Home » ಲೈವ್ ನ್ಯೂಸ್ » ಕಮಲನಗರ ಅಭಿವೃದ್ಧಿಗೆ 20 ಕೋಟಿ ಆನುದಾನ: ಶಾಸಕ ಪ್ರಭು ಚವ್ಹಾಣ

ಕಮಲನಗರ ಅಭಿವೃದ್ಧಿಗೆ 20 ಕೋಟಿ ಆನುದಾನ: ಶಾಸಕ ಪ್ರಭು ಚವ್ಹಾಣ

Facebook
X
WhatsApp
Telegram


ಔರಾದ.27.ಡಿಸೆಂಬರ್.25 ಕಮಲನಗರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪದೊoದಿಗೆ ಕೆಲಸ ಮಾಡುತ್ತಿದ್ದು, ಪ್ರತಿವರ್ಷ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ವಿವಿಧ ಅಭಿವೃದ್ದಿ ಕೆಲಸಗಳನ್ನು ನಿರಂತರ ಕೈಗೊಳ್ಳುತ್ತಿದ್ದು, ಈ ಬಾರಿಯೂ ಸುಮಾರು 20 ಕೋಟಿ ಅನುದಾನ ತಂದಿದ್ದೇನೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭಿ ಬಿ.ಚವ್ಹಾಣ ಅವರು ತಿಳಿಸಿದರು.

ಕಮಲನಗರದಲ್ಲಿ ಡಿ.27ರಂದು ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು. ಕಮಲನಗರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿದ್ದು, ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಕಮಲನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಾನಾ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದು, ಇದೀಗ ಸುಮಾರು 20 ಕೋಟಿ ಅನುದಾನ ಒದಗಿಸಿದ್ದೇನೆ. ಇದರಲ್ಲಿ ಇದರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಸುಮಾರು 2.5 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.



ಕಮಲನಗರದಿಂದ ಮುರ್ಗ್(ಕೆ) ವರೆಗೆ 1.56 ಕೋಟಿಯ ರಸ್ತೆ, 99 ಲಕ್ಷದ ಹರಳಯ್ಯಾ ಸಮುದಾಯ ಭವನ, ವಿಠಲ ಮಂದಿರದ ಬಳಿ 20 ಲಕ್ಷದ ಸಮುದಾಯ ಭವನ, ಬಸವೇಶ್ವರ ವೃತ್ತದಿಂದ ಚಿಕಮುರ್ಗೆ ಮನೆವರೆಗೆ, ಮಲ್ಲು ನಾವಡೆ ಮನೆಯಿಂದ ನಾಗೋಬಾ ಮಂದಿರ, ಬಜಾಜ ಶೋರೂಮ್‌ನಿಂದ ಬಾಲಾಜಿ ಬಿರಾದಾರ ಮನೆ, ರಾಷ್ಟ್ರೀಯ ಹೆದ್ದಾರಿಯಿಂದ ಅನೀಲ ಬಿರಾದಾರ ಮನೆವರೆಗೆ, ರಾಷ್ಟ್ರೀಯ ಹೆದ್ದಾರಿಯಿಂದ ಧರಣೆ ಮನೆ, ಗ್ರಾಮ ಪಂಚಾಯಿತಿಯಿoದ ರೈಲ್ವೇ ಗೇಟ್‌ವರೆಗೆ ಗ್ರಾಮ ಪಂಚಾಯಿತಿಯಿoದ ನಾವಡೆ ಮನೆ, ಶಿವರಾಜ ಬಿರಾದಾರ ನಿವೇಶನದಿಂದ ಸಂಜೀವಿನಿ ಶಾಲೆ, ಪಂಡಿತ ಪಾಟೀಲ ಮನೆಯಿಂದ ಕೃಷಿ ಇಲಾಖೆ ಕಚೇರಿವರೆಗೆ 20 ಲಕ್ಷ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಸರ್ಕಾರಿ ಶಾಲೆಯಲ್ಲಿ ಬಾಲಕಿಯರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ 5.20 ಲಕ್ಷ ವೆಚ್ಚದ ಶೌಚಾಲಯಗಳು, ಬಾಲಕಿಯರ ವಸತಿ ನಿಲಯ ಮತ್ತು ಸಾರ್ವಜನಿಕ ಪ್ರದೇಶದಲ್ಲಿ 3.50 ಲಕ್ಷದ ಎರಡು ಹೈಮಾಸ್ಟ್ ವಿದ್ಯುತ್ ದೀಪಗಳು ಸೇರಿದಂತೆ ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಹಾಗೆಯೇ ರಂಡ್ಯಾಳನಲ್ಲಿ ಡೋಣಗಾಂವನಿoದ ಹಕ್ಯಾಳವರೆಗೆ 2.2 ಕೋಟಿಯ ರಸ್ತೆ, ಹಕ್ಯಾಳನಲ್ಲಿ 50 ಲಕ್ಷದ ಶಾಲಾ ಕಟ್ಟಡ ಕಾಮಗಾರಿ, 3.5 ಲಕ್ಷದ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ, ಮುರುಗ(ಕೆ)ನಲ್ಲಿ ಮುರುಗ(ಕೆ) ನಂದ ಕಮನಗರ ವರೆಗೆ 1.56 ಕೋಟಿಯ ರಸ್ತೆ ಕಾಮಗಾರಿ, 10 ಲಕ್ಷದ ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಚಾಲ್ತಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ದೂರುಗಳು ಬಂದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗತೆ ಎಚ್ಚರಿಕೆ ನೀಡಿದರು. ಡೋಣಗಾಂವ ವಾಡಿ, ರಂಡ್ಯಾಳ, ಹಕ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರುಗ(ಕೆ) ಹಾಗೂ ಬಾಳೂರ ಗ್ರಾಮಗಳಲ್ಲಿ ಗ್ರಾಮ ಸಂಚಾರ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ವಿದ್ಯುತ್, ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಲಾಯಿತು.

ಗ್ರಾಮ ಸಂಚಾರದ ಸಂದರ್ಭದಲ್ಲಿ ಶಾಸಕರು ವಿವಿಧ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿದರು. ಡೋಣಗಾಂವ ವಾಡಿ, ರಂಡ್ಯಾಳ ಹಾಗೂ ಮತ್ತಿತರೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವುದನ್ನು ಕಂಡು ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಅಗತ್ಯವಿರುವ ಕಡೆಗಳಲ್ಲಿ ವರ್ಗಾವಣೆ ಮಾಡಿ ಇಲ್ಲವೇ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿ ಎಂದು ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಜೆಸ್ಕಾಂ ಎಇಇ ರವಿ ಕಾರಬಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಸಣ್ಣ ನೀರಾವರಿ ಇಲಾಖೆಯ ಎಇಇ ಸಂಗಮೇಶ ಖಳೂರೆ, ಪಿಎಂಜಿಎಸ್‌ವೈ ಎಇಇ ಸುಭಾಷ ವಾಗಮಾರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ಸಂಗಮೇಶ ಖಳೂರೆ, ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾನಂದ ವಡ್ಡೆ, ರಂಗಾರಾವ ಜಾಧವ, ಶಿವಕುಮಾರ ಜುಲ್ಫೆ, ಯೋಗೇಶ ಪಾಟೀಲ, ಕಿರಣ ಪಾಟೀಲ, ಗಣೇಶ ಕಾರೆಗಾವೆ, ಬಂಟಿ ರಾಂಪೂರೆ, ವಿಜಯಕುಮಾರ ದೇಶಮುಖ, ಮಲ್ಲು ನವಾಡೆ, ರಾಜಕುಮಾತ ಅಲಬಿದೆ, ಪ್ರವೀಣ ಕಾರಬಾರಿ, ಭರತ ಕದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology