ಬೆಂಗಳೂರು.30.ಡಿಸೆಂಬರ್.25: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 2 ತಿಂಗಳಿಗೊಮ್ಮೆ ಪೋಷಕರ-ಶಿಕ್ಷಕರ ಸಭೆ ನಡೆಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.
ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ ಶಿಕ್ಷಕರ ಸಭೆಯನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಮಹಾಸಭೆಯನ್ನು ನಡೆಸುವ ಬಗ್ಗೆ ಉಲ್ಲೇಖಿತ ಸುತ್ತೋಲೆಯೊಂದಿಗೆ ನೀಡಲಾಗಿರುವ ಸೂಚನೆಗಳು ಮತ್ತು ಅನುಬಂಧದಲ್ಲಿ ತಿಳಿಸಲಾಗಿರುವ ವೇಳಾಪಟ್ಟಿಯಂತೆ ಹಾಗೂ ನವೆಂಬರ್ 14ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಪೋಷಕರ-ಶಿಕ್ಷಕರ ಮಹಾ ಸಭೆಯಯನ್ನು ಅಯೋಜಿಸಿ ನಡೆಸಲಾಗಿದೆ.
ಇದೇ ರೀತಿ ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಸಭೆಯನ್ನು ಕಡ್ಡಾಯವಾಗಿ ನಡೆಸಲು ಈ ಕೆಳಕಂಡ ದಿನಾಂಕಗಳನ್ನು ನಿಗಧಿಪಪಡಿಸಿದೆ ಹಾಗೂ ಈ ಕೆಳಕಂಡ ನಮೂನೆಯಂತೆ ವರದಿಯನ್ನು ಕ್ರೋಡಿಕರಿಸಿ ಈ ಕಛೇರಿಗೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದ ಎಲ್ಲಾ ಆಧಿಕಾರಿಗಳಿಗೆ ಅಗತ್ಯ ಕ್ರಮವಹಿಸಲು ತಿಳಿಸಲಾಗಿದೆ (ಸುತ್ತೋಲೆ ಲಗತ್ತಿಸಿದೆ).







Any questions related to ಸರ್ಕಾರಿ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಸಭೆ ನಡೆಸುವುದು ಕಡ್ಡಾಯ?