭೂರೆ ರವರಿಗೆ ನೀಡಿ ಬೆಂಗಳೂರುನಲ್ಲಿ ಗೌರವಿಸಲಾಯಿತು.
ರಾಜ್ಯಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯ ಮೂಲಕ ನೀಡಲಾದ ಈ ಪ್ರಶಸ್ತಿಯು ಪಾಲಿಕ್ಲಿನಿಕ್ ಬೀದರನ ಮೂಲಸೌಕರ್ಯಗಳು, ಸ್ವಚ್ಛತೆ , ಆಧುನಿಕ ಸೌಲಭ್ಯಗಳು ಹಾಗೂ ವಿವಿಧ ರೋಗಗ್ರಸ್ತ ಪ್ರಾಣಿಗಳ ಗುಣಮಟ್ಟದ ಚಿಕಿತ್ಸೆ/ ಶಸ್ತ್ರಚಿಕಿತ್ಸೆಯನ್ನು ನೀಡುವ ಜೊತೆಗೆ ಸಾರ್ವಜನಿಕರಿಗೆ ನಿರಂತರ ಪಶುವೈದ್ಯಕೀಯ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.
ಈ ಪ್ರಶಸ್ತಿಗೆ ಪಾಲಿಕ್ಲಿನಿಕ್ ಬೀದರನ ಮುಖ್ಯ ಪಶುವೈದ್ಯರಾದ ಡಾ.ಗೌತಮ ಅರಳಿ, ಡಾ.ನೀಲಕಂಠ ಚನ್ನಶೆಟ್ಟಿ, ಡಾ.ಶ್ರೀಕಾಂತ ಬಿರಾದಾರ ಮತು ಸಿಬ್ಬಂದಿಯವರು ಹರ್ಷ ವ್ಯಕ್ತ ಪಡಿಸಿದರು.






Any questions related to ಪಾಲಿಕ್ಲಿನಿಕ್ ಬೀದರಗೆ ರಾಜ್ಯಮಟ್ಟದ ಅತ್ಯುತ್ತಮ ಪಶುವೈದ್ಯಕೀಯ ಸೇವಾ ಪ್ರಶಸ್ತಿ?