Home » ಲೈವ್ ನ್ಯೂಸ್ » ಚಿಟಗುಪ್ಪಾ ಪುರಸಭೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಅಹ್ವಾನ

ಚಿಟಗುಪ್ಪಾ ಪುರಸಭೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಅಹ್ವಾನ

Facebook
X
WhatsApp
Telegram

ಬೀದರ.29.ಡಿಸೆಂಬರ್.25:- ಚಿಟಗುಪ್ಪಾ ಪುರಸಭೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಜನಾಂಗದವರಿಗಾಗಿ ವಿವಿಧ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಟಗುಪ್ಪಾ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೌಲಭ್ಯಗಳ ವಿವರ: ಇತರೆ ಹಿಂದುಳಿದ ಬಡ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ಸಹಾಯಧನ, ಪರಿಶಿಷ್ಟ ಜಾತಿ ಜನಾಂಗದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಹಾಯಧನ, ಪರಿಶಿಷ್ಟ ಜಾತಿ ಜನಾಂಗದವರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಧನ, ಅಂತ್ಯ ಸಂಸ್ಕಾರಕ್ಕಾಗಿ ಸಹಾಯಧನ, ಪರಿಶಿಷ್ಟ ಪಂಗಡ ಜನಾಂಗದವರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಧನ,  ಹೋಲಿಗೆ ಯಂತ್ರ ಒದಗಿಸುವುದು.

ಅರ್ಹ ಇಚ್ಛೆಯುಳ್ಳವರು ದಿನಾಂಕ: 15-01-2026 ರೊಳಗಾಗಿ ತಾಲ್ಲೂಕು ಸರ್ಕಾರಿ ವೈದ್ಯಾಧಿಕಾರಿಗಳ ದೃಢೀಕರಣ ದಾಖಲಾತಿಗಳೊಂದಿಗೆ ಪುರಸಭೆ ಚಿಟಗುಪ್ಪಾ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ವೆಬ್‍ಸೈಟ್ www.Chittaguppatown.mrc.gov.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology