Home » ಲೈವ್ ನ್ಯೂಸ್ » NPS New Rules:Retirement Plan 2025

NPS New Rules:Retirement Plan 2025

Facebook
X
WhatsApp
Telegram

NPS New Rules:Retirement Plan 2025 ರ ಹೊಸ ನಿಯಮಗಳು ಅರ್ಹ ಸರ್ಕಾರೇತರ ಚಂದಾದಾರರಿಗೆ ಕಡ್ಡಾಯ ವರ್ಷಾಶನ ಅಗತ್ಯವನ್ನು 40% ರಿಂದ 20% ಕ್ಕೆ ಇಳಿಸಿವೆ. ₹12 ಲಕ್ಷಕ್ಕಿಂತ ಹೆಚ್ಚಿನ ಮಿತಿ: ನಿಮ್ಮ ಸಂಗ್ರಹವಾದ ಪಿಂಚಣಿ ಸಂಪತ್ತು ₹12 ಲಕ್ಷ ಮೀರಿದರೆ, ನೀವು ಈಗ 80% ವರೆಗೆ ಒಂದೇ ಮೊತ್ತವಾಗಿ ಹಿಂಪಡೆಯಬಹುದು. ವರ್ಷಾಶನವನ್ನು ಖರೀದಿಸಲು ನೀವು ಉಳಿದ 20% ಅನ್ನು ಮಾತ್ರ ಬಳಸಬೇಕಾಗುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿಯಮಗಳಲ್ಲಿ ಭಾರೀ ಬದಲಾವಣೆ ಮಾಡಿದೆ. ಇಲ್ಲಿಯವರೆಗೆ ನಿವೃತ್ತಿ ಯೋಜನೆ (Retirement Plan) ಅಂದ್ರೆ ಒಂದು ಫಿಕ್ಸ್ ರೂಲ್ಸ್ ಇತ್ತು. ನೀವು ರಿಟೈರ್ಡ್ ಆದಾಗ ಜಮೆ ಆಗಿರೋ ಒಟ್ಟು ಹಣದಲ್ಲಿ ಅಥವಾ ಕಾರ್ಪಸ್ (Corpus) ನಲ್ಲಿ ಕನಿಷ್ಠ 40% ಹಣವನ್ನ ವರ್ಷಾಶನ (Annuity) ಅಂದ್ರೆ ಮಂತ್ಲಿ ಪೆನ್ಷನ್‌ಗಾಗಿ ಮೀಸಲಿಡಲೇಬೇಕಿತ್ತು.

ಉಳಿದ 60% ಮಾತ್ರ ಕೈಗೆ ಒಟ್ಟು ಮೊತ್ತ (Lump sum) ಆಗಿ ಸಿಗ್ತಿತ್ತು. ಆದ್ರೆ ಈಗ ಆಟ ಬದಲಾಗಿದೆ. ಹೊಸ ರೂಲ್ಸ್ ಪ್ರಕಾರ ನೀವು ಬರೋಬ್ಬರಿ 80% ಹಣವನ್ನ ಡ್ರಾ ಮಾಡ್ಕೋಬಹುದು, ಪೆನ್ಷನ್‌ಗೆ ಬರೀ 20% ಇಟ್ಟರೆ ಸಾಕು. ಕೇಳೋಕೆ ಇದು ಖುಷಿ ಸುದ್ದಿ ಅನ್ನಿಸಿದ್ರೂ, ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ!

80% ಹಣ ವಾಪಸ್ ಪಡೆಯೋ ಚಾನ್ಸ್, ಆದ್ರೆ ಲಾಭನಾ?

ಹೊಸ ನಿಯಮದ ಪ್ರಕಾರ ಪೆನ್ಷನ್‌ಗಾಗಿ 40% ಹಣ ಇಡಲೇಬೇಕು ಅನ್ನೋ ಕಡ್ಡಾಯ ಇಲ್ಲ. ನೀವು ಬೇಕಿದ್ರೆ 20% ಹಣವನ್ನು ಮಾತ್ರ ಪೆನ್ಷನ್ ಸ್ಕೀಮ್‌ಗೆ ಹಾಕಿ, ಉಳಿದ 80% ಹಣವನ್ನ ಮನೆಗೋ, ಮಕ್ಕಳ ಮದುವೆಗೋ ಬಳಸಬಹುದು. ಆದ್ರೆ ನೆನಪಿರಲಿ, ನೀವು ಪೆನ್ಷನ್‌ಗೆ ಅಂತ ಇಡೋ ಹಣ ಕಡಿಮೆ ಆದ್ರೆ, ತಿಂಗಳು ತಿಂಗಳು ಕೈಗೆ ಬರೋ ಪೆನ್ಷನ್ ಕೂಡ ಕಮ್ಮಿ ಆಗುತ್ತೆ. ಒಂದ್ವೇಳೆ ನನಗೆ ಸೇಮ್ ಪೆನ್ಷನ್ ಬೇಕು, ಆದ್ರೆ ನಾನು 20% ಮಾತ್ರ ಹೂಡಿಕೆ ಮಾಡ್ತೀನಿ ಅಂದ್ರೆ, ನೀವು ಈಗಲೇ ದುಪ್ಪಟ್ಟು ಹಣ ಉಳಿಸಬೇಕಾಗುತ್ತೆ.

35ರ ಹರೆಯದವರಿಗೆ ಒಂದು ಸಿಂಪಲ್ ಲೆಕ್ಕಾಚಾರ

ವಿಷಯ ಅರ್ಥ ಆಗ್ಬೇಕು ಅಂದ್ರೆ ಈ ಉದಾಹರಣೆ ನೋಡಿ. ಒಬ್ಬ ವ್ಯಕ್ತಿಗೆ ಈಗ 35 ವರ್ಷ ಅನ್ಕೊಳಿ. ಅವರು 60ಕ್ಕೆ ರಿಟೈರ್ ಆಗ್ತಾರೆ. ಅವರಿಗೆ ರಿಟೈರ್ಡ್ ಆದ್ಮೇಲೆ ತಿಂಗಳಿಗೆ 1 ಲಕ್ಷ ರೂಪಾಯಿ (ವರ್ಷಕ್ಕೆ 12 ಲಕ್ಷ) ಪೆನ್ಷನ್ ಬೇಕು. ಹಾಗಿದ್ರೆ ಅವರು ತಿಂಗಳಿಗೆ ಎಷ್ಟು ಉಳಿಸಬೇಕು ಅನ್ನೋದು ಅವರು ಆಯ್ಕೆ ಮಾಡಿಕೊಳ್ಳುವ ಪ್ಲಾನ್ ಮೇಲೆ ನಿರ್ಧಾರ ಆಗುತ್ತೆ.

ಪ್ಲಾನ್ 1: ಸೇಫ್ ಆಟ ಆಡೋರಿಗೆ ಕಮ್ಮಿ ಹೂಡಿಕೆ ಸಾಕು

ಒಬ್ಬ ವ್ಯಕ್ತಿ ನನಗೆ ಬಡ್ಡಿ ಆಸೆ ಬೇಡ, ರಿಸ್ಕ್ ಬೇಡ, 80% ಹಣವನ್ನ ಪೆನ್ಷನ್‌ಗೇ ಹಾಕ್ತೀನಿ (Annuity) ಅಂದ್ರೆ ಅವರಿಗೆ ಹೊರೆ ಕಮ್ಮಿ. ಅವರು ತಿಂಗಳಿಗೆ 19,000 ರೂ. ಹೂಡಿಕೆ ಮಾಡಿದ್ರೆ ಸಾಕು. 25 ವರ್ಷದಲ್ಲಿ ಸುಮಾರು 2.5 ಕೋಟಿ ಜಮೆ ಆಗುತ್ತೆ. ಅದ್ರಲ್ಲಿ 2 ಕೋಟಿ ಪೆನ್ಷನ್‌ಗೆ ಹೋದ್ರೆ, ಆರಾಮಾಗಿ ತಿಂಗಳಿಗೆ 1 ಲಕ್ಷ ಪೆನ್ಷನ್ ಬಡ್ಡಿ ರೂಪದಲ್ಲಿ ಬರುತ್ತೆ.

ಪ್ಲಾನ್ 2: ಹಳೆ ಸ್ಟೈಲ್ ಬೇಕು ಅನ್ನೋರಿಗೆ ಡಬಲ್ ಖರ್ಚು

ಇಲ್ಲ, ನನಗೆ ಕೈಗೆ ಸ್ವಲ್ಪ ದುಡ್ಡು ಬೇಕು, ನಾನು ಹಳೆ ರೂಲ್ಸ್ ಪ್ರಕಾರ 40% ಮಾತ್ರ ಪೆನ್ಷನ್‌ಗೆ ಇಡ್ತೀನಿ ಅಂದ್ರೆ ಕಷ್ಟ ಜಾಸ್ತಿ. ಯಾಕಂದ್ರೆ ಪೆನ್ಷನ್‌ಗೆ ಹೋಗೋ ಮೊತ್ತ ಕಮ್ಮಿ ಆಗೋದ್ರಿಂದ, ನೀವು ಒಟ್ಟು ಸೇರಿಸಬೇಕಾದ ಹಣ ಡಬಲ್ ಆಗುತ್ತೆ. ಆಗ ನೀವು ತಿಂಗಳಿಗೆ ಬರೋಬ್ಬರಿ 38,000 ರೂ. ಉಳಿತಾಯ ಮಾಡ್ಲೇಬೇಕು. ಆಗ ನಿಮ್ಮ ಒಟ್ಟು ಫಂಡ್ 5 ಕೋಟಿ ಆದ್ರೆ ಮಾತ್ರ ತಿಂಗಳಿಗೆ 1 ಲಕ್ಷ ಪೆನ್ಷನ್ ಸಿಗೋದು.

ಪ್ಲಾನ್ 3: ಹೊಸ ರೂಲ್ಸ್ ಫಾಲೋ ಮಾಡಿದ್ರೆ ಜೇಬಿಗೆ ಕತ್ತರಿ!

ಇದು ಸಖತ್ ಶಾಕಿಂಗ್ ವಿಷ್ಯ. ಹೊಸ ರೂಲ್ಸ್ ಪ್ರಕಾರ ನಾನು ಬರೀ 20% ಮಾತ್ರ ಪೆನ್ಷನ್‌ಗೆ ಇಡ್ತೀನಿ, 80% ದುಡ್ಡು ವಾಪಸ್ ತಗೋತೀನಿ, ಆದ್ರೂ ನನಗೆ ತಿಂಗಳಿಗೆ 1 ಲಕ್ಷ ಪೆನ್ಷನ್ ಬೇಕು ಅಂದ್ರೆ ಅದು ಸುಲಭ ಅಲ್ಲ. ಇದಕ್ಕಾಗಿ ನೀವು ಈಗಿನಿಂದಲೇ ತಿಂಗಳಿಗೆ ಬರೋಬ್ಬರಿ 76,000 ರೂ. ಹೂಡಿಕೆ ಮಾಡ್ಬೇಕು! ಆಗ ಮಾತ್ರ ನಿಮ್ಮ ಹತ್ರ 9.45 ಕೋಟಿ ಸೇರುತ್ತೆ. ಅಷ್ಟು ದೊಡ್ಡ ಮೊತ್ತ ಇದ್ರೆ ಮಾತ್ರ 20% ಹಣದಲ್ಲಿ 1 ಲಕ್ಷ ಪೆನ್ಷನ್ ಜನರೇಟ್ ಆಗೋದು.

ಎನ್‌ಪಿಎಸ್ ಅಸಲಿ ಆಟ ಏನು?

ಎನ್‌ಪಿಎಸ್ ಅನ್ನೋದು ಷೇರು ಮಾರುಕಟ್ಟೆ ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತೆ. ಕಾಂಪೌಂಡಿಂಗ್ (Compounding) ಪವರ್‌ನಿಂದ ನಿಮ್ಮ ಹಣ ಬೆಳೆಯುತ್ತೆ. 60 ವರ್ಷ ಆದ್ಮೇಲೆ ನೀವು ಡ್ರಾ ಮಾಡೋ ಹಣವನ್ನ ‘ವರ್ಷಾಶನ’ ಅಥವಾ ಆನ್ಯುಟಿ ಸ್ಕೀಮ್‌ಗೆ ಹಾಕಿದ್ರೆ ಮಾತ್ರ ಲೈಫ್ ಲಾಂಗ್ ಪೆನ್ಷನ್ ಬರೋದು.

ಕೊನೆಗೆ ಏನು ಮಾಡೋದು ಬೆಸ್ಟ್?
ಹೊಸ ನಿಯಮ ನಿಮಗೆ ಫ್ಲೆಕ್ಸಿಬಿಲಿಟಿ ಕೊಡುತ್ತದೆ ನಿಜ. ಅಂದರೆ ತುರ್ತು ಅಗತ್ಯಕ್ಕೆ ದೊಡ್ಡ ಮೊತ್ತ ಕೈಗೆ ಸಿಗುತ್ತದೆ. ಆದರೆ, ನಿವೃತ್ತಿ ಜೀವನ ನೆಮ್ಮದಿಯಾಗಿರಬೇಕು, ತಿಂಗಳು ತಿಂಗಳು ಕೈ ತುಂಬಾ ಪೆನ್ಷನ್ ಬರಬೇಕು ಅಂದರೆ, ನೀವು ಬರೀ 20% ಇಟ್ಟರೆ ಸಾಲದು. ಹೆಚ್ಚು ಹಣವನ್ನು ಆನ್ಯುಟಿಗೆ ಹಾಕಿದಷ್ಟೂ, ಈಗ ನೀವು ಮಾಡಬೇಕಾದ ಹೂಡಿಕೆ ಹೊರೆ ಕಮ್ಮಿ ಇರುತ್ತದೆ. ಸ್ಮಾರ್ಟ್ ಆಗಿ ಯೋಚಿಸಿ ನಿರ್ಧಾರ ಮಾಡಿ!

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology