Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರಿಗೆ ಪಿಎಫ್ ಸೇವಾವರುಷಗಳನ್ನು ಆಧಾರಿಸಿ ಇಪ್ಪತ್ತೈದು ಲಕ್ಷ ಇಡಿಗಂಟು ನೀಡ ಬೇಕು

ಅತಿಥಿ ಉಪನ್ಯಾಸಕರಿಗೆ ಪಿಎಫ್ ಸೇವಾವರುಷಗಳನ್ನು ಆಧಾರಿಸಿ ಇಪ್ಪತ್ತೈದು ಲಕ್ಷ ಇಡಿಗಂಟು ನೀಡ ಬೇಕು

Facebook
X
WhatsApp
Telegram



ಶಿಕಾರಿಪುರ.28.ಡಿಸೆಂಬರ್.25: ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಳೆದ ಎರಡು ಮೂರು ದಶಕಗಳಿಂದ ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕನಿಷ್ಠ ಗೌರವಧನ ಪಡೆದು ಸೇವಾಸಲ್ಲಿಸುತ್ತಾ ಬಂದಿದ್ದಾರೆ.

ಅಂತಹವರಿಗೆ ನಿಯಮಾನುಸಾರ ಯಾವುದೇ ಗೌರವಧನ ಹೆಚ್ಚಳವಾಗಿರಲಿಲ್ಲ. ಈ ಸಂಬಂಧ ದಶಕಗಳಿಂದ ಗೌರವಧನ ಹೆಚ್ಚಳ, ಪಿಎಫ್ ರೂಪದಲ್ಲಿ  ಕನಿಷ್ಠ  ಅವರ ಸೇವಾವರುಷಗಳನ್ನು ಆಧಾರಿಸಿ ಇಪ್ಪತ್ತೈದು ಲಕ್ಷ ಇಡಿಗಂಟು ನೀಡ ಬೇಕು, ವಾರ್ಷಿಕ ಮೆಡಿಕಲ್ ಸೌಲಭ್ಯ ನೀಡಬೇಕು. ಸೇವೆಖಾಯಂ ಮಾಡುವ ತನಕ ಗೌರವಧನ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟು ದಶಕಗಳ ಹೋರಾಟ ಗಮನಿಸಿ, ದಿನಾಂಕ :1-12-2024 ರಂದು ಬೆಂಗಳೂರು ಉನ್ನತ ಶಿಕ್ಷಣ ಪರಿಷತ್ತು ಕಛೇರಿಯಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರ ಸಭೆ ಕರೆಯಲಾಗಿತ್ತು.

ಅಂದಿನ ಸಭೆಯಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ
ಸಮಿತಿ ವಿವಿಧ ರಾಜ್ಯಗಳಲ್ಲಿ ಗೌರವಧನ, ಪಿಎಫ್, ಸೌಲಭ್ಯ ನೀಡುತ್ತಿರುವ ಅಗತ್ಯ ಪೂರಕ ದಾಖಲೆ ನೀಡಿ ಸರ್ಕಾರಕ್ಕೆ ನೂರಾರು ಪ್ರಮುಖರು ಒತ್ತಡ ಹಾಕಿದ್ದರ ಫಲ, ಗೌರವಧನ ಹೆಚ್ಚಳ, ಅರವತ್ತು ವರುಷ ನಂತರ ಹತ್ತು ವರುಷ ಸೇವೆಸಲ್ಲಿಸಿ ಅಕಾಲಿಕ ನಿಧನ ಹೊಂದಿದ್ದರೆ ಅಂತಹವರಿಗೆ ಸಹ 5 ಲಕ್ಷ ಇಡಿಗಂಟು, ನೀಡಲು ಸರ್ಕಾರ ದಿನಾಂಕ 29-12-2024 ರಂದು ಅಧಿಕೖತ ಘೋಷಣೆ ಮಾಡಲಾ ಗಿತ್ತು.

ಈಗ ಆಡಳಿತಾತ್ಕವಾಗಿ ಇಂದು 45  ಅತಿಥಿ ಉಪನ್ಯಾಸಕ
ರಿಗೆ ಅಧಿಕೃತವಾಗಿ ಇಡಿ ಗಂಟು ಬಿಡುಗಡೆ ಮಾಡಿದೆ. ಇದಕ್ಕೆ ಶ್ರಮಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಸುಧಾಕರ್ ರವರಿಗೆ, ಹಾಗೂ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ, ರಾಜ್ಯದ ಸಮಸ್ತ ಅತಿಥಿ ಉಪನ್ಯಾಸಕರ ಪರವಾಗಿ ಸಮನ್ವಯ ಸಮಿತಿ ಧನ್ಯವಾದ ಗಳನ್ನು ಅರ್ಪಿಸುತ್ತದೆ.

ಹಾಗೆ 2025-26 ನೇ ಸಾಲಿಗೆ ಯುಜಿಸಿ ಅರ್ಹತೆ ಪಡೆಯದ  ಸುಮಾರು ಈಗ  4000, ಸಾವಿರ ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕ ರು ಹತ್ತಾರು ವರುಷಗಳಿಂದ ಸೇವೆ ಸಲ್ಲಿಸಿದವರನ್ನು ಸೇವೆಯಿಂದ ಕೈಬಿಡ ಲಾಗಿದೆ.

ಇದನ್ನೇ ನಂಬಿದ ಸಾವಿರಾರು ಕುಟುಂಬಗಳು ಅಕ್ಷರಶಃ ಸಹ ಬೀದಿಗೆ ಬಿದ್ದಿದಾರೆ.

ಈಗಾಗಲೇ ಸಮಿತಿಯು ಹಲವು ಹಂತದಲ್ಲಿ ಸಮಿತಿಯು ಮುಖ್ಯ ಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಸೇವೆಯಿಂದ ಕೈ ಬಿಡದಂತೆ
ಒತ್ತಾಯಸಲಾಗಿತ್ತು.

ತದನಂತರ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ
ಮನವಿ ಮಾಡಿದಾಗ ಇದು ನ್ಯಾಯಲದ ತೀರ್ಪು ಆಗಿರುವುದ ರಿಂ ದ, ಹಲವು ವರುಷುಗಳಿಂದ ಸೇವೆ ಸಲ್ಲಿಸಿದವರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೂಡಲೇ ಕಾನೂನು ಪ್ರಕ್ರಿಯೆ ಆರಂಬಿಸಬೇಕು. ನ್ಯಾಯಲದ ತೀರ್ಪು ಕಾದಿರಿಸಿ ಅಲ್ಲಿಯತನಕ ಮಾನವೀಯತೆ ದೃಷ್ಟಿಯಲ್ಲಿ ನಾನ್ ಟೀಚಿಂಗ್ ಸ್ಟಾಪ್ ನಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ತೆಗೆದುಕೊಳ್ಳಬೇಕು.

ಇಲ್ಲದೇ ಹೋದರೆ “ಬದುಕುವ ಉದ್ಯೋಗದ ಹಕ್ಕಿನ ಅಡಿ” ಸಾವಿರಾರು ಅತಿಥಿ ಉಪನ್ಯಾ ಸಕರ ಕುಟುಂಬಗಳ ಪರವಾಗಿ
ಹೋರಾಟ ಅನಿವಾರ್ಯ.

ಡಾ. ಸೋಮಶೇಖರ್. ಎಚ್. ಶಿಮೊಗ್ಗಿ.
ರಾಜ್ಯಾಧ್ಯಕ್ಷರು
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ
ಸಮಿತಿ( ರಿ)

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology